
ಮಡಿಕೇರಿ ಮಾ.28 NEWS DESK : ಕೊಡಗಿನಲ್ಲಿ ರಂಗ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ಮನವಿ ಮಾಡಿದ್ದಾರೆ. ನಗರಸಭೆಯ ಕಾವೇರಿ ಕಲಾಕ್ಷೇತ್ರದ ಜಾಗದಲ್ಲಿ ಹೊಸ ಭವನ ನಿರ್ಮಾಣವಾಗಿವ ಹಂತದಲ್ಲಿ ರಂಗ ಚಟುವಟಿಕೆಗಳಿಗೆ ಅಗತ್ಯವಾದ ಸಭಾಂಗಣ ಮತ್ತು ಗೋಣಿಕೊಪ್ಪಲಿನ ಸ್ವಾತಂತ್ರ್ಯ ಭವನದಲ್ಲಿ ನಾಟಕಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವಂತೆ ಕೋರಿದರು. ನಗರದ ಪೀ.ಮಾ.ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್‍ಗೆ, ಕಾಲೇಜು ಆರಂಭಕ್ಕೆ ಕಾರಣರಾದ ಪಂದ್ಯಂಡ ಬೆಳ್ಯಪ್ಪ ಅವರ ಹೆಸರನ್ನಿರಿಸುವಂತೆ , ವಿರಾಜಪೇಟೆ ಕಾವೇರಿ ಕಾಲೇಜಿನ ಕ್ಯಾಂಪಸ್‍ಗೆ ಪಾಂಡಂಡ ಸುಬ್ಬಮ್ಮ ಅವರ ಹೆಸರನ್ನಿರಿಸುವಂತೆ ಆಗ್ರಹ ಪೂರ್ವಕ ಮನವಿ ಮಾಡಿದರು.








