
ವಿರಾಜಪೇಟೆ ಏ.3 NEWS DESK : ವಿರಾಜಪೇಟೆಯ ಸಂತ ಅನ್ನಮ್ಮನ ದೇವಾಲಯದಲ್ಲಿ ಶುಭ ಶುಕ್ರವಾರ (ಗುಡ್‍ಫ್ರೈಡೆ)ದ ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಚರ್ಚ್ ನಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನೆಯ ಬಳಿಕ, ಯೇಸು ಕ್ರಿಸ್ತನಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ನಮಿಸಿದರು.
ಕಿಟ್ ವಿತರಣೆ : ಇದೇ ಸಂದರ್ಭ ಗುಡ್ ಫ್ರೈಡೆ ಆಚರಣೆ ಪ್ರಯುಕ್ತ ಅನಾಥ ಆಶ್ರಮಕ್ಕೆ ಆಹಾರ ಸಾಮಗ್ರಿಯ ಕಿಟ್ ವಿತರಿಸಿದರು. ನಾಡಿನ ಎಲ್ಲರಿಗೂ ಶುಭವನ್ನು ಕರುಣಿಸಲಿ ಎಂದು ಶುಭ ಹಾರೈಸಿದರು. ಧರ್ಮ ಗುರುಗಳು, ಪ್ರಮುಖರಾದ ಜೋಕಿಂ ರೋಡರಿಗಸ್, ಮರ್ವಿನ್ ಲೋಬೋ, ಜೇವಿಯರ್, ಹ್ಯಾಂಸಿ, ಮಾರ್ಟಿನ್, ಡೇನಿಯಲ್, ಜಗನ್, ರಿಯಾನ್ ಲೋಬೋ, ಚಾರ್ಲ್ಸ್ ಡಿಸೋಜ, ಮೆಲ್ರೋಯ್ ಲೋಬೊ, ಕುಂಡಚ್ಚಿರ ಮಂಜುದೇವಯ್ಯ, ಮೊದಲಾದವರು ಉಪಸ್ಥಿತರಿದ್ದರು.









