
ಮಡಿಕೇರಿ NEWS DEESK ಮಾ.20 : ಕಾನೂನು ಮತ್ತು ನಿಯಮ ಬದ್ಧವಾಗಿ ಪೆರುಂಬಾಡಿ ಸಮೀಪದ ಬಾಳುಗೋಡಿನಲ್ಲಿ ಲೇಔಟ್‌ಗಳನ್ನು ಮಾಡಲಾಗುತ್ತಿದ್ದರು, ಇದಕ್ಕೆ ಪರಿಸರದ ಹೆಸರಿನಲ್ಲಿ ತಡೆಮಾಡುವ ಪ್ರಯತ್ನ ಮಾಡಲಾಗುತ್ತಿದೆಯೆಂದು ಲೇಔಟ್ ಮಾಲೀಕರಾದ ಡಾ.ಕೆ.ಎಸ್.ಪ್ರಸಾದ್ ಪಣಿಕ್ಕರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳುಗೋಡಿನಲ್ಲಿ ತಾವು ಕೆಲ ವರ್ಷಗಳ ಹಿಂದೆ ಪರಿವರ್ತನೆಯಾದ ಜಾಗವನ್ನೆ ಖರೀದಿ ಮಾಡಿದ್ದು, ಅದರಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಿವೇಶನಗಳನ್ನು ರೂಪಿಸಲಾಗುತ್ತಿದೆ. ಈ ಹಂತಗಳಲ್ಲಿ ಯಾವುದೇ ರೀತಿಯಲ್ಲು ಅಲ್ಲಿನ ಪರಿಸರಕ್ಕೆ ಧಕ್ಕೆಯುಂಟಾಗುವ ಕೆಲಸ ನಡೆಸಿಲ್ಲವೆಂದು ಸ್ಪಷ್ಟಪಡಿಸಿದರು. ಲೇಜೌಟ್‌ನ್ನು ಅತ್ಯಂತ ವೈಜ್ಞಾನಿಕವಾಗಿ ಸಿದ್ಧಪಡಿಸಲಾಗುತ್ತಿದ್ದು, ಲೇಔಟ್‌ನಲ್ಲಿ ಸುಮಾರು 70 ನಿವೇಶನಗಳು ಬರುತ್ತದೆಯಾದರೆ, ಲೇಜೌಟ್ ಒಳಭಾಗ 40 ಅಡಿ ಅಗಲದ ರಸ್ತೆಯನ್ನು ನಿರ್ಮಿಸಲಾಗಿದೆ. ಇಂತಹ ಒಂದು ಪ್ರಯತ್ನ ಇತರೆ ಯಾವುದೇ ಲೇಔಟ್‌ಗಳಲ್ಲು ಇಲ್ಲವೆಂದು ಅವರು ತಿಳಿಸಿದರು. ಬಾಳೂಗೋಡಿನಲ್ಲಿ ಲೇಔಟ್‌ನೊಂದಿಗೆ ಅಮೃತಾನಂದಮಯಿ ಚಾರಿಟೇಬಲ್ ಟ್ರಸ್ಟ್ನಿಂದ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಲೇಔಟ್ ಸೇರಿದಂತೆ ಸುತ್ತಮುತ್ತಲ ನಿವಾಸಿಗಳಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸಲಿದೆ. ಲೇಔಟ್ ನಿರ್ಮಾಣದಿಂದ ಸುತ್ತಮುತ್ತಲ ಪ್ರದೇಶವೂ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆಯೆಂದು ಡಾ. ಕೆ.ಎಸ್. ಪ್ರಸಾದ್ ಪಣಿಕ್ಕರ್ ತಿಳಿಸಿದರು.ಕಾನೂನು ಸಲಹೆಗಾರರಾದ ಟಿ.ಪಿ.ಕೃಷ್ಣ ಅವರು ಮಾತನಾಡಿ, ಲೇಜೌಟ್ ಕಾನೂನಾತ್ಮಕವಾಗಿ ಅತ್ಯಂತ ಕ್ರಮ ಬದ್ಧವಾಗಿದೆ ಮತ್ತು ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲವೆಂದು ತಿಳಿಸಿದರು. ಗೋಷ್ಠಿಯಲ್ಲಿ ಜೆಸಿಂತಾ ಪ್ರಸಾದ್ ಪಣಿಕ್ಕರ್, ಎ.ಕೆ.ಅನಿಲ್ ಉಪಸ್ಥಿತರಿದ್ದರು.








