
ಮಡಿಕೇರಿ ಡಿ.25 NEWS DESK : ಚಿಕ್ಕಮಂಗಳೂರಿನ ಬಾಳೆ ಹೊನ್ನೂರಿನಲ್ಲಿ ನಡೆಯುತ್ತಿರುವ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಉಮ್ಮತಾಟ್ ಪ್ರದರ್ಶನ ನಡೆಯಿತು. ಮೂವೆರ ಸರಿತ ಹರೀಶ್, ಚೊಟ್ಟೆಯಂಡ ಮಿಥಿಲ ಸಂಜು, ಓಡಿಯಂಡ ಜಾನ್ಸಿ ರಾಜ,ಪೊನ್ನಚೆಟ್ಟೀರ ಡಾಟಿ ಅರುಣ್, ಕನ್ನಂಡ ಶೀತಲ್ ರಿವಿನ್, ಐಚೆಟ್ಟೀರ ಸುನಿತ ಮಾಚಯ್ಯ, ಮಿನ್ನಂಡ ಜಾನ್ಸಿ ಮಾದಪ್ಪ,ತಾಪಂಡ ಶುಭಾ ಲೋಕೇಶ್, ಕನ್ನಂಡ ಪ್ರಮಿತ ಉತ್ತಪ್ಪ ಭಾಗವಹಿಸಿದರು.









