
ಮಡಿಕೇರಿ ಡಿ.11 NEWS DESK : ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಬೆಳಗಿನ ಶಾಲಾ ಸಭಾಂಗಣದಲ್ಲಿ ಪ್ರಾರ್ಥನಾ ಗೀತೆ, ನುಡಿಮುತ್ತು ಹಾಗೂ ಸುದ್ದಿ ಸಮಾಚಾರ ಒಳಗೊಂಡ ಸಂಪೂರ್ಣ ಕಾರ್ಯಕ್ರಮವನ್ನು ಕೊಡವ ಭಾಷೆಯಲ್ಲಿ ಹಮ್ಮಿಕೊಳ್ಳಲಾಯಿತು. ಕೊಡವ ಭಾಷೆಯ ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿಗಳಾದ ಕಂಜಿತಂಡ ಲಿಷ್ಮ ದೇಚಮ್ಮ, ಕೋಡಿರ ವಿಹಾನ ಮುತ್ತಣ್ಣ, ಮೇಕೆರಿರಾ ಪ್ರಿನಾಲ್ ಪೊನ್ನಕ್ಕ, ಮೇಕೇರಿರಾ ಮಾಚಮ್ಮ, ನಡುಮನೆ ಮೋಕ್ಷಿತ, ಕೊಪ್ಪಿರ ತನ್ವಿ ತಂಗಮ್ಮ, ಮಾನ್ವಿ ತಂಗಮ್ಮ, ಚೇಂದಿರ ಕನಿಷ್ಕ ಮಾದಪ್ಪ, ಮೇವಂಡ ಕುನಲ್ ಕುಟ್ಟಪ್ಪ, ಪುಗ್ಗೆರ ತಿಯಾರ ಮಂದಣ್ಣ ಹಾಡಿದರು. 6ನೇ ತರಗತಿಯ ಮೇಕೇರಿರ ಪ್ರಿನಲ್ ಪೊನ್ನಕ್ಕ ಕೊಡವ ನುಡಿಮುತ್ತು ಹಾಗೂ 8ನೇ ತರಗತಿಯ ವಿದ್ಯಾರ್ಥಿಯಾದ ಪಟ್ಟಡ ದೇಚಮ್ಮ ಬಿ ಸುದ್ದಿ ಸಮಾಚಾರ ಓದಿದರು. ಗತಕಾಲದ ಪುತ್ತರಿ ಹಬ್ಬದ ಕೊಡಗಿನ ಜನಪದ ಕಲೆ ಸಂಸ್ಕೃತಿ, ಬಿಂಬಿಸುವ ಸಾಂಪ್ರದಾಯಿಕ ಉಡುಗೆಯಲ್ಲಿ ತಾಳಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಂದ ಉಮ್ಮತಾಟ್ ನೃತ್ಯ ವನ್ನು ಎಂಟನೇ ತರಗತಿ ವಿದ್ಯಾರ್ಥಿಗಳಾದ ಪಟ್ಟಡ ಬಿ. ದೇಚಮ್ಮ, ಕುಪ್ಪಚ್ಚಿರ ಪ್ರಿಶ ದೇಚಕ್ಕ, ಪಟ್ಟಡ ಪ್ರಾಧಿನ್ಯ ಮುತ್ತಮ್ಮ, ಕಾಳಚoಡ ದೇಚಮ್ಮ ಎಂ, ಅಪ್ಪಣಡೆರ0ಡ ರಿಷ ದೇಚಮ್ಮ ಚೋಕಂಡ ದಿತಿ ದೇಚಮ್ಮ 9ನೇ ತರಗತಿಯ ವಿದ್ಯಾರ್ಥಿಗಳಾದ ನೆಲಚಂಡ ಪೊನ್ನಮ್ಮ,ಕೂ ಡಂಡ ನಯಾನಿಕ ರವರು ಪ್ರದರ್ಶಿಸಿದರು. ಕೋಲಾಟ ನೃತ್ಯವನ್ನು ಏಳನೇ ತರಗತಿ ವಿದ್ಯಾರ್ಥಿಗಳಾದ ಮಂಡೇಟಿರ ಆಧ್ಯಾ ಪೊನ್ನಮ್ಮ, ಮಂಡೇಟಿರ ವಿಕ್ಷಾ ದೇಚಕ್ಕ,ಮುಂಡಂಡ ಧನ್ವಿ ದೇಚಮ್ಮ, ಮೇವಂಡ ಯಾನಿ ಬೆಳ್ಳಿಯಪ್ಪ, ಪಳೆಯಂಡ ಶಾನ್ವಿ ಪೊನ್ನಮ್ಮ, ಕಂಜಿತಂಡ ಲಿವ್ಯಾ, ಮಾಲೆ ಟ್ಟಿರ ಚಾಲ್ಸಿ, ಚೆಂದ್ರಿಮಡ ಪ್ರಿಶ ಪೊನ್ನಮ್ಮ, ಚಿರುಡ ಹರ್ಷಿತ ದೇಚಮ್ಮ, ಕಲ್ಲೇoಗಡ ದೃಶ್ಯ ಕಾವೇರಮ್ಮ, ತಾತoಡ ಗ್ರಂಥ ಕಾವೇರಮ್ಮ, ಪಾಲಚಂಡ ಯಕ್ತ ಪ್ರದರ್ಶಿಸಿದರು. ಬೊಲ್ಕಟ್ ನೃತ್ಯವನ್ನು ಅಚ್ಚಪಂಡ ಜಗತ್ ಎ.ಹೆಚ್, ಅಮ್ಮಂಡ ತನಿಷ್ ನಾಣಯ್ಯ, ಚೇಮಿರ ದ್ರೋಣ್ ಚಿನ್ನಪ್ಪ ಅಚ್ಚಪಂಡ ಶಶಾಂಕ್, ಪಟ್ಟಡ ಭೂಪಣ್ಣ , ತಾತಂಡ ದಕ್ಷ ಭೋಜಣ್ಣ ಟಿ, ಮಾತಂಡ ಹಿಮಾoಶು ಕಾರ್ಯಪ್ಪ ಎಸ್ ಪ್ರದರ್ಶಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಕನ್ನo ಬಿರ ಭೀಮಯ್ಯ ಹಾಗೂ ಬಡುವವಂಡ ವೃಶಾಂಕ್ ದೇವಯ್ಯ ದಟ್ಟಿ ಕುಪ್ಪಸ ತೊಟ್ಟು ಪರೆ ಕಳಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಿಕಿ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









