Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಲೇಖಕಿ ಗೀತಾಂಜಲಿ‌ ಮಹೇಶ್ ರವರ ಮೂರು ಕೃತಿಗಳು ಲೊಕಾರ್ಪಣೆ 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಲೇಖಕಿ ಗೀತಾಂಜಲಿ‌ ಮಹೇಶ್ ರವರ ಮೂರು ಕೃತಿಗಳು ಲೊಕಾರ್ಪಣೆ 

ಏಪ್ರಿಲ್ 6, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ
ಪಟ್ಟಣದ ಲೇಖಕಿ ಹಾಗೂ ಕವಯತ್ರಿ ಎನ್.ಎಂ.ಗೀತಾಂಜಲಿ ಮಹೇಶ್ ರವರ ಮಾನಿನಿಯ ಮಾರ್ದನಿ,ಜ್ಞಾನ ಮಂಥನ ಹಾಗೂ ನಿನಾದ ಕೃತಿಗಳು ಅನಾವರಣಗೊಂಡವು.
ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಅನಂತ ಶಯನ  “ಮಾನಿನಿಯ ಮಾರ್ದನಿ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾನವನು ಸೃಷ್ಟಿಯ ಅದ್ಭುತ ಸಂಕೇತ ಅವನು ತನ್ನೊಳಗೆ ಒಂದು ಪುಟ್ಟ ಬ್ರಹ್ಮಾಂಡವಿದ್ದಂತೆ. ಸೃಷ್ಟಿಕರ್ತನು ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿ, ಅವನ ದೇಹವನ್ನು ರೂಪಿಸಿದ್ದಾನೆ. ಆ ದೇಹದ ರಕ್ಷಣೆ ಮತ್ತು ಪೋಷಣೆಗಾಗಿ ಸಹಜವಾದ ಆಸೆಗಳನ್ನು ಇರಿಸಿದ್ದಾನೆ. ಅದು ಜೀವಶಕ್ತಿ, ಪ್ರಜ್ಞೆ ಮತ್ತು ಅರಿವನ್ನು ಹೊತ್ತಿದೆ. ಸೃಷ್ಟಿಕರ್ತನೊಂದಿಗೆ ದೈವಿಕ ಪ್ರೇರಣೆಯಾದಾಗ ತನ್ನಲ್ಲಿ ಅಡಕವಾಗಿರುವ ಕಲೆ ಚೈತನ್ನ ಜಾಗೃತಗೊಂಡು ವಿವಿಧ ಆಯಾಮಗಳಲ್ಲಿ ಹೊರತರಲು ಆರಂಬಿಸಿರುತ್ತಾನೆ. ಅದೇ ರೀತಿ ಲೇಖಕಿ ಗೀತಾಂಜಲಿ ಮಹೇಶ್ ರವರು ಈ ಕ್ಷೇತ್ರದಲ್ಲಿ ಗುರುಗಳ ಅನುಗ್ರಹದಿಂದ ತಮಗೇ ಅರಿವಿಲ್ಲದಂತೆ ಬರಹಗಳ ರೂಪದಲ್ಲಿ  ಮಾನಿನಿಯ ಮಾರ್ದನಿ,ಜ್ಞಾನ ಮಂಥನ, ನಿನಾದ ಕೃತಿಗಳಾದ ಹೊರತಂದಿದ್ದಾರೆ ಅವರ ಮುಂದಿನ ಬರಹಗಳಿಗೆ ಈ ಸಂದರ್ಭದಲ್ಲಿ ಶುಭಕೋರಿದರು.
ನಿನಾದ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಿದ ಕೋಲಾರ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ.ಜಯಶ್ರೀ ಮಾತನಾಡಿ ಸಮಾಜದಲ್ಲಿ ಬರಹಗಾರರು ಹೆಚ್ಚಾಗಬೇಕು ಎಂದು ಆಶಿಸಿದರು.ಮಹಿಳೆಯರು ಹಿಂದೆ ಅಡುಗೆ ಮನೆಗೆ ಸೀಮಿತ ಎನುವಂತಿದ್ದರು ಆದರೆ ಇಂದು ಎಲ್ಲಾರಂಗಗಳಲ್ಲಿಯೂ ಇದ್ದಾರೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ ಇದಕ್ಕೆ ಸೇರ್ಪಡೆ ಗೀತಾಂಜಲಿ ಮಹೇಶ್ ಅವರ ಕವನ ಸಂಕಲನದಲ್ಲಿ ಸಾಮಾಜಿಕ ಚಿಂತನೆ,ಧಾರ್ಮಿಕ ಆಚರಣೆ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.
ಸಾರ್ವಜನಿಕರು ಪುಸ್ತಕಗಳನ್ನು ಕೊಂಡು ಓದಿದಾಗ ಬರೆದಿದ್ದು ಸಾರ್ಥಕವಾಗುತ್ತದೆ ಆದ್ದರಿಂದ ಎಲ್ಲಾರು ಪುಸ್ತಕಗಳನ್ನು ಖರೀದಿಸಿ ಓದಬೇಕೆಂದರು.
ರಾಜ್ಯ ಕ್ರೀಡಾ ಇಲಾಖೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಜ್ಞಾನ ಮಂಥನ ಕೃತಿ ಬಿಡುಗಡೆಮಾಡಿ ಬರವಣಿಗೆ ಸುಲಭದ ಕೆಲಸವಲ್ಲಾ,ಭಾಷೆ, ಪದ ಬಳಕೆಯ ಮೇಲೆ ಹಿಡಿತವಿದ್ದರೆ ಮಾತ್ರ ಸಾಹಿತ್ಯಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಆನಿಟ್ಟಿನಲ್ಲಿ ಗೀತಾಂಜಲಿಯವರ ಪ್ರಯತ್ನ ಶ್ಲಾಘನೀಯವೆಂದರು.
  ಹಿರಿಯ ಸಾಹಿತಿ ಬೆಸೂರು ಮೋಹನ್‌ಪಾಳೆಗಾರ ಕೃತಿಗಳ ವಿಮರ್ಷೆ ಮಾಡುತ್ತಾ  ಲೇಖಕಿ ಗೀತಾಂಜಲಿಯರ ಎರಡನೇ ಸಂಕಲನದಲ್ಲಿ  ತಮ್ಮ  ಜಗತ್ತಿನ ಪ್ರತಿಬಿಂಬ, ತಾನು ಕಂಡ ಸಮಾಜ, ಅನುಭವಿಸಿದ ನೋವು ನಲಿವು, ಮಹಿಳೆಯರ ಮನದ ಕೂಗು, ಸಂಬಂಧಗಳ ಸೂಕ್ಷತೆ, ಪ್ರೀತಿಯ ಮೃದುತ್ವ ಮತ್ತು ಸ್ನೇಹದ ಜೊತೆಗೆ ಬದುಕಿನ ಚಿತ್ತ ಕ್ಷೋಬೆಗಳು ಕೃತಿ ನಿನಾದದಲ್ಲಿ ಸಂಗಮಿಸಿವೆ. ಒಂದೊಂದು ಕವನವು ಓದುಗರ ಹೃದಯ ತಟ್ಟುತ್ತದೆ. ಮನಸ್ಸಿಗೆ ಮುದ ನೀಡುತ್ತದೆ. ವರ ಕವಿ ಬೇಂದ್ರೆಯವರ “ನೂರು ಮರ ನೂರು ತರ ನೂರು ಸ್ವರ ಎಲ್ಲವೂ ತರಂತರ” ಎನ್ನುವಂತೆ ಕಾವ್ಯಧಾರೆ ಪಸರಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲದೆ ಕವನಗಳು ಧ್ವನಿಪೂರ್ಣವಾಗಿಸಿವೆ. ಮನುಷ್ಯನಿಗೆ ಒಂದು ದಿವಸ ಎನ್ನುವುದು ಹೂವುಗಳಿಗೆ ಒಂದು ಜೀವಮಾನ ಎನ್ನುವಂತೆ. ಹೇಳಿಕೇಳಿ ಮಲೆನಾಡಿನ ಮಣ್ಣಿನ ಮಗಳಾದ ನೆಲಸಿರಿಯ ಮಣ್ಣಿನ ಕಮಟು ಘಮಲಿನ ನೆಲಸಂಸ್ಕೃತಿಯ ಬೆವರಿನ ಬೆಲೆಯ ಲೇಖಕಿ ಹೆಸರಿಗೆ ಅನ್ವರ್ಥವಾಗಿ ಗೀತಾಂಜಲಿ ಆಗಿದ್ದಾರೆ ಎಂದರು.
ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಜಮೀರ ಅಹಮದ್ ಲೇಖಕಿ ಪರಿಚಯದಲ್ಲಿ ಮಾತನಾಡಿದ ಅವರು ಆದ್ಯಾತ್ಮಿಕ ದಸೋಹದ ಜೊತೆಗೆ ಪುಸ್ತಕದ ದಾಸೋಹ ಸಮರ್ಪಣೆ ಲೇಖಕಿ ಗೀತಾಂಜಲಿ ಮಹೇಶ್ ರವರಿಂದ ನಡೆಯುತ್ತಿದೆ ಎಂದರು.‌ ವಿಬಿನ್ಯ ವಿಷೇಶ ಚಿಂತನೆಯನ್ನು ಹೊಂದಿರುವ ಈ  ಲೇಖಕಿ  ಪುಸ್ತಕ ಸರಮಾಲೆಯನ್ನು ಹೊರತಂದಿದ್ದಾರೆ ಮೌನ ದರಿಸಿದ ಮಹಿಳೆ ಮೌನದಲ್ಲೇ ತನ್ನ ಭಾವನೆಗಳನ್ನು, ಕನಸುಗಳನ್ನು ಹೂತಿಟ್ಟು ನಲುಕುಕ ಜೀವನದ ಒಳ ಬೇಗುದಿಗಳನ ಅನಾವರಣ ಮಾಡಿರುವುದನ್ನು ಇವರ 3 ಕೃತಿಗಳಲ್ಲಿ ಕಾಣಬಹುದು. ಸಮಕಾಲೀನ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಿಂತನೆಗಳಿಂದ  ಗುರುತಿಸಿಕೊಂಡಿರುವ ಅಪರೂಪದ ಕವಯತ್ರಿ ಮತ್ತು ಲೇಖಕಿ. ಸಮಾಜದ ವಿವಿಧ ಆಯಾಮಗಳನ್ನು ಗುರುತಿಸಿ ಅವುಗಳನ್ನು ಬಾವನಾತ್ಮಕವಾಗಿ ಪದಗಳಲ್ಲಿ ಮೂಡಿಸುವಂತಹ ಸಾಮರ್ಥ್ಯ ಹೊಂದಿರುವ ಶರಣೆ. ಈಗಾಗಲೆ ರಾಜ್ಯ ಮಟ್ಟದ, ಸ್ಥಳೀಯ ಪತ್ರಕೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಬಾವಾಂಜಲಿ ಎಂಬ ಕವನ ಸಂಕಲನ ಹೊರತಂದು ಅದಕ್ಕೆ ಮಹಿಳಾ ರತ್ನ ಪ್ರಶಸ್ತಿ ಯನ್ನು ಪಡೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗೀತಾಂಜಲಿ ಮಹೇಶ್ ದಂಪತಿಗಳನ್ನು  ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿಅರಮೇರಿ ಕಳಂಚೇರಿ ಮಠಾಧ್ಯಕ್ಷರಾದ ಶ್ರೀಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು,ಮನೆಹಳ್ಳಿ ಮಠದ ಶ್ರೀ ಶ್ರೀ    ಮಹಾಂತಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಲ್ಲುಮಠಾಧ್ಯಕ್ಷರಾದ ಶ್ರೀಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀಶ್ರೀ ಸದಾಶಿವ ಸ್ವಾಮೀಜಿ, ಕೆಸತೂರು ಮಠಾಧ್ಯಕ್ಷರಾದ ಶ್ರೀಶ್ರೀ ಬಸವರಾಜೇಂದ್ರ ಸ್ವಾಮೀಜಿ,ಕೊಡಗು ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಚಂದ್ರಶೇಖರ್,  ಬೆಮ್ಮತ್ತಿ ಕ್ರಷರ್ ಮಾಲೀಖರಾದ ಸುರೇಶ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕನ್ನಡ ಸಿರಿ ಬಳಗದ ತಾಲೂಕು ಅಧ್ಯಕ್ಷ ಜವರಪ್ಪ,ಪ್ರಮುಖರಾದ ಬಸವರಾಜು,ನಾರಾಯಣ್,ಪವನಪಾಲಾಕ್ಷ,ಮಂಜುನಾಥ್,ಅಶ್ವತ್ ಕುಮಾರ್,ಗೀತಾಂಜಲಿಯವರ ತಂದೆ ಮಲ್ಲೇಶ್,ತಾಯಿ ಪಾರ್ವತಿ ಹಾಗೂ ಕುಟುಂಬಸ್ಥರು ಹಾಜರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಚೇಲಾವರದಲ್ಲಿ ಕಾಳಿಂಗ ಸರ್ಪದ ರಕ್ಷಣೆ

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.9 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ…

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಮಡಿಕೇರಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ : ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ಅಕ್ಟೋಬರ್ 9, 2026

ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೂ.1.75 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ : ಶಾಸಕ ಎ.ಎಸ್.ಪೊನ್ನಣ್ಣರಿಂದ ಭೂಮಿಪೂಜೆ

ಅಕ್ಟೋಬರ್ 9, 2026

ಅ.10ರಂದು ವಿರಾಜಪೇಟೆ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಅಕ್ಟೋಬರ್ 9, 2026

ಕೊಡಗು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 9, 2026

ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಹೈ ಅಲರ್ಟ್, 24 ಗಂಟೆ ಮೊಬೈಲ್ ಇಂಟರ್ನೆಟ್ ಸ್ಥಗಿತ; 57 ಮೆಟ್ರೋ ನಿಲ್ದಾಣಗಳ ಪ್ರವೇಶ–ನಿರ್ಗಮನ ದ್ವಾರ ಬಂದ್; 20 ವಲಯಗಳಾಗಿ ವಿಂಗಡಣೆ, 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

ಅಕ್ಟೋಬರ್ 9, 2026

ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಅಕ್ಟೋಬರ್ 9, 2026

ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ

ಅಕ್ಟೋಬರ್ 9, 2026

2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ

ಅಕ್ಟೋಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.