
ಸುಂಟಿಕೊಪ್ಪ ಏ.3 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ವತಿಯಿಂದ ಸಂತಮೇರಿ ಶಾಲಾ ಸಭಾಂಗಣದಲ್ಲಿ ಶುಭ ಶುಕ್ರವಾರ (ಗುಡ್‍ಫ್ರೈಡೆ)ದ ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು. ಪ್ರಾರ್ಥನಾ ಕೂಟವನ್ನು ವಿಶೇಷ ಪೂಜೆ ಪ್ರಾರ್ಥನೆ ಹಾಗೂ ಆರಾಧಾನೆಯನ್ನು ಶುಭ ಶುಕ್ರವಾರದ ಸಾಂಘ್ಯಗಳನ್ನು ಬೆಂಗಳೂರಿನ ಧರ್ಮಕೇಂದ್ರ ಪ್ರೇಮ್‍ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಳಾದ ರೇ.ಫಾ.ವಿಜಯಕುಮಾರ್ ನೇರವೇರಿಸಿದರು. ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳನ್ನು ದೇವಾಲಯದ ಧರ್ಮಗುರುಗಳು ಹಾಗೂ ಕನ್ಯಾಸ್ತ್ರಿಯರು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡಿದ್ದರು. ದೇವಾಲಯದಿಂದ ಆರಂಭಗೊಂಡ ಶಿಲುಬೆಯಾದಿಯಲ್ಲಿ ಸಂತ ಅಂತೋಣಿ ಶಾಲಾವರಣದಿಂದ ಆರಂಭಗೊಂಡು ಸಂತಮೇರಿ ಕ್ರಿಸ್ತ ಶಿಲುಬೆಯಾತನೆಯನ್ನು ಸ್ಮರಿಸುತ್ತಾ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ತೊಂಡಗಿಸಿಕೊಂಡರು.









