
ಮಡಿಕೇರಿ ಮಾ.30 NEWS DESK : ಕೊಡಗು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ವಿ. ರೈ ಪುನರಾಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಗೌರಧ್ಯಕ್ಷರಾಗಿ ಬಿ.ಬಿ. ಐತಪ್ಪ ರೈ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರತ್ನಾಕರ ರೈ, ಸದಾಶಿವ ರೈ, ಲೀಲಾಧರ ರೈ, ಜನಾರ್ಧನ ಶೆಟ್ಟಿ ಮತ್ತು ಸದಾನಂದ ರೈ, ಖಜಾಂಚಿಯಾಗಿ ಪ್ರಮೋದ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಯಾಗಿ ಅಪ್ಪು ಬಾಲಕೃಷ್ಣ ರೈ, ಸಹಕಾರ್ಯದರ್ಶಿಗಳಾಗಿ ಬಿ.ಸಿ. ಹರೀಶ್ ರೈ ಮತ್ತು ಮನೋಜ್ ಶೆಟ್ಟಿ, ಸಹ ಖಜಾಂಚಿಯಾಗಿ ಜಗನ್ನಾಥ್ ರೈ ಮೂರ್ನಾಡು ಅವರನ್ನು ಆಯ್ಕೆ ಮಾಡಲಾಗಿದೆ. ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ಶರತ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಪ್ರತಿಮಾ ಹರೀಶ್ ರೈ, ಸ್ವಚ್ಛತಾ ಆಂದೋಲನದ ಸಂಚಾಲಕರಾಗಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಮಾಧ್ಯಮ ಸಂಯೋಜಕರಾಗಿ ಹೇಮಂತ್ ಕುಮಾರ್ ಶೆಟ್ಟಿ, ಸಾಮಾಜಿಕ ಜಾಲತಾಣ ಸಂಯೋಜಕರಾಗಿ ಕಿಶೋರ್ ರೈ ಕತ್ತಲೆಕಾಡು, ಕಾನೂನು ಸಲಹೆಗಾರರಾಗಿ ಮಂಜುನಾಥ ಚೌಟ ಆಯ್ಕೆಯಾಗಿದ್ದಾರೆ. ಇದರೊಂದಿಗೆ ನಿರ್ದೇಶಕರುಗಳಾಗಿ 46 ಮಂದಿಯನ್ನು ಆಡಳಿತ ಮಂಡಳಿಗೆ ನೇಮಿಸಿಕೊಳ್ಳಲಾಗಿದೆ ಎಂದು ಬಿ.ಡಿ. ಜಗದೀಶ್ ರೈ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್‌ನ ನೂತನ ಕಾರ್ಯದರ್ಶಿಯಾಗಿ ಬಾಲಕೃಷ್ಣ(ಅಪ್ಪು) ರೈ, ಖಜಾಂಚಿಯಾಗಿ ಗಿರೀಶ್ ರೈ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.









