
ಮಡಿಕೇರಿ ಮಾ.31 NEWS DESK : ಚೇನಂಡ ಐನ್ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಮಡಿಕೇರಿ ತಾಲೂಕಿನ ಕೋಕೇರಿಯಲ್ಲಿರುವ ಚೇನಂಡ ಐನ್ ಮನೆಯವರು ಈ ಬಾರಿಯ ಕೊಡವ ಹಾಕಿ ಉತ್ಸವದ ಆತಿಥೇಯ ತಂಡದವರಾಗಿದ್ದಾರೆ. ಆ ಪ್ರಯುಕ್ತ ಈ ಹಿಂದೆಯೇ ಶಾಸಕರನ್ನು ಭೇಟಿಯಾಗಿ, ಹಾಕಿ ಉತ್ಸವಕ್ಕೆ ಪೂರ್ವ ಸಿದ್ಧತೆ ಸಭೆಗೆ ಆಗಮಿಸುವಂತೆ ಕೋರಿದ್ದರು. ಈ ಹಿನ್ನೆಲೆ ಇಂದು ಶಾಸಕರು ಐನ್ ಮನೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮುಂಬರುವ ಹಾಕಿ ಉತ್ಸವಕ್ಕೆ ಶುಭ ಕೋರಿದರಲ್ಲದೆ, ತನ್ನಿಂದ ಸಾಧ್ಯವಾಗುವ ಎಲ್ಲಾ ಪ್ರೋತ್ಸಾಹವನ್ನು ನೀಡುವುದಾಗಿ ಭರವಸೆ ನೀಡಿದರು. ಹಾಕಿ ಪಂದ್ಯಾವಳಿಯು ಅತ್ಯಂತ ಯಶಸ್ಸು ಕಾಣಲಿ ಎಂದು ಹಾರೈಸಿದರು. ಈ ಸಂದರ್ಭ ಚೇನಂಡ ಕುಟುಂಬದ ಅಧ್ಯಕ್ಷರಾದ ಕಂಬನಿ ಕರುಂಬಯ್ಯ ಸಿಪಿ, ದಿನ ಚಂಗಪ್ಪ, ಕಾರ್ಯದರ್ಶಿ ಮಧು ಮಾದಯ್ಯ, ಜಂಟಿ ಕಾರ್ಯದರ್ಶಿ ತಮ್ಮಿ ತಮ್ಮಯ್ಯ, ಸದಸ್ಯರು ಸುರೇಶ್ ನಾಣಯ್ಯ, ಶ್ಯಾಮಲಾ ಚೆಂಗಪ್ಪ, ಬಬಿತಾ ಅಯ್ಯಪ್ಪ, ಸಚಿನ್ ಯಪ್ಪ, ನಮೃತ್ ಅಯ್ಯಣ್ಣ, ರೋಹನ್ ಪೊನ್ನಯ್ಯ, ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷರಾದ ಚೆಪ್ಪುಡೀರ ಪೂಣಚ್ಚ,ಉಪಾಧ್ಯಕ್ಷರಾದ ಕೂತಂಡ ಸುರೇಶ್, ಬಾಚಿನರಿಯಂಡ ಪ್ರದೀಪ್ ಹಾಗೂ ನಿರ್ದೇಶಕರಾದ ಕಲಿಯಂಡ ಸಂಪನ್ ಅಯ್ಯಪ್ಪ, ಕಾರ್ಯದರ್ಶಿ ಅರುಣ್ ಬೇಬ , ಖಜಾಂಚಿ ದೀಪಕ್ ಚಂಗಪ್ಪ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.









