
ಮಡಿಕೇರಿ ಡಿ.2 NEWS DESK : ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ವತಿಯಿಂದ ಬ್ಯಾಂಕ್ ನ ನಿರ್ದೇಶಕರಾದ ಎಸ್.ಸಿ.ಸತೀಶ್ ಅವರನ್ನು ಸನ್ಮಾನಿಸಲಾಯಿತು. ಏಲಕ್ಕಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಎಸ್.ಸಿ.ಸತೀಶ್ ಅವರು ಜಯಶಾಲಿ ಆದ ಕಾರಣ ಬ್ಯಾಂಕಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್ ಪೈ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿ. ಇವರ ರಾಜಕೀಯ ಜೀವನ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಸತೀಶ್ ಪೈ ಹಾರೈಸಿದರು. ಸಮಾರಂಭದಲ್ಲಿ ಉಪಾಧ್ಯಕ್ಷರಾದ ಕೆ.ಆರ್.ನಾಗೇಶ್, ಬ್ಯಾಂಕಿನ ನಿರ್ದೇಶಕರುಗಳಾದ ರಾಜೇಶ್ ಯಲ್ಲಪ್ಪ, ಬಿ.ಕೆ.ಜಗದೀಶ್, ಸಿ.ಕೆ.ಬಾಲಕೃಷ್ಣ, ಕನ್ನಂಡ ಸಂಪತ್, ಬಿ.ಯಂ.ರಾಜೇಶ್, ಗಿರೀಶ್, ರೋಶನ್, ಮಹೇಶ್ ಜೈನಿ, ಗೋಪಾಲ ಕೃಷ್ಣ, ಪ್ರತಿಭಾ ಶೆಟ್ಟಿ, ಮಾಚಮ್ಮ ಮತ್ತು ಬ್ಯಾಂಕ್ ನ ಮೆನೇಜರ್ ಪದ್ಮನಾಭ ಕಿಣಿ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.









