Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರಸಗೊಬ್ಬರ ಖರೀದಿಸಲು ಇನ್ನು ಎಫ್‍ಐಡಿ ಕಡ್ಡಾಯ*
  • *ಕಾನೂರು : ಬ್ರಹ್ಮಗಿರಿಪುರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮುತ್ತಪ್ಪ ದೇವರ ಉತ್ಸವ*
  • *ಏ.19 ರಂದು ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ವಿವಿಧ ಕ್ರೀಡಾಕೂಟ*
  • *ಏ.8 ರಂದು ಮಿನಿ ಉದ್ಯೋಗ ಮೇಳ*
  • *ನಾರ್ಗಾಣೆ : ಏ.13, 14 ಮತ್ತು 15ರಂದು ಧರ್ಮದೈವದ ನೇಮೋತ್ಸವ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕೂತಿನಾಡು ಸುಗ್ಗಿ ಉತ್ಸವ*
  • *ಚೇನಂಡ ಕಪ್ ಹಾಕಿ ಉತ್ಸವ : ದಾಖಲಾಗುವ ಪ್ರತಿ ಗೋಲಿಗೊಂದು “ಗಿಡ” ಎನ್ನುವ ಗುರಿ*
  • *ಸೈನಿಕ ಶಾಲೆ ಕೊಡಗು: 2026-27ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ*
  • *ಮಾಜಿ ಸೈನಿಕರು ಹಾಗೂ ಅವಲಂಬಿತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ : ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನದ ಭರವಸೆ*
  • *ರಂಗಸಮುದ್ರ ಗ್ರಾಮದಲ್ಲಿ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ… ಬರಿಗಾಲಲ್ಲಿ ಕೆಂಡ ಕೊಂಡ ಹಾಯ್ದ ಭಕ್ತರು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಾಜಿ ಸೈನಿಕರು ಹಾಗೂ ಅವಲಂಬಿತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ : ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನದ ಭರವಸೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಾಜಿ ಸೈನಿಕರು ಹಾಗೂ ಅವಲಂಬಿತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ : ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನದ ಭರವಸೆ*

ಏಪ್ರಿಲ್ 7, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.7 : ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಅಹವಾಲುವನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸುದೀರ್ಘ ಎರಡು ಗಂಟೆಗೂ ಹೆಚ್ಚು ಕಾಲ ಆಲಿಸಿ, ಮನವಿ ಸ್ವೀಕರಿಸಿದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದುಕೊರತೆಗಳನ್ನು ಆಲಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಾಜಿ ಸೈನಿಕರಿಗಾಗಿ ಕ್ಯಾಂಟಿನ್, ಸಮುದಾಯ ಭವನ, ಆಸ್ಪತ್ರೆ ಸೇರಿದಂತೆ ಹಲವು ಮೂಲ ಸೌಲಭ್ಯಕ್ಕೆ ಆದ್ಯತೆ ಮೇಲೆ ಜಾಗ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಮಡಿಕೇರಿ ಮತ್ತು ಪೊನ್ನಂಪೇಟೆಯಲ್ಲಿ ಮಾಜಿ ಸೈನಿಕರ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲಾಗುವುದು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ಮಾಜಿ ಸೈನಿಕರನ್ನು ಆಹ್ವಾನಿಸಲಾಗುವುದು ಎಂದು ಸೋಮಶೇಖರ್ ಅವರು ತಿಳಿಸಿದರು.
ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದುಕೊರತೆ ಆಲಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಅವರ ಉಪಸ್ಥಿತಿಯಲ್ಲಿ ಕುಂದುಕೊರತೆ ಆಲಿಸಲಾಗುವುದು, ಅದರಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಮಾಜಿ ಸೈನಿಕರ ಅದಾಲತ್ ನಡೆಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಮಾಜಿ ಸೈನಿಕರು ಪೈಸಾರಿ ಜಾಗದಲ್ಲಿ ಒಂದೆರಡು ಎಕರೆ ಅನುಭವಿಸುತ್ತಿರುವ ಭೂಮಿಯನ್ನು ಅವರ ಹೆಸರಿಗೆ ಆರ್‌ಟಿಸಿ ಮಾಡುವ ಸಂಬAಧ ಪರಿಶೀಲಿಸಲಾಗುವುದು. ಈ ಸಂಬAಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮಾಜಿ ಸೈನಿಕರಿಗೆ ಭೂಮಿ ಒದಗಿಸುವ ಸಂಬAಧ ನಿಯಮಗಳನ್ನು ಸಡಿಲಿಕೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಮಾಜಿ ಸೈನಿಕರ ಹಲವು ಕುಂದುಕೊರತೆ ಪರಿಹರಿಸಲು ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಭೂಮಿ ದಾಖಲೆ ಸಂಬAಧ ವೈಯಕ್ತಿಕ ಕಡತಗಳನ್ನು ಹಂತ ಹಂತವಾಗಿ ನಿಯಮಾನುಸಾರ ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನುಡಿದರು. ನಿವೇಶನ ಹಾಗೂ ಮನೆ ಇಲ್ಲದ ಮಾಜಿ ಸೈನಿಕರಿಗೆ ನಿವೇಶನ ಹಾಗೂ ಮನೆ ಕಲ್ಪಿಸುವ ಸಂಬAಧ ಪರಿಶೀಲಿಸಲಾಗುವುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಖಾಸಗಿ ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ನಿವೇಶನ ಮೀಸಲಿಡಲು ಸಂಬAಧಪಟ್ಟವರ ಜೊತೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಅವರು ಭರವಸೆ ನೀಡಿದರು.
ಸರ್ಕಾರಿ ಕಚೇರಿಗೆ ಬರುವ ಮಾಜಿ ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಮಾಜಿ ಸೈನಿಕರ ಜಿಲ್ಲಾ ಅಧ್ಯಕ್ಷರಾದ ಮೇಜರ್ ಜನರಲ್ (ನಿವೃತ್ತ) ಬಿ.ಎ.ಕಾರ್ಯಪ್ಪ ಅವರು ಮಾತನಾಡಿ ಮಾಜಿ ಸೈನಿಕರು ಜಮ್ಮು ಮತ್ತು ಕಾಶ್ಮೀರದಂತಹ ಎತ್ತರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿ ಬಂದಿದ್ದಾರೆ. ಇಂತಹ ಮಾಜಿ ಸೈನಿಕರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ಮನವಿ ಮಾಡಿದರು.
ಮಾಜಿ ಸೈನಿಕರಿಗಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಮತ್ತು ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಬೇಕು. ಆಸ್ಪತ್ರೆ, ಕ್ಯಾಂಟಿನ್ ಮತ್ತಿತರ ಸೌಲಭ್ಯಕ್ಕೆ ಕನಿಷ್ಠ 20 ಸೆಂಟ್ ಜಾಗವನ್ನಾದರೂ ನೀಡುವಂತಾಗಬೇಕು ಎಂದು ಕೋರಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಹುಟ್ಟು ಹಬ್ಬಕ್ಕೆ ಆಹ್ವಾನಿಸಬೇಕು ಎಂದು ಬಿ.ಎ.ಕಾರ್ಯಪ್ಪ ಅವರು ಸಲಹೆ ಮಾಡಿದರು.
ಜಿಲ್ಲೆಯ ಹಲವು ಕಡೆಗಳಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ಇಂತಹ ಒತ್ತುವರಿ ಭೂಮಿಯನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳು ಹಾಗೂ ಮಾಜಿ ಸೈನಿಕರಿಗೆ ಕನಿಷ್ಠವನ್ನಾದರೂ ಒದಗಿಸಬೇಕು ಎಂದು ಬಿ.ಎ.ಕಾರ್ಯಪ್ಪ ಅವರು ಹೇಳಿದರು.
ಮೆ| ನಿವೃತ್ತ ಚಿಂಗಪ್ಪ ಅವರು ಮಾತನಾಡಿ ಮಾಜಿ ಸೈನಿಕರು ಅವರ ಊರಿನ ಬಳಿ ಒಂದೆರಡು ಎಕರೆಯಲ್ಲಿ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತವರಿಗೆ ಆದ್ಯತೆ ಮೇಲೆ ಆರ್‌ಟಿಸಿ ಮಾಡಿಕೊಡುವಂತಾಗಬೇಕು ಎಂದು ಕೋರಿದರು. ಶೇ.50 ರಷ್ಟು ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ಮನೆ ಇಲ್ಲ. ಹಾಗಾಗಿ ಅಂತವರನ್ನು ಗುರುತಿಸಿ ಕನಿಷ್ಠ ಮೂಲ ಸೌಲಭ್ಯ ನಿವೇಶನ/ ಮನೆ ನಿರ್ಮಿಸಿಕೊಡುವಂತಾಗಬೇಕು ಎಂದು ಚಿಂಗಪ್ಪ ಅವರು ಸಲಹೆ ಮಾಡಿದರು. ಮಾಜಿ ಸೈನಿಕರಾದ ವೀರೇಶ್ ಅವರು ಮಾತನಾಡಿ ಕೆಲವು ಮಾಜಿ ಸೈನಿಕರು ಹಾಗೂ ಅವಲಂಬಿತ ಕುಟುಂಬಗಳು ಇಂದಿಗೂ ಸಹ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಆದಷ್ಟು ಆದ್ಯತೆ ಮೇಲೆ ನಿವೇಶನ ಒದಗಿಸಬೇಕು ಎಂದರು.
ಮಾಜಿ ಸೈನಿಕರೊಬ್ಬರು ಮಾತನಾಡಿ ಮಾಜಿ ಸೈನಿಕರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕುಟುಂಬದವರೇ ನನಗೆ ಪಾಲು ನೀಡದೆ ಸತಾಯಿಸುತ್ತಿದ್ದು, ಈ ಸಂಬAಧ ನನಗೆ ಪಾಲು ದೊರೆಯುವಂತಾಗಬೇಕು ಎಂದು ಕೋರಿದರು. ಬಡ ಮಾಜಿ ಸೈನಿಕರಾಗಿ ಮೈಸೂರು, ಬೆಂಗಳೂರಿನಲ್ಲಿ ಸೆಕ್ಯುರಿಟಿ ಕೆಲಸಮಾಡಿ ಜೀವನ ದೂಡುತ್ತಿದ್ದೇನೆ. ಪಿತ್ರಾರ್ಜಿ ಆಸ್ತಿ ಸಂಬAಧ ಸಹೋದರರನ್ನು ಕರೆಸಿ ಮಾತನಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಅವಲತ್ತುಕೊಂಡರು.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಾ.ಬಿ.ಸಿ.ಸತೀಶ ಅವರು ಈ ಸಂಬAಧ ನ್ಯಾಯ ಒದಗಿಸಲು ಶ್ರಮಿಸಿದ್ದರು ಎಂದು ಅವರು ಗುಣಗಾನ ಮಾಡಿದರು.
ಮಾಜಿ ಸೈನಿಕರಾದ ಐ.ಕೆ.ಮಂದಣ್ಣ ಅವರು ಮಾತನಾಡಿ ಮಾಜಿ ಸೈನಿಕರ ಮತ್ತು ಅವಲಂಬಿತರ ಅದಾಲತನ್ನು ಕಾಲ ಕಾಲಕ್ಕೆ ಆಹ್ವಾನಿಸಬೇಕು. ಮಾಜಿ ಸೈನಿಕರಿಗಾಗಿ ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಭಾರತ ಸರ್ಕಾರದಿಂದ ಏಪ್ರಿಲ್, 15 ರವರೆಗೆ ಮನೆ ಮನೆ ಸಮೀಕ್ಷೆ ಕಾರ್ಯ ನಡೆಯಲಿದ್ದು, ಈ ಕಾರ್ಯದಲ್ಲಿ ಸ್ವಯಂ ಗಣತಿ ಮಾಡುವಂತಾಗಬೇಕು ಏಪ್ರಿಲ್, 16 ರಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಏಪ್ರಿಲ್, 01 ರಿಂದ 15 ರವರೆಗೆ ಮನೆ ಮನೆ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆಯನ್ನು ಸ್ವಯಂ ದಾಖಲಿಸುವಂತಾಗಬೇಕು. ಹಾಗೆಯೇ, ಏಪ್ರಿಲ್, 16 ರಿಂದ ಮನೆ ಮನೆ ಸಮೀಕ್ಷೆ ಕಾರ್ಯ ನಡೆಯಲಿದ್ದು, ಗಣತಿದಾರರು ಮನೆಗೆ ಭೇಟಿ ನೀಡಲಿದ್ದಾರೆ ಎಂದರು.


ಎಲ್ಲಾ ಮಾಜಿ ಸೈನಿಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡು ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವಂತೆ ಅವರು ಆರ್.ಐಶ್ವರ್ಯ ಅವರು ಕೋರಿದರು.
ಮಂಗಳವಾರ ನಡೆದ ಮಾಜಿ ಸೈನಿಕರ ಮತ್ತು ಅವಲಂಬಿತರ ಕುಂದುಕೊರತೆ ಸಭೆಯಲ್ಲಿ 50 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ, ತಹಶೀಲ್ದಾರರಾದ ಪ್ರವೀಣ್ ಕುಮಾರ್, ಕೃಷ್ಣಮೂರ್ತಿ, ಸಂಜನಾ, ಮಾಜಿ ಸೈನಿಕರು ಇತರರು ಇದ್ದರು. ಫೋಟೋ :: ಮಾಜಿ ಸೈನಿಕ

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರಸಗೊಬ್ಬರ ಖರೀದಿಸಲು ಇನ್ನು ಎಫ್‍ಐಡಿ ಕಡ್ಡಾಯ*

ಏಪ್ರಿಲ್ 7, 2026

*ಕಾನೂರು : ಬ್ರಹ್ಮಗಿರಿಪುರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮುತ್ತಪ್ಪ ದೇವರ ಉತ್ಸವ*

ಏಪ್ರಿಲ್ 7, 2026

*ಏ.19 ರಂದು ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ವಿವಿಧ ಕ್ರೀಡಾಕೂಟ*

ಏಪ್ರಿಲ್ 7, 2026

*ಕಾನೂರು : ಬ್ರಹ್ಮಗಿರಿಪುರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮುತ್ತಪ್ಪ ದೇವರ ಉತ್ಸವ*

ಏಪ್ರಿಲ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.7 NEWS DESK : ವಿರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮುತ್ತಪ್ಪ ದೇವರ…

*ಏ.19 ರಂದು ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ವಿವಿಧ ಕ್ರೀಡಾಕೂಟ*

ಏಪ್ರಿಲ್ 7, 2026

*ಏ.8 ರಂದು ಮಿನಿ ಉದ್ಯೋಗ ಮೇಳ*

ಏಪ್ರಿಲ್ 7, 2026

*ನಾರ್ಗಾಣೆ : ಏ.13, 14 ಮತ್ತು 15ರಂದು ಧರ್ಮದೈವದ ನೇಮೋತ್ಸವ*

ಏಪ್ರಿಲ್ 7, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕೂತಿನಾಡು ಸುಗ್ಗಿ ಉತ್ಸವ*

ಏಪ್ರಿಲ್ 7, 2026

*ಚೇನಂಡ ಕಪ್ ಹಾಕಿ ಉತ್ಸವ : ದಾಖಲಾಗುವ ಪ್ರತಿ ಗೋಲಿಗೊಂದು “ಗಿಡ” ಎನ್ನುವ ಗುರಿ*

ಏಪ್ರಿಲ್ 7, 2026

*ಸೈನಿಕ ಶಾಲೆ ಕೊಡಗು: 2026-27ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ*

ಏಪ್ರಿಲ್ 7, 2026

*ಮಾಜಿ ಸೈನಿಕರು ಹಾಗೂ ಅವಲಂಬಿತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ : ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನದ ಭರವಸೆ*

ಏಪ್ರಿಲ್ 7, 2026

*ರಂಗಸಮುದ್ರ ಗ್ರಾಮದಲ್ಲಿ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ… ಬರಿಗಾಲಲ್ಲಿ ಕೆಂಡ ಕೊಂಡ ಹಾಯ್ದ ಭಕ್ತರು*

ಏಪ್ರಿಲ್ 7, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.7 ರ ವಿಜೇತ ತಂಡಗಳು*

ಏಪ್ರಿಲ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.