
ಮಡಿಕೇರಿ ಮಾ.28 NEWS DESK : ಬಿಟ್ಟಂಗಾಲ ಹಾಗೂ ಸಿದ್ದಾಪುರ ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಸಿದ್ದಾಪುರ ಕರಡಿಗೂಡು ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು. ಡಿ ಎಂ ಪಿ ಶಾಲೆಯ ಸಂಸ್ಥಾಪಕರಾದ ಎಂ.ಎಂ.ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳು ಶಿಕ್ಷಣಭ್ಯಾಸದ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಂಡು ಮುನ್ನಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದ್ದು. ಪೋಷಕರು ತಮ್ಮ ಮಕ್ಕಳ ಕಲಿಕೆ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭಾನ್ವಿತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಹಕಾರ ನೀಡಬೇಕೆಂದು ಹೇಳಿದ ಅವರು ಮಾಂಟೆಸ್ಸರಿ ಶಾಲೆಯ ವಿದ್ಯಾರ್ಥಿಗಳು
ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿತು ತಮ್ಮ ಪ್ರತಿಭೆ ಪ್ರದರ್ಶನ ಮಾಡಿರುವುದು ಶ್ಲಾಘನಯ ಎಂದರು. ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯ
ಸಂಸ್ಥಾಪಕಿ ಸುಧಾ ಉತ್ತಪ್ಪ ಮಾತನಾಡಿ, ಬಾಲ್ಯದ ಮಕ್ಕಳ ಪ್ರತಿಭೆಗೆ ಅನುಗುಣವಾಗಿ ವಿಶೇಷ ಕಲಿಕೆಯೊಂದಿಗೆ ಪ್ರತಿಭಾನ್ವಿತರಾಗಿ ಮುಂದೆ ತರಲು ಹಲವಾರು ಕಾರ್ಯಕ್ರಮಗಳನ್ನ ಮಾಡಲಾಗುತ್ತಿದ್ದು ಶಾಲೆಯಲ್ಲಿಯೇ ಕಲಿಕೆಗೆ ಸೀಮಿತವಾಗದೆ ಮಕ್ಕಳನ್ನ ನೇರವಾಗಿ ಆಯ ಸ್ಥಳಗಳಿಗೆ ಕರೆದುಕೊಂಡು ಹೋಗಿ ಕಲಿಕ ಪಾಠವನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಎಲ್ಲವನ್ನು ತಿಳಿದುಕೊಳ್ಳುವ ಕಲಿಕೆಗೆ ಪೂರಕವಾದ ವಾತಾವರಣಕ್ಕೆ ತಕ್ಕಂತೆ ಶಿಕ್ಷಣದ ಅಭ್ಯಾಸವನ್ನು ಹೇಳಿಕೊಡಲಾಗುತ್ತಿದೆ. ಬಾಲ್ಯದಿಂದಲೇ ಪ್ರತಿಭಾನೀತರಾಗಿ ಗುರುತಿಸಿಕೊಂಡು ಮುನ್ನಡೆಯಲು ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು. ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳ ನೃತ್ಯ, ಭಾಷಣ, ಯೋಗ, ಹಾಡು, ಸಂಗೀತ, ಆರೋಗ್ಯ, ಪರಿಸರ, ನೈರ್ಮಲ್ಯ ಜಾಗೃತಿ, ಪ್ರಾಣಿ ಪಕ್ಷಿಗಳ ಸಂರಕ್ಷಣೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ
ಗ್ರಾಜುಯೇಷನ್ ಪದವಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕೊಡಗಿನ ಹೆಸರಾಂತ ವಾಲಗ ತಂಡದವರಿಂದ ವಿಶೇಷ ಅರಿವು ಕಾರ್ಯಕ್ರಮ ನಡೆಯಿತು ವಾಲಗ ಸಂಗೀತಕ್ಕೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷೆ ಪಟ್ಟಡ ವಿದ್ಯಾ ದೇವಯ್ಯ, ಪ್ರಮುಖರಾದ ಪಲ್ಲವಿ,ಡಾ. ಸೀಮಾ ಪಾಲೇಕಂಡ, ಶಿಕ್ಷಕರುಗಳಾದ ಪಿ. ಸೌಮ್ಯ ದೇವಯ್ಯ, ಜ್ಯೋತ್ಸ್ನಾ ಅಯ್ಯಪ್ಪ, ಚಿನ್ನು ಥಾಮಸ್, ದೀಪಿಕಾ ಸುಬ್ಬಯ್ಯ, ಮಲ್ಲಿಕಾ ಅಪ್ಪಯ್ಯ ಸೇರಿದಂತೆ ಬಿಟ್ಟಂಗಾಲ ಹಾಗೂ ಸಿದ್ದಾಪುರ ಸುತ್ತಮುತ್ತಲ ವಿದ್ಯಾರ್ಥಿಗಳು, ಪೋಷಕರು, ಗಣ್ಯರು ಹಾಜರಿದ್ದರು.









