Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*
  • *ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*
  • *ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*
  • *ವಿರಾಜಪೇಟೆ ಎಲ್ ಎಸ್ ಎ ಕೇರ್ ಸೌಹಾರ್ದ ಕಾರ್ಯಕ್ರಮ*
  • *ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*
  • *ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*
  • *ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*
  • *ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *
  • *ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*
  • *ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*

ಮಾರ್ಚ್ 21, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಮಾ.21 : ಯಾರಿಗೂ ಹೋಲಿಕೆಯಿಲ್ಲದ ಒಂದು ಅಪರೂಪದ ಮಾನವ ಸಂಕುಲವಾಗಿರುವ ಕೊಡವರು ತಮ್ಮತನವನ್ನು ಉಳಿಸಿಕೊಳ್ಳಲು ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆಯೇ ಹೊರತು ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಅಲ್ಲವೆಂದು ಖ್ಯಾತ ವಕೀಲ, ಲೇಖಕ ಹಾಗೂ ಚಿಂತಕ ಕೆ.ಪಿ.ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರು ಕೊಡಗಿನ ಆದಿಮಸಂಜಾತರು, ಕೊಡವರು ಪ್ರತ್ಯೇಕ ರೇಸ್ ಅಥವಾ ಮೂಲ ವಂಶಸ್ತ ಜನಾಂಗವಾಗಿದ್ದು , ಈ ಜನಾಂಗದ ನೆಲೆ ಮತ್ತು ನೆಲ ಇಲ್ಲಿಯೇ ಇದೆ ಎಂದರು. ವರ್ಣಾಶ್ರಮದ, ಚಾತುರ್ವರ್ಣದ ಯಾವ ಅಂಶವು ಕೊಡವರಲ್ಲಿ ಇಲ್ಲದಂತ ಪ್ರಕೃತಿ, ಭೂದೇವಿ, ಜಲದೇವಿ, ಪೂರ್ವಿಕರು, ಮಂದ್ ಮತ್ತು ಸೂರ್ಯ ಚಂದ್ರ, ಗತಿಸಿ ಹೋದವರ ಆತ್ಮ ಇತ್ಯಾದಿಗಳನ್ನು ಪೂಜಿಸುವ ಇಡೀ ದೇಶದಲ್ಲೇ ಬೇರೆ ಯಾರಿಗೂ ಹೋಲಿಕೆಯಿಲ್ಲದ ಒಂದು ಅಪರೂಪದ ಮಾನವ ಸಂಕುಲವಾದ ಕೊಡವರು ಸೂರ್ಯ ಚಂದ್ರ ಇರುವವರೆಗೆ ಈ ಭೂಮಿಯಲ್ಲಿ ಬಾಳಿ ಬದುಕಬೇಕು, ಮತ್ತವರ ಜನ್ಮಭೂಮಿ ಉಳಿಯಬೇಕೆಂಬುದೇ ನಮ್ಮಂತವರ ಆಶಯವಾಗಿದೆ. ಅದು ಸಾಧ್ಯವಾಗಬೇಕಾದರೆ ಕೊಡವರು ಸಂವಿಧಾನದಲ್ಲಿ ತಾವು ಬೇರೆ ಜನಾಂಗವೆoದು ಪರಿಗಣಿಸಲ್ಪಡಬೇಕು. ಹಾಗೆ ಪರಿಗಣಿಸಲ್ಪಡಬೇಕಾದರೆ 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರು ಪ್ರತ್ಯೇಕವೆಂದು ಗುರುತಿಸಲ್ಪಡಬೇಕು. ಈ ಸಂಬoಧ ಮತ್ತು ಕೊಡವರ ಹಕ್ಕುಗಳ ಪರವಾಗಿ ತಪಸ್ಸಿನಂತೆ ಅವಿರತವಾಗಿ ಹೋರಾಡುತ್ತಿರುವ ಸಿಎನ್‌ಸಿ ಯನ್ನು ಬೆಂಬಲಿಸಬೇಕೆoದು ಕೆ.ಪಿ.ಬಾಲಸುಬ್ರಮಣ್ಯ ಕರೆ ನೀಡಿದರು. ಹಿರಿಯ ವಿದ್ವಾಂಸ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಅವರು ಮಾತನಾಡಿ ಬಲಾಢ್ಯ ಜನಾಂಗದ ಮಧ್ಯೆ ಕೊಡವರು ಮುಳುಗಿ ಹೋದರೆ ಕೊಡವರ ಅಸ್ಮಿತೆ ಉಳಿಯುವುದಿಲ್ಲ, ಕೊಡವರಿಗೆ ಸಂವಿಧಾನಿಕ ಹಕ್ಕು ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ಕೊಡವರ ಹೆಗ್ಗುರುತಾದ ಅಪರೂಪದ ಹಬ್ಬ, ಭಾಷೆ, ಆರಾಧನಾ ಪದ್ಧತಿ, ಆಹಾರ ಪದ್ಧತಿ, ಉಡುಗೆ ತೊಡುಗೆ, ಶವ ಸಂಸ್ಕಾರ, ಸಪ್ತಪದಿ ಇಲ್ಲದ ಮದುವೆ, ಜಾನಪದ ನೃತ್ಯ, ಹಾಡುಗಳು, ಮಾನವ ಶಾಸ್ತ್ರ ಮತ್ತು ಜನಾಂಗೀಯ ನರಶಾಸ್ತ್ರದ ಎಲ್ಲಾ ವಿಧಿ ವಿಧಾನಗಳನ್ನು ಬೇರೆಯವರೊಂದಿಗೆ ಬೆರೆತು ಸಮೀಕರಣಗೊಳ್ಳದಂತೆ ಎಚ್ಚರವಹಿಸಿ ಪ್ರತ್ಯೇಕವಾಗಿ ಮುಂದುವರೆಸಿ ಜತನದಿಂದ ಕಾಪಾಡಬೇಕೆಂದು ಸಲಹೆ ನೀಡಿದರು.
ರಾಜ್ಯ, ರಾಷ್ಟçವನ್ನಾಳುವ ಬಹು ಸಂಖ್ಯಾತರೊoದಿಗೆ ಕರಗಿ ಕಳೆದು ಹೋದ ಮೇಲೆ ಆ ಮುಳುಗಡೆಯಾದ ವ್ಯಕ್ತಿ ತನ್ನತನವನ್ನು ಕಳೆದುಕೊಂಡು ಬಹು ಜನನಾಂಗದ ಮರ್ಜಿಯಲ್ಲಿ ಕೊಡವ ಹೆಸರಿನಲ್ಲಿ ಶಾಸನ ಸಭೆಯಲ್ಲೋ ಅಥವಾ ಪಾರ್ಲಿಮೆಂಟಿನಲ್ಲೋ ಸದಸ್ಯನಾದರೆ ಆತ ಕೊಡವರ ನೈಜ ಪ್ರತಿನಿಧಿಯಾಗಲಾರ. ಬದಲಿಗೆ ಆತ ಡಮ್ಮಿ ಪ್ರತಿನಿಧಿಯಾಗಲಿದ್ದಾರೆ ಎಂದು ಎಚ್ಚರಿಸಿದರು. ಬಲಾಢ್ಯರೊಂದಿಗೆ ಸೇರಿ ತಮ್ಮ ಸ್ವಾರ್ಥ ಸಾಧನೆಗೆ ಬಲಾಢ್ಯರ ಅವಕಾಶವಾದಿತನ ಮತ್ತು ಅಪರಾಧಿತನದಲ್ಲಿ ಭಾಗಿಯಾಗಿ ಬಲಿಯಾಗದಂತೆ ಎಚ್ಚರ ವಹಿಸುವುದೇ ನಿಜವಾದ ಜನಾಂಗೀಯ ತಾರತಮ್ಯ ನಿವಾರಣೆಯ ಅರ್ಥವೆಂದು ಒತ್ತಿ ಹೇಳಿದರು.ಕೊಡವ ಅಸ್ಮಿತೆ, ಪ್ರತ್ಯೇಕತೆ, ಅನನ್ಯತೆ ಮತ್ತು ಅಪೂರ್ವತೆಯ ಗುಣಗಳನ್ನು ಈ ದೇಶದ ಎಲ್ಲರು ಪರಿಗಣಿಸಿ ಆ ಮೂಲಕ ಕೊಡವರಿಗೆ ದೊರೆಯುವ ವಿಶೇಷ ಪ್ರಾತಿನಿಧ್ಯ ಮಾತ್ರ ಕೊಡವರ ನೈಜ ಧ್ವನಿಯಾಗಲಿದೆ. ಕೊಡವರು ತಮ್ಮ ಜನ್ಮಭೂಮಿಯನ್ನು ತೊರೆಯಬಾರದು, ತಮ್ಮ ಪೂರ್ವಾರ್ಜಿತ ಭೂಮಿಯನ್ನು ಮಾರಾಟ ಮಾಡಬಾರದು, ಮುಂದೆ ಎಂದಾದರೂ ಒಂದು ದಿನ ಕೊಡವ ಲ್ಯಾಂಡ್ ದೊರೆತೇ ದೊರೆಯುತ್ತದೆ. ಹೀಗೆ ಕೊಡವ ಲ್ಯಾಂಡ್ ದೊರೆತಾಗ, ಕೊಡವರೇ ಇಲ್ಲದ ಕೊಡವ ನೆಲೆ “A KING WITHOUT KINGDOM ” ಆಗಿ ಬಿಡುತ್ತದೆ. “ರಾಜಾಧಿಪತ್ಯ ಕಳೆದುಕೊಂಡ ರಾಜನಂತೆ”ಯಾಗುತ್ತದೆ, ಆದ್ದರಿಂದ ಸರ್ವ ಕೊಡವರು ಏಕ ಮನಸ್ಸಿನಿಂದ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಾಂವಿಧಾನಿಕ, ದೃಢ ಸಂಕಲ್ಪದ ಹೋರಾಟಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಎಂದು ಡಾ.ಎಲ್.ಹನುಮಂತಯ್ಯ ಕರೆ ನೀಡಿದರು. ಜಾನಪದ ಸಂಶೋಧಕಿ ಪ್ರೊ.ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಅವರು ಮಾತನಾಡಿ ಕೊಡವ ಭಾಷಾ ಸಮೃದ್ಧಿ, ಕೊಡವ ಜನಾಂಗೀಯ ಹಿರಿಮೆ ಹೆಗ್ಗುರುತಿನ ಬಗ್ಗೆ ಸುದೀರ್ಘ ಪ್ರಬಂಧ ಮಂಡಿಸಿ ಕೊಡವರ ಶ್ರೀಮಂತ ಜಾನಪದ ಪರಂಪರೆ ಸುಮಾರು ನಾಲ್ಕೂವರೆ ಸಾವಿರ ವರ್ಷಗಳ ಸುದೀರ್ಘ ಹಿನ್ನೆಲೆಯನ್ನು ಹೊಂದಿದೆ ಎಂದರು.
ಹೈ ಕೋರ್ಟ್ ನ ಹಿರಿಯ ವಕೀಲ ಎಂ.ಟಿ.ನಾಣಯ್ಯ ಅವರು ಮಾತನಾಡಿ ಸಿಎನ್‌ಸಿಯ 36 ವರ್ಷಗಳ ಸುದೀರ್ಘ ಹೋರಾಟಕ್ಕೆ ಎಲ್ಲಾ ಕೊಡವರು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು. ಆದಿಮಸಂಜಾತ ಏಕ ಜನಾಂಗೀಯ ಅನಿಮಿಸ್ಟಿಕ್ ನಂಬುಗೆಯ ಕೊಡವರ ಜನ್ಮ ಭೂಮಿಯಾದ ಪ್ರಾಚೀನ ನಾಡುಗಳನ್ನು ಸಂವಿಧಾನದ 244, 371, ಮತ್ತು 6ನೇಯ ಶೆಡ್ಯೂಲ್ ನ ಪ್ರಕಾರ ಕೊಡವ ಲ್ಯಾಂಡ್ ಗಾಗಿ ಕಳೆದ 36 ವರ್ಷಗಳಿಂದ ಸಿಎನ್‌ಸಿ ಹೋರಾಟ ನಡೆಸುತ್ತಿದೆ ಎಂದರು. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಯಂ ಆಡಳಿತ, ಸ್ವಯಂ ನಿರ್ಣಯದ ಹಕ್ಕು, ಕೊಡವ ಬುಡಕಟ್ಟು ಜನಾಂಗಕ್ಕೆ ರಾಜ್ಯಾಂಗ ಭದ್ರತೆ ನೀಡಬೇಕು, ಕೊಡವರ ಕೋವಿ ಹಕ್ಕನ್ನು ಸಿಖ್ಖರ ಕೃಪಾಣದ ಮಾದರಿಯಲ್ಲಿ ಧಾರ್ಮಿಕ ಸಂಸ್ಕಾರವೆoದು ಪರಿಗಣಿಸಬೇಕು, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರ್ಪಡೆಗೊಳಿಸಬೇಕು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೊದ intangibal cultural heritage ಪಟ್ಟಿಗೆ ಸೇರ್ಪಡೆ ಮಾಡಬೇಕು, 1966ರ ಹೆಲ್ಸಿಂಕಿ ನಿಯಮದ ಪ್ರಕಾರ ಕಾವೇರಿ ನದಿ ನೀರಿನ ಕೊಡವರ ಪಾಲಿನ ಹಕ್ಕು ನೀಡಬೇಕು, ಸಂವಿಧಾನದ 49ನೇ ವಿಧಿ ಪ್ರಕಾರ ದೇವಟ್ ಪರಂಬು ನರಮೇಧ ದುರಂತ ಸ್ಥಳದಲ್ಲಿ ಸ್ಮಾರಕ, ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆಯಲ್ಲಿ ಸ್ಮಾರಕ, ಹುಲುಗುಲಿ, ಮುಳ್ಳುಸೋಗೆ ಮತ್ತು ಲಕ್ಕಡಿಕೋಟೆಯಲ್ಲಿ ಕೊಡವ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕು, ಭಾರತದ ಈಶಾನ್ಯ ರಾಜ್ಯಗಳ ರೀತಿ ಜನಸಂಖ್ಯಾ ಪಲ್ಲಟ ತಡೆಗೆ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆ ಜಾರಿಗೆ ತರಬೇಕು, ಸಿಕ್ಕಿಂನ ಭೌದ್ಧ ಬಿಕ್ಷುಗಳಿಗೆ ಕೊಡಮಾಡಿರುವ ಸಂಘ ಅದೃಶ್ಯ ಮತ ಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ವಿಧಾನಸಭೆಯನ್ನು ಪ್ರತಿನಿಧಿಸಲು ಪ್ರತ್ಯೇಕ ಕೊಡವ ಮತ ಕ್ಷೇತ್ರ ಸ್ಥಾಪಿಸಬೇಕು, ಕೊಡವರ ಕಳೆದು ಹೋದ ಪೂರ್ವಾರ್ಜಿತ ಆಸ್ತಿಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ indeginous peoples propety reclaimning law ಮೂಲಕ ಮರಳಿ ಪಡೆಯುವ ಹಕ್ಕು ನೀಡಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಕಲಿಯಂಡ ಪ್ರಕಾಶ್ ಸ್ವಾಗತಿಸಿ, ಅಜ್ಜಿಕ್ಕುಟ್ಟಿರ ಲೋಕೇಶ್ ವಂದಿಸಿದರು, ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿದರು. ನಂದಿನೆರವoಡ ನಿಶಾ ಅಚ್ಚಯ್ಯ ಕಾರೋಣ ಪಾಟ್ ಹಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಪ್ರದಾಯದoತೆ ಬಾಳೆ ಕಡಿದು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ದುಡಿ ಕೊಟ್ಟ್ ಪಾಟ್ ಮೂಲಕ ಅತಿಥಿಗಳನ್ನು ಬರ ಮಾಡಿಕೊಳ್ಳಲಾಯಿತು. ಅಂತಿಮವಾಗಿ ಸೂರ್ಯ ಚಂದ್ರ, ಭೂದೇವಿ, ಜಲದೇವಿ, ಪ್ರಕೃತಿ ದೇವಿ, ಗುರುಕಾರೋಣ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿ ಯ ಕೊಡವ ಲ್ಯಾಂಡ್ ಹೋರಾಟಕ್ಕೆ ಅರ್ಪಿಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ನೆರೆದಿದ್ದವರು ಸ್ವೀಕರಿಸಿದರು. ರಾಷ್ಟ್ರಗೀತೆ ಜನಗಣಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತಾ ಗಣಪತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದೇಟಿರ ಕವಿತಾ ಸುಬ್ಬಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ನಂದಿನೆರವoಡ ನಿಶಾ ಅಚ್ಚಯ್ಯ, ಪಚ್ಚರಂಡ ಶಾಂತಿ ಪೂನ್ನಪ್ಪ, ಅಜ್ಜಿನಕಂಡ ಇನಿತಾ ಮಾಚಯ್ಯ, ನಾಯಕಂಡ ಶಾಂತಿ, ಮಾಚ್ಚರಂಡ ಸಿಂಧು, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಪುಳ್ಳಂಗಡ ನಟೇಶ್, ಪಟ್ಟಮಡ ಕುಶ, ಅಜ್ಜಿಕ್ಕುಟ್ಟಿರ ಲೋಕೇಶ್, ಚಂಬoಡ ಜನತ್, ನಂದೇಟಿರ ರವಿ ಸುಬ್ಬಯ್ಯ, ಬೊಟ್ಟಂಗಡ ಗಿರೀಶ್, ಬಿದ್ದಂಡ ಅಚ್ಚಯ್ಯ, ಕೊಂಗೇಟಿರ ಅನಿಲ್ ಕುಟ್ಟಪ್ಪ, ಕುಕ್ಕೆರ ಜಯ ಚಿಣ್ಣಪ್ಪ, ಮಣವಟ್ಟಿರ ಜಗದೀಶ್, ಕಿರಿಯಮಡ ಶೆರಿನ್, ಮಂದಪoಡ ಮನೋಜ್ ಮಂದಣ್ಣ, ಉದಿಯಂಡ ಚೆಂಗಪ್ಪ, ಪೊರಿಮಂಡ ದಿನಮಣಿ ಪೂವಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮಣವಟ್ಟಿರ ಚಿಣ್ಣಪ್ಪ, ಬೇಪಡಿಯಂಡ ದಿನು, ಚೋಳಪಂಡ ನಾಣಯ್ಯ, ಬೇಪಡಿಯಂಡ ಬಿದ್ದಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ನಂದಿನೆರವoಡ ವಿಜು, ಸೋಮೆಯಂಡ ರೇಷ, ಅಪ್ಪನೆರವಂಡ ವಿನು, ಬಡುವಂಡ ವಿಜಯ, ಚಂಗAಡ ಚಾಮಿ ಪಳಂಗಪ್ಪ, ನಂದಿನೆರವoಡ ಅಯ್ಯಣ್ಣ, ಅಜ್ಜಿನಕಂಡ ಸನ್ನಿ ಮಾಚಯ್ಯ, ಪುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಪಾಲೇಕಂಡ ಪ್ರಧಾನ್ ಪೂಣಚ್ಚ, ನಂದೇಟಿರ ಜೀವನ್, ಅಳಮಂಡ ಲವ, ಪೂಳಂಡ ಪೂವಯ್ಯ, ಪೊರಿಮಂಡ ಅವಿನಾಶ್, ಮುಲ್ಲೆಂಗಡ ದರ್ಶನ್ ಸುಬ್ಬಯ್ಯ, ಪಟ್ಟಮಾಡ ಪೃಥ್ವಿ ಮತ್ತಿತರರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*

ಆಗಷ್ಟ್ 25, 2026

*ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*

ಆಗಷ್ಟ್ 25, 2026

*ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*

ಆಗಷ್ಟ್ 25, 2026

*ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*

ಆಗಷ್ಟ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.25: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡು ವ್ಯಾಪಕವಾಗಿ ಭಾರೀ ಗಾಳಿ ಹಾಗೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ,…

*ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*

ಆಗಷ್ಟ್ 25, 2026

*ವಿರಾಜಪೇಟೆ ಎಲ್ ಎಸ್ ಎ ಕೇರ್ ಸೌಹಾರ್ದ ಕಾರ್ಯಕ್ರಮ*

ಆಗಷ್ಟ್ 25, 2026

*ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*

ಆಗಷ್ಟ್ 24, 2026

*ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*

ಆಗಷ್ಟ್ 24, 2026

*ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*

ಆಗಷ್ಟ್ 24, 2026

*ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *

ಆಗಷ್ಟ್ 24, 2026

*ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*

ಆಗಷ್ಟ್ 24, 2026

*ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*

ಆಗಷ್ಟ್ 24, 2026

*ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ*

ಆಗಷ್ಟ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.