ಮಡಿಕೇರಿ, NEWS DESK ಏ.2 – ಚೆಟ್ಟಳ್ಳಿಯ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿತ ಪ್ರಥಮ ವಷ೯ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೈಸೂರಿನ ಕೊಡವ ಪೊಮ್ಮಕ್ಕಡ ಕೂಟ ತಂಡವು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿದೆ. ಪೊನ್ನಂಪೇಟೆಯ ಕೊಡವ ರೈಡರ್ಸ್ ಕ್ಲಬ್ ತಂಡವು ದ್ವಿತೀಯ ಸ್ಥಾನ ಪಡೆಯಿತು.
ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧೀನದಲ್ಲಿರುವ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ವಷ೯ದ ಅಂತರ ಕೊಡವ ಪೊಮ್ಮಕ್ಕಡ ಥ್ರೋಬಾಲ್ ಪಂದ್ಯಾವಳಿಯ ಆಕಷ೯ಕ ಫೈನಲ್ ಪಂದ್ಯಾವಳಿಯಲ್ಲಿ ಮೈಸೂರಿನ ಕೊಡವ ಪೊಮ್ಮಕ್ಕಡ ಕೂಟ ತಂಡವು . ಪೊನ್ನಂಪೇಟೆಯ ಕೊಡವ ರೈಡರ್ಸ್ ಕ್ಲಬ್ ತಂಡದ ವಿರುದ್ದ ಗೆಲವು ಸಾಧಿಸಿತು. ಮೈಸೂರು ಹೂಟಗಳ್ಳಿಯ ಶ್ರೀ ತಲಕಾವೇರಿ ಪೊಮ್ಮಕ್ಕಡ ಕೂಟ ತಂಡವು ತೖತೀಯ ಸ್ಥಾನ ಮತ್ತು ಮಡಿಕೇರಿ ಕೊಡವ ಪೊಮ್ಮಕ್ಕಡ ಕೂಟದ ಬಿ ಟೀಮ್ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು.
ಬೆಂಗಳೂರು ದಾಸರಹಳ್ಳಿಯ ಪೊಮ್ಮಕ್ಕಡ ಕೂಟ ತಂಡವು ಶಿಸ್ತಿನ ತಂಡವಾಗಿ, ಪೊನ್ನಂಪೇಟೆ ಗುಂಬಳಮಾಡು ಪೊಮ್ಮಕ್ಕಡ ಕೂಟ ತಂಡವು ಉತ್ತಮ ವಣ೯ ತಂಡವಾಗಿ, ಮತ್ತು ಮೈಸೂರು ಪೊಮ್ಮಕ್ಕಡ ಕೂಟದ ಆಟಗಾ೯ತಿ ಶಹೇನಾ ಅತ್ಯುತ್ತಮ ಆಟಗಾತಿ೯ಯಾಗಿ ಹೊರಹೊಮ್ಮಿದರು.
ಬಹುಮಾನ ವಿತರಸಿ ಮಾತನಾಡಿದ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, .ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟವನ್ನು ಚೆಟ್ಟಳ್ಳಿ ಕೊಡವ ಸಮಾಜ ಎಲ್ಲಾ ರೀತಿಯ ಬೆಂಬಲ ನೀಡಿದ್ದು, ಅತ್ಯುತ್ತಮ ಕಾಯ೯ ನಿವ೯ಹಿಸುತ್ತಾ ಬಂದಿದೆ. ಮನೆಯಲ್ಲಿ ಬೆಳಗ್ಗಿನಿಂದ ರಾತ್ರಿವರೆಗೂ ಕುಟುಂಬ ಸದಸ್ಯರ ಕಾಳಜಿ ವಹಿಸುತ್ತಾ ಎಲ್ಲಾ ಕೆಲಸ ಕಾಯ೯ಗಳಲ್ಲಿಯೂ ಸಕ್ರಿಯರಾಗಿರುವ ಮಹಿಳೆಯರಿಲ್ಲದ ಮನೆಯನ್ನು ಯೋಚಿಸಲು ಸಾಧ್ಯವಿಲ್ಲ ಹೀಗಿರುವಾಗ ಇಂಥ ಮಹಿಳೆಯರು ತಮ್ಮ ಮನಸ್ಸಿನ ಸಂತೋಷಕ್ಕಾಗಿ ಪೊಮ್ಮಕ್ಕಡ ಕೂಟದಂಥ ಸಂಘ ಸ್ಥಾಪಿಸಿಕೊಂಡು ಕ್ರೀಡೆ, ಆರೋಗ್ಯ, ಮನರಂಜನಾತ್ಮಕ ಕಾಯ೯ಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇಂಥ ಉತ್ಸಾಹಿ ಮಹಿಳೆಯರಿಗೆ ಸಮಾಜಬಾಂಧವರು ಸದಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆಟ್ಟಳ್ಳಿ ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ, ಇದೇ ಮೊದಲ ಬಾರಿಗೆ ಚೆಟ್ಟಳ್ಳಿಯಲ್ಲಿ ಅಂತರ ಕೊಡವ ಪೊಮ್ಮಕ್ಕಡ ಕೂಟಗಳ ತಂಡದ ನಡುವೇ ಥ್ರೋಬಾಲ್ ಪಂದ್ಯ ಆಯೋಜಿಸಲಾಗಿತ್ತು. ರಾಜ್ಯದ ವಿವಿಧೆಡೆಗಳ 16 ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದವು. ಮೊದಲ ಪ್ರಯತ್ನಕ್ಕೇ ಉತ್ತಮ ಸ್ಪಂದನ ದೊರಕಿದ್ದು ಸಂತೋಷ ತಂದಿದೆ ಎಂದರು.
ಬಹುಮಾನ ವಿತರಣಾ ಕಾಯ೯ಕ್ರಮದಲ್ಲಿ ದಾನಿಗಳಾದ ಬದಲೇರ ಕೌಶಿಕ್, , ಮುಳ್ಳಂಡ ರತ್ತು ಚಂಗಪ್ಪ, ಮುಳ್ಳಂಡ ಪ್ರೇಮ ಅಯ್ಯಪ್ಪ, ವಿಂಧ್ಯಾ ರಂಜನ್, ಸುಶೀಲ ತಮ್ಮಯ್ಯ, ಐಚೆಟ್ಟೀರ ಚೋಂದಮ್ಮ, ಮತ್ತು ಜೋಮಾಲೆ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಚೋಳಂಡ ಜ್ಯೋತಿ ನಾಣಯ್ಯ, ಕಾರ್ಯದರ್ಶಿ ಅಡಿಕೆರ ಶಾಂತಿ ಮುತ್ತಪ್ಪ, ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ, ಸಹ ಕಾರ್ಯದರ್ಶಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ ಸವ೯ ಸದಸ್ಯೆಯರು ಇದ್ದರು.
ಪಂದ್ಯದ ತೀಪು೯ಗಾರರಾಗಿ ಮಡಿಕೇರಿಯ ಬೊಳ್ಳಿಯಂಡ ವಿಕ್ರಂ ,ಅಪಾಡಂಡ ಗೀತ ಅಯ್ಯಪ್ಪ, ಕಾಯ೯ನಿವ೯ಹಿಸಿದ್ದರು.







