
ಮಡಿಕೇರಿ ಡಿ.4 NEWS DESK : ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ ನೂತನವಾಗಿ 12 ಲಕ್ಷಗಳಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಸ್ವತಹ ನೂತನ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುವ ಮೂಲಕ ಶಾಸಕರು ಸಾರ್ವಜನಿಕರ ಗಮನ ಸೆಳೆದರು. ಉದ್ಘಾಟನೆಯ ಬಳಿಕ ರಸ್ತೆಯ ಗುಣಮಟ್ಟವನ್ನು ಸ್ವತಹ ಪರೀಕ್ಷಿಸಿದ ಶಾಸಕರು, ಸಾರ್ವಜನಿಕರು ಇದಷ್ಟೇಯ ಸದುಪಯೋಗ ಪಡೆದುಕೊಳ್ಳಲಿ ಎಂದು ಹಾರೈಸಿದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಕೊಳತಂಡ ಬೋಪಯ್ಯ ,ಕರ್ತಮಾಡ ಪೊನ್ನು, ಮಣಿ ,ಕುತಂಡ ರಂಜನ್ ,ವಾಟೆರೀರ ತಿಲಕ್ ,ಕಲಿಯಂಡ ಗಿರೀಶ್ , ಜೇರಿ ಲೋಬೊ , ಪೊನ್ನಣ್ಣ, ಪುರಾಸಭೆ ಮಾಜಿಸದಸ್ಯರು,ಪಕ್ಷದ ಮುಖಂಡರು ,ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಈ ಹಿಂದೆ ಈ ಭಾಗದ ಜನರ ಮನವಿಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿಗೆ ಮಾನ್ಯ ಶಾಸಕರು ಅನುದಾನವನ್ನು ಒದಗಿಸಿದ್ದರು.









