
ಸುಂಟಿಕೊಪ್ಪ ಡಿ.1 NEWS DESK : 7ನೇ ಹೋಸಕೋಟೆ ನಿವಾಸಿ, ನಿವೃತ್ತ ಯೋಧ ವಚನ್ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. 7ನೇ ಹೋಸಕೋಟೆ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, 17 ವರ್ಷಗಳ ದೇಶಕ್ಕೆ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡು ಸ್ವ ಗ್ರಾಮಕ್ಕೆ ಆಗಮಿಸಿದ ಗ್ರಾಮದ ನಿವಾಸಿ ಕೊರಗಪ್ಪ ಹಾಗೂ ಗಿರಿಜ ದಂಪತಿಗಳ ಪುತ್ರ ವಚನ್ ಅವರನ್ನು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಸೌಮ್ಯಶ್ರೀ, ಕೆ.ಎಂ.ಮುಸ್ತಾಫ, ಮಧುಸೂದನ್, ಸಿದ್ಧೀಕ್, ವೇದಾವತಿ, ಕಮಲ ಚಂದ್ರಾವತಿ, ಪಂಚಾಯಿತಿ ಕಾರ್ಯದರ್ಶಿ ಸ್ವಾಮಿ ನಾಯಕ್, ಸಿಬ್ಬಂದಿಗಳಾದ ಪೂರ್ಣಿಮ, ಬೀನಾ, ಸರಿತಾ, ಹೇಮಾವತಿ ಮತ್ತಿತರರು ಇದ್ದರು.









