
ಚೆಟ್ಟಳ್ಳಿ ನ.25 NEWS DESK : ಚೆಟ್ಟಳ್ಳಿಯಲ್ಲಿ ವಾರ್ಷಿಕ ನಾಗರ ಪಂಚಮಿಯನ್ನು ಶ್ರದ್ದಾಭಕ್ತಿಯಿಂದ ಅಚರಿಸಲಾಯಿತು. ಅರ್ಚಕರಾದ ರಾಧಕೃಷ್ಣ ಭಟ್ ಅವರು ಪುತ್ತರಿರ ಐನ್ ಮನೆಯ ಸಮೀಪದ ಪುರಾತನ ನಾಗ ನೆಲೆಯನ್ನು ಶುದ್ದಗೊಳಿಸಿ ಹೂವು, ಹಣ್ಣು ಪಾಯಸದ ಅರ್ಪಣೆಯೊಂದಿಗೆ ಮಹಾಪೂಜೆಯನ್ನು ನೆರವೇರಿಸಿದರು. ವರ್ಷಂಪ್ರತಿ ಪಂಚಮಿಯಂದು ನಾಗನೆಲೆಯಲ್ಲಿ ಪೂಜೆ ಸಲ್ಲಿಸಲ್ಲಿಸಲಾಗುತ್ತಿದ್ದು, ಎಲ್ಲರಿಗೂ ಒಳಿತನ್ನು ಮಾಡಲೆಂದು ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಬೇಡಿಕೊಂಡರು. ನಂತರ ಪ್ರಸಾದ ವಿತರಣೆ ನೆರವೇರಿತು.









