
ಮಡಿಕೇರಿ NEWS DESK ಮಾ.20 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಅರುವತೊಕ್ಲು ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಇಂದು ಭೇಟಿ ನೀಡಿದರು. ತಮ್ಮ ಅನುದಾನದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಅರುವತ್ತೊಕ್ಲು ಗ್ರಾಮದ ಮೈಸೂರಮ್ಮ ನಗರಕ್ಕೆ, ಗೋಣಿಕೊಪ್ಪ ಬೈಪಾಸ್ ನಿಂದ ತೆರಳುವ ರಸ್ತೆಗೆ ರೂ.18 ಲಕ್ಷಗಳಲ್ಲಿ ಕೈಗೊಂಡ ಕಾಮಗಾರಿಯ ಲೋಕಾರ್ಪಣೆ ಮಾಡಿದ ಬಳಿಕ, ರೂ.15 ಲಕ್ಷಗಳಲ್ಲಿ ನಿರ್ಮಾಣಗೊಂಡ ಕಾಡ್ಲ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಶಾಸಕರು ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಶಾಸಕರ ಅನುದಾನ ರೂ.3.50 ಲಕ್ಷದಲ್ಲಿ, ಕಾಡ್ಯಮಾಡ ಐನ್ ಮನೆಗೆ ತೆರಳುವ ಓಣಿಗೆ ಮೆಟ್ಟಲುಗಳನ್ನು ನಿರ್ಮಿಸಲಾಗಿದೆ. ಐನ್ ಮನೆ ಪ್ರಮುಖರು ನೀಡಿದ ಆತಿಥ್ಯವನ್ನು ಶಾಸಕರು ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರಿರ ನವೀನ್, ಬ್ಲಾಕ್ ಅಧ್ಯಕ್ಷೆ ಮುಕಳೇರ ಆಶಾ ಪೂಣಚ್ಚ, ವಲಯ ಅಧ್ಯಕ್ಷರು ಯಶ್ವಿನ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಟಾಟು ಮೊಣ್ಣಪ್ಪ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಕುಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷರು ಮಂಜುಳಾ, ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ ಜೆ ಬಾಬು, ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷರು ಜಮ್ಮಡ ಸೋಮಣ್ಣ, ದೇವಸ್ಥಾನ ಅಧ್ಯಕ್ಷರು ಉತ್ತಯ್ಯ, ಕಂದ ದೇವಯ್ಯ, ಮುತ್ತಣ್ಣ, ಜಮ್ಮಡ ಮೋಹನ್, ನಂದ, ಚೇತನ್, ಬಿಎಲ್ಎ ಲಾಲು ಸ್ಟಾಲಿನ್, ಡಾಡು ಜೋಸೆಫ್, ಅಜ್ಜಿಕುಟ್ಟಿರ ಪೊನ್ನು ಗಿರೀಶ್, ಸಾಜಿ ಅಚ್ಚುತನ್, ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಝರೀನಾ, ಮೇರಿ, ಗುತ್ತಿಗೆದಾರರು ಚೇರಂಡ ಮೋಹನ್ ಕುಶಲಪ್ಪ, ಮುತ್ತಪ್ಪ, ಆಶೀರ್ವಾದ ಮುತ್ತಪ್ಪ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯ ಕಿರಿಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.









