Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*
  • *ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*
  • *ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*
  • *ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*
  • *ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*
  • *ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*
  • *ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*
  • *ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*
  • *ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*
  • *ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಶಿಕ್ಷಕ ವಿಕ್ರಾಂತ್ ಕೇಳ್ಕರ್ ರಚಿಸಿರುವ ಎಸ್‌ಎಸ್‌ಎಲ್‌ಸಿ ಇಂಗ್ಲೀಷ್ ಕಲಿಕಾ ಪುಸ್ತಕ ಬಿಡುಗಡೆ : ಇಂಗ್ಲೀಷ್ ಕಲಿಕೆ ಕಬ್ಬಿಣದ ಕಡಲೆಯಲ್ಲ : ರಾಮಚಂದ್ರರಾಜೇ ಅರಸ್ ಸಲಹೆ*
ಇತ್ತೀಚಿನ ಸುದ್ದಿಗಳು

*ಶಿಕ್ಷಕ ವಿಕ್ರಾಂತ್ ಕೇಳ್ಕರ್ ರಚಿಸಿರುವ ಎಸ್‌ಎಸ್‌ಎಲ್‌ಸಿ ಇಂಗ್ಲೀಷ್ ಕಲಿಕಾ ಪುಸ್ತಕ ಬಿಡುಗಡೆ : ಇಂಗ್ಲೀಷ್ ಕಲಿಕೆ ಕಬ್ಬಿಣದ ಕಡಲೆಯಲ್ಲ : ರಾಮಚಂದ್ರರಾಜೇ ಅರಸ್ ಸಲಹೆ*

January 29, 20262 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಕುಶಾಲನಗರ ಜ.29 NEWS DESK : ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ: ಇನಫರ್ಮೇಶನ್ ಅಂಡ್ ಕಮ್ಮೂನಿಕೇಶನ್ : Information and communication technology ) ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಸೋಮವಾರಪೇಟೆ ತಾಲ್ಲೂಕು
ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ  ಇಂಗ್ಲೀಷ್ ಭಾಷಾ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಅವರು ಎಸ್‌ಎಸ್‌ಎಲ್‌ಸಿ ಇಂಗ್ಲೀಷ್ ಪರೀಕ್ಷೆಯ ಫಲಿತಾಂಶ ಅಭಿವೃದ್ಧಿಗಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸರಳ ವಿಧಾನದಲ್ಲಿ ಸಿದ್ಧಪಡಿಸಿರುವ ಇ- ಮೇಜಿನೇಟೆಡ್ ಲೆಸನ್ಸ್ ( I-mage-nated lessons – ಎಸ್‌ಎಸ್‌ಎಲ್‌ಸಿ ಇಂಗ್ಲೀಷ್ ಪಾಠಗಳು ನನ್ನ ಕಲ್ಪನೆಯಂತೆ) ಎಂಬ ಆಂಗ್ಲಭಾಷಾ ಕಲಿಕಾ ಪುಸ್ತಕವನ್ನು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡಯಟ್ ) ಯಲ್ಲಿ  ಡಯಟ್ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ ) ರಾಮಚಂದ್ರರಾಜೇ ಅರಸ್ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶ ಹಾಗೂ ಕನ್ನಡ ಮಾಧ್ಯಮದ ಕೆಲವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನಿಸಿರುವ ಇಂಗ್ಲೀಷ್ ಭಾಷಾ ಕಲಿಕೆಯನ್ನು ಹಿಂದುಳಿದ ವಿದ್ಯಾರ್ಥಿಯ ಕಲಿಕೆಯನ್ನು ಉತ್ತಮಪಡಿಸಲು ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲೀಷ್ ಭಾಷಾ
ಶಿಕ್ಷಕರಾದ ವಿಕ್ರಾಂತ್ ಕೇಳ್ಕರ್ ಸಿದ್ಧಪಡಿಸಿರುವ ಈ ಪುಸ್ತಕವು ಕಲಿಕೆಯಲ್ಲಿ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಕಲಿಕೆಯಲ್ಲಿ ಆಗುತ್ತಿರುವ ಕ್ಲಿಷ್ಟತೆ ನಿವಾರಿಸಲು ಪಾಠಗಳು ಸುಲಭವಾಗಿ ಅರ್ಥವಾಗುವಂತೆ ಮಾಡಲು ಸಹಕಾರಿಯಾಗಿದೆ ಎಂದರು.  ಇಂಗ್ಲೀಷ್ ಭಾಷೆಯು ಕಬ್ಬಿಣದ ಕಡಲೆಯಲ್ಲ, ಇದು ಕೂಡ ಸರಳ ಕಲಿಕೆ ಎಂಬ ಮನೋಭಾವವನ್ನು ಮಕ್ಕಳಲ್ಲಿ ಪ್ರೇರೇಪಿಸಬೇಕು. ಇಂಗ್ಲೀಷ್ ಭಾಷೆಯನ್ನು ಸುಲಭ ಕಲಿಕೆ ಜೊತೆಗೆ, ಚಿತ್ರಗಳನ್ನು ವೀಕ್ಷಿಸುವ‌ ಮೂಲಕ ಓದಿದ ಅಂಶಗಳನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳುವಲ್ಲಿಯೂ ಈ ಪುಸ್ತಕ ಮಹತ್ವದ ಕೆಲಸ ಮಾಡುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವಲ್ಲಿಯೂ ಇದು ಬಹಳ ಸಹಕರಿಯಾಗಲಿದೆ ಎಂದರು. ನಿಧಾನಗತಿ ಕಲಿಕೆ ಇರುವ ವಿದ್ಯಾರ್ಥಿಗಳಿಗಂತೂ ಈ ಕೈಪಿಡಿಯು ದೊಡ್ಡ ವರದಾನವಾಗಲಿದೆ. ಶಿಕ್ಷಕರು ಬೋಧನೆ ಮಾಡುವಾಗಲೂ ಇದನ್ನು ಪೂರಕ ಸಂಪನ್ಮೂಲದಂತೆ ಬಳಸಿಕೊಂಡು ಇಂಗ್ಲೀಷ್ ಅನ್ನು ಸರಳವಾಗಿ ಕಲಿಸಿ ಮಕ್ಕಳಿಗೆ ಪಾಠ ಮಾಡಬಹುದಾಗಿದೆ. ವರ್ಣ ಚಿತ್ರಗಳ ಮೂಲಕ ಒಂದು ಸುಂದರ, ಆಕರ್ಷಕ ಮತ್ತು ಪ್ರಭಾವಶಾಲಿ ಪುಸ್ತಕವನ್ನು ಹೊರ ತಂದಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಹೇಳಿದರು. ಪಠ್ಯಪುಸ್ತಕವನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಹಾಗೂ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ವಿಶ್ಲೇಷಣಾತ್ಮಕವಾಗಿ ತಿಳಿದುಕೊಂಡಿದ್ದರೆ ವಿದ್ಯಾರ್ಥಿಗಳು ಇಂಗ್ಲೀಷ್‌ ವಿಷಯದಲ್ಲೂ ಗರಿಷ್ಠ ಅಂಕಗಳನ್ನು ಗಳಿಸಬಹುದು’ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಸಂಪನ್ಮೂಲ ಶಿಕ್ಷಕ ವಿಕ್ರಾಂತ್ ಅವರು ತಮ್ಮ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಬಳಸಿಕೊಂಡು ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಸರಳವಾಗಿ ಕಲಿಯುವಂತೆ ತಯಾರಿಸಿರುವ ಈ ಕಲಿಕಾ ಕೈಪಿಡಿಯು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಸಹಕಾರಿಯಾಗಿದೆ. ಶಾಲಾ ಶಿಕ್ಷಕರು ಮಕ್ಕಳ ಕಲಿಕೆಗೆ ಈ ಕೈಪಿಡಿಯನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಪುಸ್ತಕ ರಚಿಸಿದ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಮಾತನಾಡಿ, ತಾವು ಇಂಗ್ಲೀಷ್ ಬೋಧನೆಯ ಸಂದರ್ಭದಲ್ಲಿ ಮಕ್ಕಳು ಕಲಿಕೆಯಲ್ಲಿ ನಿಧಾನಗತಿಯಲ್ಲಿದ್ದುದನ್ನು ಗಮನಿಸಿ ಇಂತಹ ಮಕ್ಕಳು ಇಂಗ್ಲೀಷ್ ಭಾಷೆಯನ್ನು ಸರಳವಾಗಿ ಕಲಿತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಆತ್ಮವಿಶ್ವಾಸ ಬೆಳೆಸುವ ದಿಸೆಯಲ್ಲಿ ವಿದ್ಯಾರ್ಥಿ ಕೇಂದ್ರೀತ ಪುಸ್ತಕವನ್ನು ಹೊರತರಲಾಗಿದೆ. ಈ ಪುಸ್ತಕವನ್ನು ಬಿಡುಗಡೆಗೊಳಿಸಲು ಡಯಟ್ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎನ್.ವಿ.ಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ಪೊನ್ನಚ್ಚನ ಶ್ರೀನಿವಾಸ್, ಯಶವಂತ್, ಪೂರ್ಣೇಶ್, ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ಜಿಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದರು.

Share. Facebook Twitter Pinterest LinkedIn Tumblr Email WhatsApp
Previous Article*ಫೆ.1 ರಂದು ಸುಂಟಿಕೊಪ್ಪದಲ್ಲಿ ಆಲ್ ಇಂಡಿಯಾ ಫೈವ್ಸ್ ಫುಟ್ಬಾಲ್*
Next Article *ವಿಬಿ ರಾಮ್ ಜಿ ಯೋಜನೆಯನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ವಿರೋಧಿಸುತ್ತಿದೆ*

Recommended: Website design development company services in Mangalore Forex Trading Teacher in India

Related Posts

*ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

ಸಿಯಾಟಲ್ (ಅಮೆರಿಕಾ): ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಸಾವಿನ…

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*

February 12, 2026

*ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*

February 12, 2026

*ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*

February 12, 2026

*ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*

February 12, 2026

*ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*

February 12, 2026

*ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*

February 12, 2026

*ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*

February 12, 2026

*ಮಾಂದಲ್ ಪಟ್ಟಿ; ಸಾರ್ವಜನಿಕರು ಮತ್ತು ಪ್ರವಾಸಿಗರ ಗಮನಕ್ಕೆ*

February 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.