ಮಡಿಕೇರಿ, NEWS DESK ಏ.1 – ನಗರದ ಕೊಡಗು ವಿದ್ಯಾಲಯದಲ್ಲಿ ‘ಸಮಾಗಮ 2026’ ವಾಷಿ೯ಕ ಬೇಸಿಗೆ ಶಿಬಿರ ಮತ್ತು ಪಿಕಲ್ ಬಾಲ್ ಕ್ರೀಡಾಂಗಣ ಉದ್ಘಾಟನೆಗೊಂಡಿತು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಆದಿತ್ಯ ಕೋಟೆ, ಡಾ. ಜಾಹ್ನವಿ ಕೋಟೆ, . ಕಾರ್ಯದರ್ಶಿ ಪೂಣಚ್ಚ ಬಿ ಎಸ್ ಶಾಲಾ ಆಡಳಿತ ಮಂಡಳಿಯ ಸದಸ್ಯ ಗುರುದತ್ತ್ ಸಿ ಎಸ್, ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್., ಆಡಳಿತ ವ್ಯವಸ್ಥಾಪಕ ರವಿ ಪಿ , ಕಲಾ ತರಬೇತುದಾರಾದ ಪವನ್ ಗಣಪತಿಯ ಕಲಾ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮತ್ತು ಸಸಿಗೆ ನೀರೆರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿ ಡಾ. ಜಾಹ್ನವಿ ಕೋಟೆ ಕೊಡಗು ವಿದ್ಯಾಲಯದಲ್ಲಿನ ತಮ್ಮ ವಿದ್ಯಾಭ್ಯಾಸದ ದಿನಗಳ ನೆನಪುಗಳನ್ನು ಹಂಚಿಕೊಂಡು, ಕ್ರೀಡಾಮಾಗ೯ದಶಿ೯ಯಾಗಿದ್ದ ಸಿ.ವಿ. ಶಂಕರ್ ಅವರ ಶಿಸ್ತು ಮತ್ತು. ಕ್ರಿಕೆಟ್ ಕ್ರೀಡೆಯಲ್ಲಿ ಅವರು ವಿದ್ಯಾರ್ಥಿಗಳನ್ನು ಸದಾ ಹುರಿದುಂಬಿಸುತ್ತಿದ್ದ ರೀತಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದರು.
ಆದಿತ್ಯ ಕೋಟೆ ಮಾತನಾಡಿ, ಶಾಲಾ ವಿದ್ಯಾಭ್ಯಾಸ ಮತ್ತು ಕ್ರೀಡೆ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳುವಂತೆ ಕಿವಿಮಾತು ಹೇಳಿದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಗುರುದತ್ತ್ ಸಿ.ಎಸ್. ಮಾತನಾಡಿ, ಪಿಕಲ್‌ಬಾಲ್ ಕ್ರೀಡಾಂಗಣದ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. , ಕೊಡಗು ವಿದ್ಯಾಲಯ ಮತ್ತು ಅಪರ್ಚ್ಯುನಿಟಿ ಶಾಲೆ ಎಂಬ ಎರಡು ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ತಿಳಿಸಿದ ಗುರುದತ್, ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರ ಎರಡರಲ್ಲೂ ಕೊಡಗು ವಿದ್ಯಾಲಯ ಸಾಧನೆಗಳ ಹಿರಿಮೆ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹತ್ವ ಅಪ್ಪಯ್ಯ ನಿರೂಪಿಸಿ, , ಅತಿಥಿಗಳ ಪರಿಚಯವನ್ನು ಆದ್ಯ ಗಂಗಮ್ಮ ನಿವ೯ಹಿಸಿ, . ತಾನಿಶ್ ಎನ್.ಜಿ. ವಂದಿಸಿದರು. ಸಮಾಗಮ ಬೇಸಿಗೆ ಶಿಬಿರವು ಏಪ್ರಿಲ್ 22ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 6:30 ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ಕೌಶಲ್ಯಾಭಿವೃದ್ಧಿ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಒಳಗೊಂಡಿದೆ.
25 ವರ್ಷಗಳ ಪರಂಪರೆಯನ್ನು ಹೊಂದಿರುವ ಈ ಶಿಬಿರದಲ್ಲಿ ಈ ಬಾರಿ 180 ಶಿಬಿರಾರ್ಥಿಗಳು ವಿವಿಧ ಶಾಲೆಗಳಿಂದ ಭಾಗವಹಿಸಿದ್ದಾರೆ.







