Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ವಾಹನ ಡಿಕ್ಕಿಯಾಗಿ ಗಾಯಗೊಂಡ ಕರು : ಆಸ್ಪತ್ರೆಗೆ ಬಂದು ಗೋಳಿಟ್ಟ ಹಸು : ಇದೊಂದು ಮನಮಿಡಿಯುವ ಪ್ರಸಂಗ
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ವಾಹನ ಡಿಕ್ಕಿಯಾಗಿ ಗಾಯಗೊಂಡ ಕರು : ಆಸ್ಪತ್ರೆಗೆ ಬಂದು ಗೋಳಿಟ್ಟ ಹಸು : ಇದೊಂದು ಮನಮಿಡಿಯುವ ಪ್ರಸಂಗ

ಡಿಸೆಂಬರ್ 24, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾನಲಗರ NEWS DESK ಡಿ.24 : ಕುಶಾಲನಗರದ ಮುಖ್ಯ ರಸ್ತೆಯ  ಕೆನರಾ ಬ್ಯಾಂಕ್ ಬಳಿ ಮಂಗಳವಾರ ಬೆಳಗ್ಗೆ  ವಾಹನವೊಂದು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ  ಮುಗ್ಧ ಆಕಳು (ಪುಟ್ಟ ಕರು) ಗಂಭೀರ ಗಾಯಗೊಂಡಿತ್ತು. ಅಂದರೆ ವೇಗದಲ್ಲಿ ಬಂದ  ಯಾವುದೋ  ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕರುವಿನ ಕಣ್ಣ ಕೆಳಗೆ ಬಲವಾದ ಪೆಟ್ಟು ಬಿದ್ದು  ಎರಡು ಮೂರು ಇಂಚಿನಷ್ಟು  ತೂತು ಬಿದ್ದಿತ್ತು. ಕೊಂಬಿನ ಭಾಗವೂ ಘಾಸಿಯಾಗಿತ್ತು. ಹಾಗಾಗಿ ತೀವ್ರತರಹದ ರಕ್ತ ಸ್ರಾವ ವಾಗಿತ್ತು. ಅತ್ತ ತನ್ನ ಕರುಳ ಬಳ್ಳಿಗಾಗಿ ಅಂದರೆ ತನ್ನ ಕರುವಿಗಾಗಿ  ಹುಡುಕಾಡುತ್ತಿದ್ದ ತಾಯಿ ಹಸುವಿಗೆ   ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ನಿತ್ರಾಣಗೊಂಡಿದ್ದ ಕರುವಿನ ದರ್ಶನವಾದೊಡನೆಯೇ, ಅಯ್ಯೋ ಕಂದಾ ಏನಾಯಿತು ನಿನಗೆ…? ನಿನ್ನ ಈ ಸ್ಥಿತಿಗೆ ಕಾರಣರಾರು ?  ಎಂದು ಘೀಳಿಟ್ಟು ಗೋಳಾಡಿದ ಹೆತ್ತ ಕರುಳು ರಕ್ತ ಸ್ರಾವದಿಂದ ಒದ್ದೆಯಾಗಿದ್ದ ಕಂದಮ್ಮನ ಹಣೆ, ಮುಖ, ಹೊಟ್ಟೆ ಎಲ್ಲವನ್ನು ತನ್ನ ನಾಲಿಗೆಯಿಂದ ಸಾವರಿಸಿ ಕಂದಮ್ಮನು ಅನಭವಿಸುತ್ತಿದ್ದ ನೋವು ನುಂಗಲು ಹರಸಾಹಸ ಪಟ್ಟಿತು. ಮನುಷ್ಯರಂತೆಯೇ ಕಂದಮ್ಮನ ಸ್ಥಿತಿಗೆ ಪರದಾಡಿ ಮನದಲ್ಲೇ ವ್ಯಥೆ ಪಟ್ಟು ತುಂಬಿ ಹೋಗಿದ್ದ   ಕಣ್ಣಾಲಿಗಳನ್ನು ಕಂಡ ಸ್ಥಳೀಯರ ಕಂಗಳು ಅರೆ ಕ್ಷಣ  ಒದ್ದೆಯಾಗಿದ್ದವು. ಮಾತು ಬಾರದ ಮುಗ್ಧ ಹಾಗೂ  ಅಮಾಯಕ ಈ ಪ್ರಾಣಿಗಳಲ್ಲೂ ಅವ್ಯಾಹತವಾದ ಅನುಬಂಧವಿದೆ. ಯಾರಿಗೂ ಗೋಚರಿಸದ ಪ್ರೇಮವಿದೆ. ಅಶರೀರವಾಣಿ ಈ ಮುಗ್ಧ ಜೀವಿಗಳನ್ನು ಕೂಗಿ ಕರೆಯುತ್ತದೆ  ಎಂಬುದಕ್ಕೆ  ಇಂತಹ ಅಪರೂಪದ ಸಂಗತಿಗಳು ಸಾಕ್ಷಿಯಾಗಬಲ್ಲವು. ಮನುಷ್ಯರಾದರೆ ಕರೆ ಮಾಡಿ ಹೀಗಾಗಿದೆ ನಿಮ್ಮವರಿಗೆ ಬಂದು ನೋಡಿ ಎಂದು ಹೇಳಬಹುದು. ಆದರೆ ಎಲ್ಲೋ ಇದ್ದ ಈ ತಾಯಿ ಹಸುವಿಗೆ ತನ್ನ ಕಂದಮ್ಮನ ಇಂತಹ ದುರ್ಗತಿ ತಿಳಿದದ್ದಾದರೂ ಹೇಗೆ ? ಹೇಳಿದ್ದಾದರೂ ಯಾರೂ ? ಆ ಹೆತ್ತ ಜೀವವೇ ಹುಡುಕಿ ಬಂದು ತನ್ನ ಕಂದನ ಸ್ಥಿತಿ ಕಂಡು ಕಣ್ಣೀರಿಡುವುದನ್ನು ಖುದ್ದು ಕಂಡವರ ಕಣ್ಣಾಲಿಗಳು  ತೇವ ಆಗದಿರದೇ….! *ಗೋವು ಅಂತಾ ಅಂದರೆ ಚತುರ್ದಶ ಭುವನ ಪ್ರತೀ* ಗೋವಿನ ಮುಖದಲ್ಲಿ ಬ್ರಹ್ಮನನ್ನು, ಕಣ್ಣುಗಳಲ್ಲಿ ವಿಷ್ಣುವನ್ನು,  ಕಂಠದಲ್ಲಿ  ರುದ್ರನನ್ನು,  ಕೊಂಬುಗಳಲ್ಲಿ ಸೂರ್ಯ ಚಂದ್ರರನ್ನು,  ನಾಲ್ಕು ಕಾಲುಗಳಲ್ಲಿ ನಾಲ್ಕು ವೇದಗಳನ್ನು,  ನಾಲ್ಕು ಕಾಲುಗಳ ಎಂಟು  ಗೊರಸುಗಳಲ್ಲಿ  ಅಷ್ಟ ದಿಗ್ಪತಿಗಳನ್ನು,   ಬಾಲದಲ್ಲಿ ಸರ್ಪ ರೂಪವನ್ನು,   ಕೆಚ್ಚಲಿನಲ್ಲಿ ಅಮೃತವನ್ನು,   ರೋಮಗಳಲ್ಲಿ ಕೋಟಿ ಕೋಟಿ ದೇವತೆಗಳನ್ನು ಕಂಡ ದೇಶ ನಮ್ಮದು. ಮನುಷ್ಯರಾದ ನಾವೆಲ್ಲರೂ ಹುಟ್ಟಿದ ಕೇವಲ ಒಂದು ಅಥವಾ ಎರಡು ವರ್ಷ ಮಾತ್ರ ಹೆತ್ತ ತಾಯಿಯ ಎದೆಯ ಅಮೃತವನ್ನು ಕುಡಿಯುತ್ತೇವೆ. ಇನ್ನು ಜೀವನವಿಡೀ ಈ ಗೋವಿನ ಹಾಲನ್ನೇ ಕುಡಿಯುತ್ತೇವೆ. ಇಂತಹ ಗೋ ಮಾತೆಯನ್ನು ನಾವೆಲ್ಲರೂ ರಕ್ಷಿಸೋಣ. ಇಂತಹ ನೋವುಂಡ  ಗೋ ಮಾತೆಗೆ  ಸಕಾಲದಲ್ಲಿ ನೆರವಾದ ಕುಶಾಲನಗರದ ಹೋಟೆಲ್  ಉದ್ಯಮಿ ಕಿಂಗ್ಸ್ ವೇ  ದಾವುದ್ ಹಾಗೂ ತಂಡ ಪುರಸಭೆಯ  ಕಾಯಕಯೋಗಿಗಳು ಹಾಗೂ ಸಕಾಲದಲ್ಲಿ  ಚಿಕಿತ್ಸೆ ನೀಡಿದ ಪಶು ವೈದ್ಯರಾದ ಡಾ.ಸಂಜೀವ್ ಕುಮಾರ್ ಸಿಂಧೆ ಮತ್ತು  ಸಿಬ್ಬಂದಿಗಳಿಗೊಂದು ಸಲಾಂ…. ಹೇಳಲೇ ಬೇಕಲ್ವಾ.  *ವರದಿ : ಕೆ.ಎಸ್.ಮೂರ್ತಿ*  *ಕುಶಾಲನಗರ*  *9448896395*

Follow us Follow us
Share. WhatsApp Facebook Twitter Email Telegram Copy Link

Related Posts

ಪೂಜಾರಿರ ಮೊಣ್ಣಪ್ಪ ಅರೆಭಾಷಿಕ ಯುವ ಜನಾಂಗಕ್ಕೆ ಮಾದರಿ : ಡಾ.ಕಾವೇರಿಮನೆ ಬೋಜಪ್ಪ

ಅಕ್ಟೋಬರ್ 12, 2026

ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ

ಅಕ್ಟೋಬರ್ 12, 2026

ಮಡಿಕೇರಿಯಲ್ಲಿ ಅ.19 ರಂದು ಮಹಿಳಾ ದಸರಾ : ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 12, 2026

ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ

ಅಕ್ಟೋಬರ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಅ.12 NEWS DESK : ಪತ್ರಕರ್ತರ ನಡುವೆ ಬಾಂಧವ್ಯ ವೃದ್ಧಿಸಿ, ಸಂಘಟನಾತ್ಮಕವಾಗಿ ಬಲವರ್ಧನೆಗೊಳ್ಳಲು ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ಮಡಿಕೇರಿ…

ಮಡಿಕೇರಿಯಲ್ಲಿ ಅ.19 ರಂದು ಮಹಿಳಾ ದಸರಾ : ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 12, 2026

ಬೇಂಗ್ ನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋದ್ ಒತ್ತೋರ್ಮೆ ಕೂಟ; ಕೊಡವ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ಚಿರಿಯಪಂಡ ಸುರೇಶ್ ನಂಜಪ್ಪ

ಅಕ್ಟೋಬರ್ 12, 2026

ಸುಂಟಿಕೊಪ್ಪದಲ್ಲಿ ಅ.20ರಂದು 56ನೇ ವರ್ಷದ ಆಯುಧಪೂಜಾ ಸಮಾರಂಭ

ಅಕ್ಟೋಬರ್ 12, 2026

ಸುಂಟಿಕೊಪ್ಪದಲ್ಲಿ ಅ.15ರಂದು 19ನೇ ವರ್ಷದ ಓಣಂ ಆಚರಣೆ

ಅಕ್ಟೋಬರ್ 12, 2026

ಕಂಬಿಬಾಣೆಯಲ್ಲಿ 71ನೇ ವರ್ಷದ ನವರಾತ್ರಿ ಉತ್ಸವಕ್ಕೆ ಚಾಲನೆ: ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

ಅಕ್ಟೋಬರ್ 12, 2026

ಮಡಿಕೇರಿ ದಸರಾದಲ್ಲಿ ಕಾಫಿ ಘಮ: 54 ಮಳಿಗೆಗಳಲ್ಲಿ ಕಾಫಿ ಲೋಕ ಅನಾವರಣ

ಅಕ್ಟೋಬರ್ 12, 2026

ವಿರಾಜಪೇಟೆ ಕಾವೇರಿ ಕಾಲೇಜಿನ ಬಾಲಕರ ತಂಡಕ್ಕೆ ರನ್ನರ್ಸ್ ಟ್ರೋಫಿ

ಅಕ್ಟೋಬರ್ 12, 2026

ಎಸ್‌ಐಆರ್ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ; ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ರಸ್ತೆ ತಡೆ

ಅಕ್ಟೋಬರ್ 12, 2026

ಬೆಂಗಳೂರಿನಿಂದ ಮೈಸೂರಿಗೆ ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿ ಸ್ಥಳಾಂತರಕ್ಕೆ ತಾತ್ವಿಕ ಒಪ್ಪಿಗೆ

ಅಕ್ಟೋಬರ್ 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.