ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಒಂದು ಕಾರ್ಯಕ್ರಮದ ಬಗ್ಗೆ ಪ್ರಾ ಸ್ತಾವಿಕವಾಗಿ ಮಾತನಾಡಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮಾನ್ ಸುದೇ ಶ್ ರವರು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂತಿಮ ಹಂತದಲ್ಲಿ ಹೇಗೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳ ಬೇಕು ಎಂಬುದನ್ನು ತಿಳಿಸುತ್ತಾ ಶುಭ ಹಾರೈಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ಅಲಂಕರಿಸಿದ್ದ ಪೋಷಕ ಶಿಕ್ಷಕ ಸಮಿತಿಯ ಸದಸ್ಯರಾದ ಶ್ರೀಮಾನ್ ಸುಮೇಶ್ ರವರು ಮಾತನಾಡಿ ಪ್ರಸ್ತುತ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂಬ ಹಿತನುಡಿಗಳೊಂದಿಗೆ ಶುಭ ಹಾರೈಸಿದರು.
ಯು.ಕೆ.ಜಿ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪಾರ್ವತಿ ಪಿ . ಯು ಪದವಿ ಪ್ರಧಾನ ಮಾಡಿ ಅಭಿನಂದಿಸಿದರು.
10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದಂತಹ ಶ್ರೀಮಾನ್ ಸುದೇಶ್ ಬಿ. ಎಸ್ ಹಾಗೂ ಕಾರ್ಯದರ್ಶಿಯವರಾದ ಶ್ರೀಮಾನ್ ವಿನೋದ್ ಪಿ . ಎನ್ ರವರು ಪದವಿ ಪ್ರಧಾನ ಮಾಡಿ ಅಭಿನಂದಿಸಿದರು.
ಕಳೆದ ಶೈಕ್ಷಣಿಕ ವರ್ಷ 2024 25 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿ ಹಾಗೂ ವಿಷಯವಾರು ಅತ್ಯುತ್ತಮ ಸ್ಥಾನವನ್ನು ಗಳಿಸಿದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕಗಳನ್ನು ಸಂಯೋಜಕಿಯಾದ ಅಮೃತ ಅರ್ಜುನ್ ರವರು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯೊಂದಿಗಿನ ಒಡನಾಟದ ಬಗ್ಗೆ ವಿದ್ಯಾರ್ಥಿಗಳಾದ ಕಾವೇರಮ್ಮ ಎಂಜಿ,ದೀಪ್ತಿ ತಂಗಮ್ಮ, ಹನಾ ಪಲಕ್, ಹೈಜಾ, ಸುಹಾನಿ ಪುರೋಹಿತ್ ಹಾಗೂ ಜೋಯಾ ಯುಕೆಜಿ ವಿದ್ಯಾರ್ಥಿಗಳಾದ ಮೊಹಮ್ಮದ್ ರೈಹಾನ್ ಹಾಗೂ ವಿದ್ಯಶ್ರೀ ನರ್ಸರಿ ವಿಭಾಗದಲ್ಲಿ ಕಳೆದ ಅನಿಸಿಕೆ ವ್ಯಕ್ತಪಡಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ 2024- 25 ನೇ ಸಾಲಿನಲ್ಲಿ ತರಗತಿವಾರು ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದ ಪೋಷಕ ಶಿಕ್ಷಕ ಸಮಿತಿಯ ಸದಸ್ಯರಾದ ಶ್ರೀಮಾನ್ ಸುಮೇಶ್ ರವರು ಅಭಿನಂದನಾ ಫಲಕಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಯು ಕೆ ಜಿ ವಿದ್ಯಾರ್ಥಿ ಶಾನ್ ಕಾರ್ಯಪ್ಪ ನವರ ಪೋಷಕರಾದ ಕೌಶಲ್ಯ , 10ನೇ ತರಗತಿಯ ವಿದ್ಯಾರ್ಥಿ ವೃಶಾಂಕ್ ದೇವಯ್ಯರವರ ಪೋಷಕರಾದಂತಹ ಪ್ರಿಯಾಂಕ ಮಿಥುನ್ ಹಾಗೂ 10ನೇ ತರಗತಿಯ ಹನಾ ಫಲಕ್ ಪೋಷಕರಾದ ಶ್ರೀಮಾನ್ ಮತಿನ್ ರವರು ಮಾತನಾಡಿ ಕಾವೇರಿ ಶಾಲೆಯ ಏಳಿಗೆ ಬಗ್ಗೆ ಪ್ರಶಂಶಿಸಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯ ಅತ್ಯುತ್ತಮ ಸಾಧನೆಮಾಡಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳ ಮಾರ್ಗದರ್ಶಕರಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು.
ತಮ್ಮ ಸೀನಿಯರ್ಸ್ ನೊಂದಿಗೆ ಒಡನಾಟದ ಕ್ಷಣಗಳನ್ನು ನೆನಯುತ್ತಾ 9ನೇ ತರಗತಿಯ ವಿದ್ಯಾರ್ಥಿಗಳಾದ ಕೃತಿಕಾ ಕಾವೇರಮ್ಮ ಹಾಗೂ ಸನ ಪಿ.ಎಸ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
2024 -25 ನೇ ಸಾಲಿನ ಪೋಷಕ ಶಿಕ್ಷಕ ಸಮಿತಿಯ ಸದಸ್ಯರು ಹಾಗೂ ಪೋಷಕರಾದ ಶ್ರೀಮಾನ್ ಸೋಮೇಶ್ ರವರಿಗೆ ಶಾಲಾ ಆಡಳಿತ ಮಂಡಳಿಯವರು ಗೌರವ ಕಾಣಿಕೆಯನ್ನು ನೀಡಿ, ಅಭಿನಂದಿಸಿದರು.
ಶಾಲೆ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ವಿನೋದ್ ಪಿ.ಎನ್ ರವರು ವಿದ್ಯಾರ್ಥಿಗಳಿಗೆ”ಪ್ರತಿ ಯಶಸ್ಸಿನ ಹಿಂದೆ ಚಾಣಕ್ಯತನದಿಂದ ಮಾಡಿದ ಪ್ರಯತ್ನ ಪ್ರಯತ್ನ ಇದ್ದೇ ಇರುತ್ತದೆ” ಎಂಬುದನ್ನು ಮನವರಿಕೆ ಮಾಡುವಂತಹ ಮಾತುಗಳಾಡಿದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ, ನಂತರ ಆಗಮಿಸಿದ ಎಲ್ಲರಿಗೂ ಲಘುಪಹಾರವನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದಂತಹ ಶ್ರೀಮಾನ್ ಸುದೇ ಶ್ ಬಿ.ಎಸ್ ಕಾರ್ಯದರ್ಶಿಯರಾದ ಶ್ರೀಮಾನ್ ವಿನೋದ್ ಪಿ.ಎನ್ ಮುಖ್ಯ ಶಿಕ್ಷಕಿಯವರಾದ ಪಾರ್ವತಿ ಪಿ.ಯು ಹಾಗೂ ಸಂಯೋಜಕಿಯಾದ ಅಮೃತ ಅರ್ಜುನ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕಿಯಾದ ಶ್ರೀಮತಿ ಲೀನಾ ಸಿ. ಡಿ ಸ್ವಾಗತಿಸಿ, ಶ್ರೀಮತಿ ಭಾಗ್ಯ ಬಿ. ಡಿ ವಂದಿಸಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿಯಾದಂತಹ ಶ್ರೀಮತಿ ತಂಸೀನ ಹಾಗೂ ಶ್ರೀಮತಿ ಕಲ್ಪ ನಿರೂಪಿಸಿದರು.







