
ಸೋಮವಾರಪೇಟೆ ಮಾ.20 NEWS DESK : ಹಿಂದೂ ಗೆಳೆಯರ ಬಳಗ ಗೌಡಳ್ಳಿ-ದೊಡ್ಡಮಳ್ತೆ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ನಡೆದ 7ನೇ ವರ್ಷದ ಮುಕ್ತ ಫುಟ್ಬಾಲ್ ಪಂದ್ಯಾವಳಿಯ ಪ್ರಾಯೋಜಕರು ಮತ್ತು ದಾನಿಗಳಾದ ಚಾಮೇರ ಪವನ್ ದೇವಯ್ಯ ಚಾಲನೆ ನೀಡಿದರು. ಪ್ರಥಮ ಬಹುಮಾನ 1,50,000 ರೂ.ಗಳನ್ನು ಶಾಸಕ ಡಾ.ಮಂತರ್‍ಗೌಡ, ದ್ವಿತೀಯ ಬಹುಮಾನ ನಗದು 1,00,000 ರೂ, ಗಳನ್ನು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಟ್ರೋಫಿಗಳನ್ನು ದಾನಿಗಳಾದ ಹಿತ್ತಲಗೇರಿ ವಸಂತ್, ಯಶ್ವಂತ್, ಸುಮಂತ್, ಹಿರಿಕರ ಶಶಿಕಲಾ, ರಕ್ಷಿತ್, ಶರಣ್ ನೀಡಿದ್ದಾರೆ. ಈ ಸಂದರ್ಭ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್‍ಕುಮಾರ್, ಬಳಗದ ಅಧ್ಯಕ್ಷ ಕೆ.ಪಿ.ಆದರ್ಶ್, ಉಪಾಧ್ಯಕ್ಷ ಅಕಾಶ್ ಮುನ್ನಾ, ಕಾರ್ಯದರ್ಶಿ ಪ್ರಜ್ವಲ್ ನಂದಿಗುಂದ, ಖಜಾಂಚಿ ನವೀನ್ ಅಜ್ಜಳ್ಳಿ ಇದ್ದರು.









