Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಅಹ್ಮದಿಯಾ ಮುಸ್ಲಿಂ ಜಮಾಅತ್ ನಿಂದ ಶಾಂತಿ ವಿಚಾರ ಸಂಕಿರಣ : ಶಾಂತಿಯುತ ಸಮಾಜ ನಿರ್ಮಾಣ ಶಿಕ್ಷಣದ ಭಾಗವಾಗಲಿ : ಡಾ.ದಯಾನಂದ ನಾಯ್ಕ್
ಇತ್ತೀಚಿನ ಸುದ್ದಿಗಳು ಕರ್ನಾಟಕ

ಅಹ್ಮದಿಯಾ ಮುಸ್ಲಿಂ ಜಮಾಅತ್ ನಿಂದ ಶಾಂತಿ ವಿಚಾರ ಸಂಕಿರಣ : ಶಾಂತಿಯುತ ಸಮಾಜ ನಿರ್ಮಾಣ ಶಿಕ್ಷಣದ ಭಾಗವಾಗಲಿ : ಡಾ.ದಯಾನಂದ ನಾಯ್ಕ್

ಡಿಸೆಂಬರ್ 2, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಂಗಳೂರು ಡಿ.2 NEWS DESK : ಜಾತಿ, ಧರ್ಮಗಳ ನಡುವೆ ತಿಕ್ಕಾಟವನ್ನು ಬಿಟ್ಟು ಪರಸ್ಪರ ಸಾಮರಸ್ಯದ ಬದುಕು ನಡೆಸುವ ಶಾಂತಿಯುತ ಸಮಾಜ ನಿರ್ಮಾಣ ಶಿಕ್ಷಣದ ಭಾಗವಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ದಯಾನಂದ ನಾಯ್ಕ್ ಹೇಳಿದರು. ಅಹ್ಮದಿಯಾ ಮುಸ್ಲಿಂ ಜಮಾಅತ್ ಮಂಗಳೂರು ಘಟಕದ ವತಿಯಿಂದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಜರುಗಿದ ‘ಜಾಗತಿಕ ಶಾಂತಿ ಸ್ಥಾಪನೆಯಲ್ಲಿ ಶಿಕ್ಷಣದ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಪ್ರಸ್ತುತ ವ್ಯವಸ್ಥೆಯಲ್ಲಿ ರಾಜಕೀಯ ಚದುರಂಗದ ಆಟಕ್ಕೆ ಯುವ ಜನಾಂಗ ಬಲಿಯಾಗುತ್ತಿದ್ದು, ದೇಶದಲ್ಲಿನ ಉಗ್ರವಾದ, ರಾಷ್ಟ್ರವಾದವು ಇತರರನ್ನು ಪ್ರೀತಿಯಿಂದ ನೋಡದೆ ರಾಷ್ಟ್ರ, ಸಮುದಾಯ, ಜಾತಿ ಮತ ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗಿದೆ. ರಾಷ್ಟ್ರ, ಸಮುದಾಯ ಎಂಬುವುದು ಬೇರೆಲ್ಲೂ ಇಲ್ಲ, ಅದು ನಮ್ಮೊಳಗೆ ಇದೆ.’ಈ ಮನಸ್ಸಿನ ಮುಸುರೆ ತೊಳೆಯಬೇಕು, ಗುಸು ಗುಸು ಬಿಡಬೇಕು’ ಎಂಬ ಸಂತರ ನುಡಿಯಂತೆ ಭೇದ ಭಾವ ಮರೆತು ಎಲ್ಲರೂ ಬಾಳುವ ‘ಸರ್ವರಿಗೂ ಸಮಬಾಳು, ಸಮಪಾಲು’ ಎನ್ನುವ ಸಮಾಜ ನಿರ್ಮಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ವಿವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಗೌಡ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ವಿಭಜನಕಾರಿ ವಾತಾವರಣ ಸೃಷ್ಟಿಯಾದಾಗ ಅವುಗಳನ್ನು ಪರಸ್ಪರ ಮಾತುಕತೆ ಮತ್ತು ಚರ್ಚೆಯ ಮೂಲಕ ಬಗೆಹರಿಸಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು. ಅಹ್ಮದಿಯಾ ಮುಸ್ಲಿಂ ಜಮಾಅತಿನ ಭಾರತ ಘಟಕದ ಮಾಜಿ ಮುಖ್ಯ ಕಾರ್ಯನಿರ್ವಾಹಕರಾದ ಶಿರಾಜ್ ಅಹ್ಮದ್ ಮಾತನಾಡಿ,  ಇಸ್ಲಾಂ ಧರ್ಮವು ಶಾಂತಿಯನ್ನು ಪ್ರತಿಪಾದಿಸುತ್ತದೆ.ಆದರೆ ಉನ್ನತ ಶಿಕ್ಷಣ ಪಡೆದ ಕೆಲವು ಮತಾಂಧರು ಧರ್ಮ,ದೇವರ ಹೆಸರಿನಲ್ಲಿ ಹತ್ಯೆ ಮಾಡುತ್ತಿದ್ದಾರೆ.ಇದು ಅತ್ಯಂತ ಖಂಡನೀಯವಾಗಿದ್ದು ಇಸ್ಲಾಂ ಧರ್ಮವು ಎಂದಿಗೂ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ.ಭಗವದ್ಗೀತೆ,ಖುರಾನ್,ಬೈಬಲ್ ಮುಂತಾದ ಪವಿತ್ರ ಗ್ರಂಥಗಳು ಮಾನವೀಯತೆಯ ಮಹತ್ವವನ್ನು ಸಾರುತ್ತವೆ ಎಂದರು. ಸೈಂಟ್ ಅಲೋಶಿಯಸ್ ಕಾಲೇಜಿನ ಕುಲಸಚಿವರಾದ ಡಾ.ರೊನಾಲ್ಡ್ ನಜರೆತ್ ಮಾತನಾಡಿ ಪ್ರೀತಿ ಹೃದಯದ ಭಾಷೆ,ಶಾಂತಿ ಹೃದಯದ ಜಾಗತಿಕ ಭಾಷೆ, ಪ್ರೀತಿಯ ಪ್ರತಿಬಿಂಬವೇ ಶಾಂತಿ.ವಿಶ್ವಶಾಂತಿಯ ಮರುಸ್ಥಾಪನೆಗೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶಾಲ ಮನೋಭಾವ ಇಂದಿನ ಅಗತ್ಯವಾಗಿದೆ.ಕುಟುಂಬದ,ದೇಶದ ಹಾಗೂ ವಿಶ್ವಶಾಂತಿಯ ಬೀಜ ನಮ್ಮ ಆತ್ಮದಲ್ಲಿ ಅಂಕುರಿಸಿ ಅರಳಬೇಕು ಎಂದರು. ಕೊಡಗು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಎನ್.ಕೆ.ಸುದರ್ಶನ್ ಕುಮಾರ್ ಮಾತನಾಡಿ ಜಗತ್ತಿನ ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ ವಲಯದಲ್ಲಿ ಸುಮಾರು ಹದಿನಾಲ್ಕು ಸಾವಿರ ಶಾಲೆಗಳು ಮುಚ್ಚಲ್ಪಟ್ಟಿದ್ದು 16.5 ಮಿಲಿಯನ್ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ಶಿಕ್ಷಣದಿಂದ ಜಾಗತಿಕ ಶಾಂತಿ, ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ.ಜಾಗತಿಕ ಶಾಂತಿಯ ನಿಟ್ಟಿನಲ್ಲಿ ಜಗತ್ತಿನ ವಿವಿಧೆಡೆಗಳಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸುತ್ತಿರುವ ಅಹ್ಮದಿಯಾ ಜಮಾಅತಿನ ಸಮಾಜಮುಖಿ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಶಾಂತಿ ವಿಚಾರ ಸಂಕಿರಣದಲ್ಲಿ ರೋಶನಿ ನಿಲಯದ ಸ್ನಾತಕೋತ್ತರ ಅಧ್ಯಯನದ ಡೀನ್ ಮೀನಾ ಜೂಲಿಯೆಟ್ ಮೊಂತೆರೊ,ಡಾ.ಎಂ.ವಿ.ಶೆಟ್ಟಿ ವಿದ್ಯಾಸಂಸ್ಥೆಯ ಪ್ರಾಧ್ಯಾಪಕಿ ಪ್ರಜ್ಞಾಕೃಷ್ಣನ್,ಅಹ್ಮದಿಯಾ ಮುಸ್ಲಿಂ ಜಮಾಅತಿನ ಮಂಗಳೂರು ಘಟಕದ ಅಧ್ಯಕ್ಷ ಬಿ.ಎಸ್.ಅಬ್ದುಲ್ ರಹೀಂ,ಯುಗರಶ್ಮಿ ಪತ್ರಿಕೆಯ ಸಂಪಾದಕ ಮೊಹಮ್ಮದ್ ಯೂಸುಫ್ ಮಾತನಾಡಿದರು. ಧರ್ಮಗುರು ಕೆ.ವಿ.ಮೊಹಮ್ಮದ್ ತಾಹಿರ್ ಹಾಜರಿದ್ದರು.ಲೈಜ್ ಅಹ್ಮದ್ ಹಾಗೂ ಸುಹೇಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

 

 

Follow us Follow us
Share. WhatsApp Facebook Twitter Email Telegram Copy Link

Related Posts

ವಿರಾಜಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಶಾರದಾ ಪೂಜೆ

ಅಕ್ಟೋಬರ್ 13, 2026

ವಿರಾಜಪೇಟೆ : ಶಿವಕೇರಿ ಶ್ರೀ ವಿಷ್ಣು ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ನವರಾತ್ರಿ ಉತ್ಸವ ಆರಂಭ

ಅಕ್ಟೋಬರ್ 13, 2026

ಸೋಮವಾರಪೇಟೆ : ಅ.14 ರಂದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಅಕ್ಟೋಬರ್ 13, 2026

ವಿರಾಜಪೇಟೆ : ಶಿವಕೇರಿ ಶ್ರೀ ವಿಷ್ಣು ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ನವರಾತ್ರಿ ಉತ್ಸವ ಆರಂಭ

ಅಕ್ಟೋಬರ್ 13, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಅ.13 NEWS DESK : ವಿರಾಜಪೇಟೆ ನಗರದ ಶಿವೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಸ್ಥಾನದಲ್ಲಿ ವೈಭವದ ನವರಾತ್ರಿ…

ಸೋಮವಾರಪೇಟೆ : ಅ.14 ರಂದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಅಕ್ಟೋಬರ್ 13, 2026

ಮುಂಗಾರು : ಬೆಳೆ ಸಮೀಕ್ಷೆ ಕಡ್ಡಾಯ

ಅಕ್ಟೋಬರ್ 13, 2026

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ : ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ

ಅಕ್ಟೋಬರ್ 13, 2026

ಅ.15 ರಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ : ನಾಡ ಹಬ್ಬಕ್ಕೆ ಸಾಹಿತ್ಯಿಕ ಸ್ಪರ್ಶ ನೀಡಲಿದ್ದಾರೆ 85 ಕವಿಗಳು

ಅಕ್ಟೋಬರ್ 13, 2026

ಮಡಿಕೇರಿ ದಸರಾ: ಕಾಫಿ ದಸರಾ ಮಳಿಗೆಗಳಿಗೆ ಚಾಲನೆ; 60 ಪೌರಕಾರ್ಮಿಕರಿಗೆ ಸನ್ಮಾನ

ಅಕ್ಟೋಬರ್ 13, 2026

2028ರ ವಿಧಾನಸಭಾ ಚುನಾವಣೆಯಲ್ಲಿ ಹೊಸ ಚಿಂತನೆಯ ವ್ಯಕ್ತಿಗಳು ಆಯ್ಕೆಯಾಗಲಿ : ಉದಯ ಕುಮಾರ್ ಜೆ.

ಅಕ್ಟೋಬರ್ 13, 2026

ಇಡಿ, ಐಟಿ, ಸಿಬಿಐ ದುರುಪಯೋಗ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಮನವಿ ಸಲ್ಲಿಕೆ

ಅಕ್ಟೋಬರ್ 13, 2026

ಅ.15ರಂದು ಮೂನಾಡ್‌ನಲ್ಲಿ ಸಿಎನ್‌ಸಿಯ 6ನೇ ಶಾಂತಿಯುತ ಮಾನವ ಸರಪಳಿ; ಕೊಡವ ಜನಾಂಗದ ಅಸ್ತಿತ್ವ, ಭೂಮಿ, ಭಾಷೆ ಮತ್ತು ಸಂಸ್ಕೃತಿ ರಕ್ಷಣೆಗೆ ಜನಜಾಗೃತಿ ಕಾರ್ಯಕ್ರಮ

ಅಕ್ಟೋಬರ್ 13, 2026

ಕುಶಾಲನಗರ ಸರ್ಕಾರಿ ಶಾಲೆಯಲ್ಲಿ ಕಳ್ಳತನ, ಹಾನಿ : ದುಷ್ಕೃತ್ಯಕ್ಕೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಖಂಡನೆ

ಅಕ್ಟೋಬರ್ 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.