ಮಡಿಕೇರಿ, NEWS DESK ಏ. 6 – ಭಾರತದ ಹಾಕಿ ತಂಡದ 2024 ರ ಪ್ಯಾರಿಸ್ ಒಲಂಪಿಕ್ ಹಾಕಿ ಕ್ರೀಡಾಕೂಟದಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಪದ್ಮಭೂಷಣ, ಪದ್ಮಶ್ರೀ, ಅರ್ಜುನ ಹಾಗೂ ಕ್ರೀಡಾಪಟುಗಳಿಗೆ ನೀಡುವ ಅತ್ಯುನ್ನತ ಧ್ಯಾನ್ ಚಂದ್ ಖೇಲ್ ಪ್ರಶಸ್ತಿಗೆ ಭಾಜನರಾದ ,ಭಾರತದ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಶ್ರೀಜೇಶ್ ಮಡಿಕೇರಿ ಸಾಯಿ ಹಾಕಿ ಕೇಂದ್ರಕ್ಕೆ ಭೇಟಿ ನೀಡಿ, ಕ್ರೀಡಾಥಿ೯ಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸ್ಪಷ್ಟ ಗುರಿ ಇದ್ದಲ್ಲಿ ಹಾಗೂ ತಾವು ಮಾಡುವ ಕೆಲಸದ ಮೇಲೆ ನಿಷ್ಠೆ ಬದ್ಧತೆ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದ ಶ್ರೀಜೇಶ್, ತಮ್ಮ ಕ್ರೀಡಾ ಜೀವನದ ಅನುಭವ ಹಾಗೂ ಸಾಧನೆಗಳನ್ನು ಉದಾಹರಣೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದರು. ಮಡಿಕೇರಿ ಸಾಯಿ ಕೇಂದ್ರದ ಮುಖ್ಯ ಕೋಚ್ ಮಿನಿ ಉನ್ನಿರಾಜ್ ಹಾಜರಿದ್ದರು.








