
ಮಡಿಕೇರಿ ಮಾ.11 NEWS DESK : ಅರ್ಬುದ ಕಾಯಿಲೆಯಿಂದ ಬಳಲುತ್ತಿರುವ ಅರೆಕಾಡಿನ ವಸಂತ ಎಂಬವರ ಚಿಕಿತ್ಸೆಗೆ ಮಾನವೀಯ ಸ್ನೇಹಿತರ ಒಕ್ಕೂಟದಿಂದ ಹತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಯಿತು. ಒಕ್ಕೂಟದ ಅಡ್ಮಿನ್ ಹನೀಫ್ ಸೋನಾ ಅವರ ಮುಂದಾಳತ್ವದಲ್ಲಿ
ಮಡಿಕೇರಿಯಲ್ಲಿ ನಡೆದ ಕಾರುಣ್ಯ ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರತಿನಿಧಿ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ ಅವರು ಫಲಾನುಭವಿಯ ಪತ್ನಿ ಶಿವರಂಜಿನಿ ಅವರಿಗೆ ಒಕ್ಕೂಟದ ವತಿಯಿಂದ ಹತ್ತು ಸಾವಿರ ಮೊತ್ತದ ಚೆಕ್ಕನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್, ಮಾನವೀಯ ಸ್ನೇಹಿತರ ಒಕ್ಕೂಟವು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರಲ್ಲದೆ, ಫಲಾನುಭವಿ ವಸಂತ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. ಒಕ್ಕೂಟದ ಪ್ರತಿನಿಧಿಗಳಾದ ಸುರೇಶ್ ಬಿಳಿಗೇರಿ, ಸಂತೋಷ್ ಕೆ. ಟಿ., ಒಕ್ಕೂಟದ ಮಾಜಿ ಪ್ರತಿನಿಧಿ ಪ್ರಭಾಕರ್ ನಾಪೋಕ್ಲು, ಪತ್ರಕರ್ತ ವಿಶ್ವಗುಡ್ಡೆ ಮನೆ ಮುಂತಾದವರು ಹಾಜರಿದ್ದರು.









