
ಮಡಿಕೇರಿ NEWS DESK ಮಾ.7 : ವಿರಾಜಪೇಟೆ ಮೂಲದ ಪ್ರಸ್ತುತ ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನೆಲೆಸಿರುವ ಕೆ.ಎಲ್.ಸೂರಜ್ (29) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 525ನೇ ರ‍್ಯಾಂಕ್ ಪಡೆದಿದ್ದಾರೆ. ಇದು ಐಎಎಸ್ ನ ನಿರೀಕ್ಷೆಯಲ್ಲಿರುವ ಅವರ ನಾಲ್ಕನೇ ಪ್ರಯತ್ನದ ಫಲವಾಗಿದ್ದು, ರ‍್ಯಾಂಕ್ ನಲ್ಲಿ ಸುಧಾರಣೆ ಕಂಡಿದ್ದಾರೆ. 2024 ರಲ್ಲಿ 3ನೇ ಪ್ರಯತ್ನದಲ್ಲಿ 713ನೇ ರ‍್ಯಾಂಕ್ ಗಳಿಸಿ ಕರ್ನಾಟಕ ಕೇಡರ್‌ನಲ್ಲೇ ಐಪಿಎಸ್ ಆಗಿ ಆಯ್ಕೆಯಾಗಿದ್ದು, ಪ್ರಸ್ತುತ
ಹೈದರಾಬಾದ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೆ.ಎಲ್.ಸೂರಜ್ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿರಾಜಪೇಟೆಯ ಕೆ.ಬಿ.ಶಾಂತಪ್ಪ ಅವರ ಕಿರಿಯ ಸಹೋದರ ನಿವೃತ್ತ ಐಆರ್‌ಎಸ್ ಅಧಿಕಾರಿ ಕೆ.ಬಿ.ಲಿಂಗರಾಜ್ ಅವರ ಪುತ್ರ. ಮೈಸೂರಿನ ಜೆಎಸ್‌ಎಸ್ ಶಾಲೆಯಲ್ಲಿ ಪ್ರಾಥಮಿಕ, ಅಳಿಕೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ವಿದ್ಯಾವರ್ಧಕ ಗೋಲ್ಡನ್ ಜ್ಯೂಬಿಲಿ ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣ ಪಡೆದ ಕೆ.ಎಲ್.ಸೂರಜ್ ಎಸ್‌ಜೆಸಿಇ ಕಾಲೇಜ್ ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿoಗ್ ಪದವಿ ಪಡೆದಿದ್ದಾರೆ.









