


ವಿರಾಜಪೇಟೆ ನ.26 NEWS DESK : ವಿರಾಜಪೇಟೆ-ಮಾಕುಟ್ಟ ರಸ್ತೆ ಬಂದ್ ಮಾಡಿ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೊಡಗಿನ ಗಡಿ ಪ್ರದೇಶದಲ್ಲಿ ಲೋಕೋಪಯೋಗಿ ರಸ್ತೆಯು ಸಂಚರಿಲು ಯೋಗ್ಯವಿಲ್ಲ, ತಕ್ಷಣ ಮುಖ್ಯ ರಸ್ತೆಯ ಕಾಮಗಾರಿ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೊಡಗಿನ ಬಹುತೇಕ ಮುಖ್ಯ ರಸ್ತೆಗಳೆ ಹಾಳಾಗಿದೆ ಎಲ್ಲಾ ರಸ್ತೆಯನ್ನು ಪ್ರತಿಭಟನೆ ಮೂಲಕವೇ ಹಂತ ಹಂತವಾಗಿ ನಮ್ಮ ಪಕ್ಷದ ವತಿಯಿಂದ ನಡೆಸುತ್ತೇವೆ ಎಂದು ದಿವಿಲ್ ಕುಮಾರ್ ತಿಳಿಸಿದರು. ಪ್ರತಿಭಟನೆಯಲ್ಲಿ ವಿರಾಜಪೇಟೆ ತಾಲೂಕು, ಸೋಮವಾರ ಪೇಟೆ ತಾಲ್ಲೂಕು, ಮಡಿಕೇರಿ ತಾಲ್ಲೂಕಿನ ಪದಾಧಿಕಾರಿಗಳು ಭಾಗವಹಿಸಿದ್ದರು. ವಿರಾಜಪೇಟೆ ತಾಲೂಕಿನ ತಹಶಿಲ್ದಾರರ್ ಪ್ರವೀಣ್ ಅವರ ಪರವಾಗಿ ಪ್ರಭಾರ ತಹಶಿಲ್ದಾರರ್ ಪ್ರದೀಪ್ ಹಾಗೂ ಶಿರಸ್ತೇದಾರ್ ಪುರುಷೋತ್ತಮ ಮತ್ತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಲೋಕೇಶ್ ಹಾಗೂ ಪುನೀತ್ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮುಂದಿನ ಕ್ರಮವನ್ನು ಅನುಸರಿಸುತ್ತೇವೆ ಎಂದು ತಿಳಿಸಿದರು. ಕೆಲಕಾಲ ವಿರಾಜಪೇಟೆ_ಮಾಕುಟ್ಟ ರಸ್ತೆ ತಡೆಯಿಂದ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಯಿತು.









