Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಸತತ 2ನೇ ವರ್ಷ ಪ್ರಧಾನ ಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿ ಜಯಿಸಿದ ಕರ್ನಾಟಕ ಮತ್ತು ಗೋವಾದ ಎನ್ ಸಿಸಿ ನಿರ್ದೇಶನಾಲಯ
ಇತ್ತೀಚಿನ ಸುದ್ದಿಗಳು ಕರ್ನಾಟಕ ಭಾರತ

ಸತತ 2ನೇ ವರ್ಷ ಪ್ರಧಾನ ಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿ ಜಯಿಸಿದ ಕರ್ನಾಟಕ ಮತ್ತು ಗೋವಾದ ಎನ್ ಸಿಸಿ ನಿರ್ದೇಶನಾಲಯ

ಜನವರಿ 29, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಬೆಂಗಳೂರು ಜ.29 NEWS DESK :  ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಶಿಬಿರ -2026 (ಆರ್ ಡಿಸಿ -2026) ನಲ್ಲಿ ಕರ್ನಾಟಕ ಮತ್ತು ಗೋವಾದ ಎನ್ ಸಿಸಿ ನಿರ್ದೇಶನಾಲಯ ಸತತ 2ನೇ ಬಾರಿಗೆ ಪ್ರತಿಷ್ಠಿತ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ದೇಶಾದ್ಯಂತ 17 ನಿರ್ದೇಶನಾಲಯಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಒಟ್ಟಾರೆ, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್ ಡಿಸಿ -2026ನಲ್ಲಿ ಭಾಗವಹಿಸಿದ್ದ ಎಲ್ಲ 16 ನಿರ್ದೇಶನಾಲಯಗಳನ್ನು ಹಿಂದಿಕ್ಕಿ ಕರ್ನಾಟಕ ಮತ್ತು ಗೋವಾದ ಕೆಡೆಟ್ ಗಳು ಅತ್ಯುತ್ತಮ ಪಥಸಂಚಲನ , ಫೈರಿಂಗ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರದರ್ಶನಗಳನ್ನು ನೀಡಿದ್ದಾರೆ. ಈ ಗಮನಾರ್ಹ ಸಾಧನೆಯು ನಿರ್ದೇಶನಾಲಯದ ಸ್ಥಿರ ಶ್ರೇಷ್ಠತೆ, ಶಿಸ್ತು ಹಾಗೂ ಉನ್ನತ ತರಬೇತಿ ಮಾನದಂಡಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ರಕ್ಷಣಾ ಸಚಿವಾಲಯದ ಪ್ರಕಾರ, ವರ್ಷವಿಡೀ ವ್ಯಾಪಕ ಶ್ರೇಣಿಯ ಎನ್ ಸಿಸಿ ಚಟುವಟಿಕೆಗಳಲ್ಲಿ ಸ್ಥಿರವಾದ ಬಹುವಿಧದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ನಿರ್ದೇಶನಾಲಯಕ್ಕೆ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ನೀಡಲಾಗುವುದು. ಮೌಲ್ಯಮಾಪನ ಮಾನದಂಡಗಳಲ್ಲಿ ಪ್ರಮುಖವಾಗಿ ಸಂಘಟಿತ ಶಿಬಿರಗಳು ಮತ್ತು ಸ್ಪರ್ಧೆಗಳಲ್ಲಿನ ಕಾರ್ಯಕ್ಷಮತೆ ಶಿಸ್ತಿನ ಮಾನದಂಡಗಳು , ಎನ್ ಸಿಸಿ ಪ್ರಮಾಣಪತ್ರ ಪರೀಕ್ಷೆಗಳಲ್ಲಿನ ಫಲಿತಾಂಶಗಳು ಮತ್ತು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗಾಗಿ ಆಯ್ಕೆಯಾದ ಕೆಡೆಟ್ ಗಳ ಸಂಖ್ಯೆ ಒಳಗೊಂಡಿದೆ. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ತನ್ನ ಗೆಲುವಿನ ನಾಗಲೋಟವನ್ನು ಮುಂದುವರಿಸಿದ್ದು, ಅದು ಅಂತರ ನಿರ್ದೇಶನಾಲಯ ಶೂಟಿಂಗ್ ಚಾಂಪಿಯನ್ ಶಿಪ್ , ಅಖಿಲ ಭಾರತ ವಾಯುಸೈನಿಕ ಶಿಬಿರ, ಅಖಿಲ ಭಾರತ ನೌಕಾ ಸೈನಿಕ ಶಿಬಿರ, ಐಡಿಯಾ ಮತ್ತು ಇನೋವೇಷನ್ ಸ್ಪರ್ಧೆ ಮತ್ತು ಆರ್ ಡಿಸಿ -2026 ಸೇರಿದಂತೆ ಹಲವು ಪ್ರತಿಷ್ಠಿತ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಗಳಿಸುತ್ತಾ ಬಂದಿದೆ. ಆ ಮೂಲಕ ಎನ್ ಸಿಸಿ ತರಬೇತಿಯ ಎಲ್ಲ ವಿಭಾಗಗಳಲ್ಲೂ ಮುಂಚೂಣಿಯಲ್ಲಿದೆ. ಪ್ರಧಾನಮಂತ್ರಿಗಳ ಬ್ಯಾನರ್ ಅನ್ನು ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್, ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ 2026ರ ಜನವರಿ 28ರಂದು ನಡೆದ ಆರ್ ಡಿಸಿ -2026 ಸಮಾರೋಪ ಸಮಾರಂಭವಾದ ಪ್ರಧಾನಮಂತ್ರಿಗಳ ಎನ್ ಸಿಸಿ ಖಚಿಟಟಥಿಯಲ್ಲಿ ಅಧಿಕೃತವಾಗಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್, ಸತತ ಎರಡನೇ ವರ್ಷ ಚಾಂಪಿಯನ್ ನಿರ್ದೇಶನಾಲಯದ ಕಿರೀಟವನ್ನು ಪಡೆದಿರುವುದು ಕೆಡೆಟ್ ಗಳ ಹಾಗೂ ಸಿಬ್ಬಂದಿಗಳ ವೃತ್ತಿಪರತೆ, ಸ್ಥಿತಿಸ್ಥಾಪಕತ್ವ ಮತ್ತು ಎಲ್ಲದಕ್ಕೂ ಸಿದ್ಧವಾಗಿರುವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಯಶಸ್ಸು ಸಾಮೂಹಿಕ ಕಠಿಣ ಪರಿಶ್ರಮ ನಿಖರ ತರಬೇತಿ ಮತ್ತು ಅಚಲ ಬದ್ಧತೆಯ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಮತ್ತು ಗೋವಾ ರಾಜ್ಯದಾದ್ಯಂತ ಇರುವ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ದೃಢ ಬೆಂಬಲ ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳ ನೆರವು ಇದಕ್ಕೆ ಕಾರಣವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಗಣೇಶೋತ್ಸವ ಸ್ವಾತಂತ್ರ್ಯ ಸಂಗ್ರಾಮದ ಪ್ರತೀಕ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 11, 2026

ಗೌರಮ್ಮ ದತ್ತಿ ಕಥಾ ಸ್ಪರ್ಧೆ: ಎಂ.ಎಸ್.ಆಕಾಂಕ್ಷ ಪ್ರಥಮ

ಅಕ್ಟೋಬರ್ 11, 2026

ಮಳೆ ಕೊರತೆ ನೀಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ : ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026

ಗೌರಮ್ಮ ದತ್ತಿ ಕಥಾ ಸ್ಪರ್ಧೆ: ಎಂ.ಎಸ್.ಆಕಾಂಕ್ಷ ಪ್ರಥಮ

ಅಕ್ಟೋಬರ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.11 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ…

ಮಳೆ ಕೊರತೆ ನೀಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ : ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026

ಗೋಣಿಕೊಪ್ಪ ದಸರಾ ಜನೋತ್ಸವ ಉದ್ಘಾಟಿಸಿದ ಸಚಿವ ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ರೂ.10 ಕೋಟಿ ವೆಚ್ಚದ ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಘಟಕ : ನವೆಂಬರ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆ : ಶಾಸಕ ಡಾ. ಮಂತರ್ ಗೌಡ ಪರಿಶೀಲನೆ

ಅಕ್ಟೋಬರ್ 11, 2026

ಮಡಿಕೇರಿ ದಸರಾ ಕರಗೋತ್ಸವಕ್ಕೆ ಚಾಲನೆ: ನಾಲ್ಕು ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಆರಂಭ

ಅಕ್ಟೋಬರ್ 11, 2026

ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಸಂಕಷ್ಟ: ಟಿಕೆಟ್ ರೋಲ್ ಕೊರತೆ, 3–4 ಪ್ರಯಾಣಿಕರಿಗೆ ಒಂದೇ ಟಿಕೆಟ್!

ಅಕ್ಟೋಬರ್ 11, 2026

ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌: ದಾಖಲೆ ಮರುಪರಿಶೀಲನೆಗೆ ಅ.31ರವರೆಗೆ ಗಡುವು ವಿಸ್ತರಣೆ

ಅಕ್ಟೋಬರ್ 11, 2026

ಹಿಂದೂ ಗೆಳೆಯರ ಬಳಗದ ಅಧ್ಯಕ್ಷರಾಗಿ ಟಿ.ವಿ. ಪ್ರಕಾಶ್ ನೇಮಕ

ಅಕ್ಟೋಬರ್ 11, 2026

ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಸುಂಟಿಕೊಪ್ಪದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

ಅಕ್ಟೋಬರ್ 11, 2026

ಭಾಗಮಂಡಲ–ತಲಕಾವೇರಿ ಮಾರ್ಗದಲ್ಲಿ ಬಸ್ ಸೇವೆ ಆರಂಭ: ಶಾಸಕರಿಗೆ ಗ್ರಾಮಸ್ಥರ ಅಭಿನಂದನೆ; ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ

ಅಕ್ಟೋಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.