
ಮಡಿಕೇರಿ NEWS DESK ಮಾ.24 : ಶ್ರೀಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ 37ನೇ ವರ್ಷದ ಶ್ರೀ ರಾಮೋತ್ಸವ ಹಾಗೂ ದ್ವಿತೀಯ ವರ್ಷದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಇದೇ ಮಾ.26 ಮತ್ತು 27 ರಂದು ವಿಜೃಂಭಣೆಯಿAದ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಅವರು ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಕುರಿತು ಮಾಹಿತಿ ನೀಡಿದರು. ಮಾ.26ರಂದು ಸಂಜೆ 5 ಗಂಟೆಗೆ ಶ್ರೀ ರಾಮೋತ್ಸವದ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನದಿಂದ ನಗರದಲ್ಲಿ ಭವ್ಯ ಮೆರವಣಿಗೆ ಸಾಗಲಿದೆ. ಮೆರವಣಿಗೆ ಸಂದರ್ಭ ವಿಶೇಷ ಪಲ್ಲಕ್ಕಿಯಲ್ಲಿ ಆಸೀನಗೊಂಡ ಶ್ರೀ ಕೋದಂಡ ರಾಮ ಪರಿವಾರ ಉತ್ಸವ ಮೂರ್ತಿಯನ್ನು ಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ತೆರಳಲಾಗುತ್ತದೆ. ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತಕ್ಕೆ ಸಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ವಿವಿಧ ಆಕರ್ಷಕ ನೃತ್ಯ, ಚಂಡೆ ವಾದ್ಯ ಸಹಿತ ಸಾಂಸ್ಕೃತಿಕ ಕಲಾತಂಡಗಳು, ಕಲಶ ಹೊತ್ತ ಮಹಿಳೆಯರು, ವಿವಿಧ ತಂಡಗಳಿAದ ಭಜನೆಯೊಂದಿಗೆ ಮೆರವಣಿಗೆ ಸಾಗಲಿದೆ. ಮಹದೇವಪೇಟೆಯ ಬನ್ನಿ ಮಂಟಪದವರೆಗೆ ತೆರಳಿ ಅಲ್ಲಿಂದ ಶ್ರೀ ಕೋದಂಡ ರಾಮ ದೇವಾಲಯವನ್ನು ಸೇರಲಿದೆ. ಅಂದು ರಾತ್ರಿ ದೇವಾಲಯದ ಆವರಣದಲ್ಲಿ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮಾ.27 ರಂದು ಬೆಳಿಗ್ಗೆ 8 ಗಂಟೆಯಿoದ ದೇವಾಲಯದ ಆವರಣದಲ್ಲಿ ಕ್ಷೇತ್ರ ತಂತ್ರಿಯವರಾದ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಮತ್ತು ದೇವಾಲಯದ ಪುನರ್ ಪ್ರತಿಷ್ಠಾಪನಾ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಗಳು ಜರುಗಲಿವೆ. ಆ ದಿನ ಗುರು ಗಣಪತಿ ಹೋಮ, ಮಹಾ ಸಂಕಲ್ಪ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ತತ್ವಕಲಾ ಹೋಮ, ಶಾಂತಿ ಹೋಮ, ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ನವಕ ಪ್ರಧಾನ, ಕಲಶಾಭಿಷೇಕ, ಕುಂಭಾಭಿಷೇಕ ನಡೆಯಲಿದೆ. ಅಲ್ಲದೆ ದೇವಾಲಯ ಆವರಣದಲ್ಲಿ ದೇವ ನರ್ತನ ಕಾರ್ಯಕ್ರಮವಿದೆ. ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಮಂತ್ರಾಕ್ಷತೆ, ತೀರ್ಥ ಪ್ರಸಾದ ನಡೆಯಲಿದೆ. ಆ ನಂತರ ದೇವಾಲಯ ಆವರಣದಲ್ಲಿ ಕೋಸಂಬರಿ- ಪಾನಕ ವಿತರಣೆಯಾಗಲಿದೆ. ಅಲ್ಲದೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 5 ರಿಂದ 7 ರವರೆಗೆ ವಿವಿಧ ಭಜನಾ ತಂಡಗಳಿAದ ಭಜನೆ ನಡೆಸಲಾಗುತ್ತದೆ. ಬಳಿಕ ಸಂಜೆ 7 ಗಂಟೆಗೆ ಬೆಂಗಳೂರು ಹಲಸೂರುವಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಶ್ರೀ ಬೋಧಸ್ವರೂಪಾನಂದಜಿ ಮಹಾರಾಜ್ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆೆ. ನಂತರ ರಾತ್ರಿ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಕೆ.ಎಂ.ಗಣೇಶ್ ವಿವರಿಸಿದರು. ವಿದ್ಯಾರ್ಥಿಗಳಿಗೆ 10ನೇ ತರಗತಿ ಪರೀಕ್ಷೆ ನಡೆಯುತ್ತಿರುವ ಕಾರಣ ಮಾ.28 ರಂದು ಸಂಜೆ ಗಾಂಧಿ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಮಾ.25 ರಂದು ಕ್ರೀಡಾ ಸಮಿತಿಯ ವತಿಯಿಂದ ಶ್ರೀ ಕೋದಂಡ ರಾಮ ದೇವಾಲಯದ ಆವರಣದಲ್ಲಿ ರಂಗೋಲಿ ಸೇರಿದಂತೆ ವಿವಿಧ ಕ್ರೀಡಾಗಳು ನಡೆಯಲಿವೆ ಎಂದರು. ಶ್ರೀಕೋದoಡ ರಾಮ ದೇವಾಲಯ ಟ್ರಸ್ಟ್ ನ ಪ್ರಧಾನ ಸಲಹೆಗಾರ ಜಿ.ರಾಜೇಂದ್ರ ಅವರು ಮಾತನಾಡಿ ಕಳೆದ 37 ವರ್ಷಗಳಿಂದ ಶ್ರೀರಾಮನವಮಿಯನ್ನು ಅತ್ಯಂತ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ರಾಮನವಮಿ ಆಚರಣೆಯ ಪರಿಕಲ್ಪನೆಯನ್ನು ಮೊದಲು ಹುಟ್ಟು ಹಾಕಿದ್ದು ಶ್ರೀಕೋದಂಡ ರಾಮ ದೇವಾಲಯ ಎಂದು ತಿಳಿಸಿದರು. ಶ್ರೀಕೋದಂಡ ರಾಮೋತ್ಸವ ಸಮಿತಿ ವತಿಯಿಂದ ನಡೆಯುವ ರಾಮೋತ್ಸವದಲ್ಲಿ ಎಲ್ಲಾ ಸಮುದಾಯದ ಮಂದಿ ಪಾಲ್ಗೊಳ್ಳಲಿದ್ದಾರೆ. ರಾಜಕೀಯ ರಹಿತವಾಗಿ, ಯಾವುದೇ ಪ್ರಚೋದನೆ ಇಲ್ಲದೆ ಸೌಹಾರ್ದಯುತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅನ್ನಸಂತರ್ಪಣೆಗಾಗಿ ಭಕ್ತರಿಂದ ಅಭೂತಪೂರ್ವ ಸಹಕಾರ ದೊರೆಯುತ್ತಿದೆ ಎಂದರು.
ಲಕ್ಷö್ಮಣ, ಸೀತಾ ಹಾಗೂ ಆಂಜನೇಯ ಸಹಿತರಾಗಿ ಮಲ್ಲಿಕಾರ್ಜುನ ನಗರದಲ್ಲಿ ನೆಲೆ ನಿಂತಿರುವ ಶ್ರೀಕೋದಂಡರಾಮನಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥಿಸಲಾಗಿದೆ. ವಿಶ್ವ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ನಮ್ಮ ಸಂಕಲ್ಪವಾಗಿದೆ. ರಾಮೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿ.ರಾಜೇಂದ್ರ ಮನವಿ ಮಾಡಿದರು. ಟ್ರಸ್ಟ್ ನ ಮಾಜಿ ಅಧ್ಯಕ್ಷ ಹೆಚ್.ಮಂಜುನಾಥ್ ಅವರು ಮಾತನಾಡಿ ಶ್ರೀಕೋದಂಡ ರಾಮ ದೇವಾಲಯ ಅತ್ಯಂತ ಶಕ್ತಿಶಾಲಿ ಕ್ಷೇತ್ರವಾಗಿದ್ದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಮಾ.26 ರಂದು ನಡೆಯುವ ಮೆರವಣಿಗೆಯಲ್ಲಿ ವಿವಿಧ ಮಂಟಪಗಳು ಹಾಗೂ ಪಲ್ಲಕ್ಕಿ ಸೇವೆ ಗಮನ ಸೆಳೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ವಿ.ಎಸ್.ವಿನೋದ್ ಕುಮಾರ್, ಶ್ರೀಕೋದಂಡ ರಾಮ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎನ್.ನಂಜುAಡ ಹಾಗೂ ಶ್ರೀಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.








