
ಮಡಿಕೇರಿ NEWS DESK ಮಾ.9 : ಅಪಾಯದ ಸಂದರ್ಭಗಳಲ್ಲಿ ಅಸಾಮಾನ್ಯ ಧೈರ್ಯ, ಸಾಹಸ ಮತ್ತು ಸಮಯಪ್ರಜ್ಞೆ ತೋರಿಸಿ ಇತರರ ಪ್ರಾಣ ರಕ್ಷಿಸಲು ಮುಂದಾದ ಮಕ್ಕಳನ್ನು ಗೌರವಿಸುವ ಉದ್ದೇಶದಿಂದ ರೋಟರಿ ಮಡಿಕೇರಿ ವತಿಯಿಂದ ಮಕ್ಕಳ ಶೌರ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 2025ರ ಜನವರಿ 1ರಿಂದ 2026ರ ಫೆಬ್ರವರಿ 28ರವರೆಗೆ ಸಂಭವಿಸಿದ ಘಟನೆಗಳಲ್ಲಿ ತಮ್ಮ ಪ್ರಾಣದ ಹಂಗನ್ನು ಲೆಕ್ಕಿಸದೆ ಧೈರ್ಯ ಹಾಗೂ ಸಾಹಸ ಪ್ರದರ್ಶಿಸಿ ಇತರರ ಪ್ರಾಣ ರಕ್ಷಿಸಲು ಮುಂದಾದ 06 ರಿಂದ 14 ವರ್ಷದೊಳಗಿನ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಅರ್ಹ ಮಕ್ಕಳ ಪರವಾಗಿ ಪೋಷಕರು, ಶಿಕ್ಷಕರು, ಶಾಲೆಗಳು ಅಥವಾ ಸಾರ್ವಜನಿಕರು ನಾಮ ನಿರ್ದೇಶನ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಮಾರ್ಚ್ 2026 ಎಂದು ರೋಟರಿ ಮಡಿಕೇರಿ ಪ್ರಕಟಣೆಯಲ್ಲಿ ತಿಳಿಸಿದೆ.ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ ರೂ.5 ಸಾವಿರ, ದ್ವಿತೀಯ ಬಹುಮಾನ ರೂ.3 ಸಾವಿರ ಹಾಗೂ ತೃತೀಯ ಬಹುಮಾನ ರೂ.2 ಸಾವಿರ ನೀಡಲಾಗುವುದು. ನಾಮ ನಿರ್ದೇಶನ ಸಲ್ಲಿಸುವಾಗ ಮಕ್ಕಳ ಹೆಸರು ಮತ್ತು ಪೂರ್ಣ ವಿಳಾಸ, ಓದುತ್ತಿರುವ ಶಾಲೆಯ ವಿವರ, ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ನಡೆದ ಶೌರ್ಯ ಕಾರ್ಯದ ವಿವರ, ಘಟನೆಯ ದಿನಾಂಕ ಮತ್ತು ಸ್ಥಳ, ಪತ್ರಿಕೆಯಲ್ಲಿ ಪ್ರಕಟವಾದ ವರದಿ (ಇದ್ದಲ್ಲಿ ಅದರ ಪ್ರತಿಗಳು) ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷೆ ಲಲಿತಾ ರಾಘವನ್ (ಮೊ. 94489 76838), ಗೌರವ ಕಾರ್ಯದರ್ಶಿ ಬಿ.ಎಂ.ಸೋಮಣ್ಣ (ಮೊ.7624875595) ಯುವಜನ ಸೇವೆ ಹಾಗೂ ನಿರ್ದೇಶಕರು ಅನಿಲ್ ಕೃಷ್ಣನಿ (9945447895) ಅವರನ್ನು ಸಂಪರ್ಕಿಸಬಹುದು ಎಂದು ರೋಟರಿ ಮಡಿಕೇರಿ ತಿಳಿಸಿದೆ.








