Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*
  • *ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*
  • *ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*
  • *ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶಂಸುಲ್ ಉಲಮಾ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ : ವಿದ್ಯಾರ್ಥಿಗಳ ಸಾಧನೆಗೆ ಗಣ್ಯರ ಮೆಚ್ಚುಗೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶಂಸುಲ್ ಉಲಮಾ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ : ವಿದ್ಯಾರ್ಥಿಗಳ ಸಾಧನೆಗೆ ಗಣ್ಯರ ಮೆಚ್ಚುಗೆ*

ನವೆಂಬರ್ 27, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ನ.27 NEWS DESK : ಪೆರುಂಬಾಡಿಯಲ್ಲಿರುವ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವವು  ವಿವಿಧ ಸಾಂಸ್ಕೃತಿಕ, ಆರೋಗ್ಯ, ಪರಿಸರ ಕಾಳಜಿ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು. ಎಸ್ ಇ ಎ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ಬಿಂದು ಉದ್ಘಾಟಿಸಿ ಮಾತನಾಡಿ  ಈ ಹಿಂದೆ ಅದೆಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಲವು ಸಮಸ್ಯೆಗಳ ನಡುವೆಯೂ ಶಿಕ್ಷಣ ಕಲಿತು ಉನ್ನತ ಹುದ್ದೆಯೊಂದಿಗೆ ಸೇವಾ ಸಾಧನೆ ಮೂಲಕ ಗುರುತಿಸಿಕೊಂಡಿದ್ದಾರೆ.  ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಶಾಲೆ ಕಾಲೇಜುಗಳಲ್ಲಿ ಪೂರಕವಾದ ವಾತಾವರಣ ಇದ್ದು,  ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.  ಬ್ಲಾಕ್ ಸಂಪನ್ಮೂಲ ವ್ಯಕ್ತಿ ಶೈಲಾ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಮಹಿಳಾ ಕಾಲೇಜು ಪ್ರಾರಂಭ ಮಾಡಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವು ನೀಡಿ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾಜಿ ಸೈನಿಕ ಸಲಾಂ ಮಾತನಾಡಿ, ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಸಂಸ್ಥೆ ನೂರಾರು ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡುತ್ತಿದೆ ಬಡ ನಿರ್ಗತಿಕ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ವೃತ್ತಿ ಕೌಶಲ್ಯ ತರಬೇತಿಗಳನ್ನು ನೀಡಿ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.  ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಸಂಸ್ಥೆಗೆ ದಾನಿಗಳು ಹೆಚ್ಚಿನ ನೆರವು ನೀಡಬೇಕೆಂದರು. ಸಂಸ್ಥೆಯ ಪ್ರಾಂಶುಪಾಲೆ ಭಾನುಮತಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ಶೈಕ್ಷಣಿಕ ಸಾಲಿನಲ್ಲಿ ಶೇ.100 ರಷ್ಟು ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಸಾಧನೆ ತೋರಿದ್ದಾರೆ. ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳಿದ್ದು, ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಲು ಪೋಷಕರು ಮುಂದಾಗಬೇಕೆಂದರು. ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥ ಸಿಪಿಎಂ ಬಶೀರ್ ಹಾಜಿ ಮಾತನಾಡಿ, ಅನಾಥ ನಿರ್ಗತಿಕ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ಉನ್ನತ ಶಿಕ್ಷಣವು ನೀಡುತ್ತಿದ್ದು,  ಇದರಿಂದ ನೂರಾರು ಹೆಣ್ಣು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ.  ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಆರೋಗ್ಯ ಕಾಳಜಿ, ಪರಿಸರ ಜಾಗೃತಿ, ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಶಿಕ್ಷಣದ ಮಹತ್ವ, ಹಿರಿಯರಿಗೆ ಗೌರವ, ತಂದೆ ತಾಯಿಗಳೊಂದಿಗೆ ಪ್ರೀತಿ ವಾತ್ಸಲ್ಯ ಹಲವು ವೈವಿಧ್ಯಮಯ ನಾಟಕ, ನೃತ್ಯ
ಕಾರ್ಯಕ್ರಮ ನೆರೆದಿದ್ದವರ ಮನಸುರಗೊಳಿಸಿತು.  ದೇಶದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವಿವಿಧ ರಾಜ್ಯಗಳ
ನೃತ್ಯ ಪ್ರದರ್ಶನವು ಗಮನ ಸೆಳೆಯಿತು. ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ವೇದಿಕೆಯಲ್ಲಿ ಅರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಫಾತಿಮಾ, ಉಪಾಧ್ಯಕ್ಷ ಉಪೇಂದ್ರ, ಅಭಿವೃದ್ಧಿ ಅಧಿಕಾರಿ ಪ್ರಮೋದ್, ಕ್ಲಸ್ಟರ್ ಅಧಿಕಾರಿ ನೀಲನ, ಸಮಾಜ ಸೇವಕರಾದ ಅಬ್ದುಲ್ ಸತ್ತಾರ್, ಅಬ್ದುಲ್ ರಶೀದ್, ಅಶ್ರಫ್, ನಾಸರ್, ಜನಾಬ್ ರಶೀದ್ ಹಾಜಿ, ಅಬ್ದುಲ್ ಶುಕೂರ್, ಬಶೀರ್ ಹಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Related Posts

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.26: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್…

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*

ಸೆಪ್ಟೆಂಬರ್ 26, 2026

*ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*

ಸೆಪ್ಟೆಂಬರ್ 26, 2026

*ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*

ಸೆಪ್ಟೆಂಬರ್ 26, 2026

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.