
ವಿರಾಜಪೇಟೆ ಏ.3 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿರಾಜಪೇಟೆ ವಲಯದ ಬಿಟ್ಟಂಗಾಲ, ಕೆದಮುಳ್ಳುರು, ಬೇಟೋಳಿ ಕಾರ್ಯಕ್ಷೇತ್ರದ ಮಾಸಾಶನ ಫಲಾನುಭವಿಗಳಿಗೆ ಮಾತೃಶ್ರೀ ಹೇಮಾವತಿ ಅಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ವಿಚಾರಿಸಿ ಹಣ್ಣು ಹಂಪಲುಗಳನ್ನು ನೀಡಲಾಯಿತು. ತಾಲೂಕಿನಲ್ಲಿ ಇರುವ ಒಟ್ಟು 66 ಮಾಸಾಶನ ಫಲಾನುಭವಿಗಳಿಗೂ ಕೂಡ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೊಜನಾಧಿಕಾರಿ ಹರೀಶ್ ಪಿ, ಮೇಲ್ವಿಚಾರಕರದ ಶಿವಾಕುಮಾರ್, ಸೇವಾ ಪ್ರತಿನಿಧಿ ಪುಷ್ಪ ಉಪಸ್ಥಿತರಿದ್ದರು.









