Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ನಿತಿನ್ ಕುಶಾಲಪ್ಪ ರಚಿತ “Folktales, Myths and Legends from the Deccan” ಬಿಡುಗಡೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಿತಿನ್ ಕುಶಾಲಪ್ಪ ರಚಿತ “Folktales, Myths and Legends from the Deccan” ಬಿಡುಗಡೆ

ಏಪ್ರಿಲ್ 8, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಏ.8 NEWS  DESK  : ಲೇಖಕ ಅಮ್ಮತ್ತಿಯ ಮೂಕೋಂಡ ನಿತಿನ್ ಕುಶಾಲಪ್ಪ ಅವರು ರಚಿಸಿರುವ ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಜಾನಪದ ಕಥೆಗಳನ್ನು ಆಧರಿಸಿದ ನೂತನ ಇಂಗ್ಲೀಷ್ ಕೃತಿ “Folktales, Myths and Legends from the Deccan” ಇಂದು ಬಿಡುಗಡೆಗೊಂಡಿತು. ಮಡಿಕೇರಿಯಲ್ಲಿ ಮೈಸೂರು- ಕೊಡಗು ಕ್ಷೇತ್ರದ ಸಂಸದರ ಕಚೇರಿಯಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಪುಸ್ತಕ ಬಿಡುಗಡೆಗೊಳಿಸಿ ಮತ್ತಷ್ಟು ಪುಸ್ತಕಗಳು ಸಾಹಿತ್ಯ ಲೋಕಕ್ಕೆ ದೊರೆಯಲಿ ಎಂದು ನಿತಿನ್ ಕುಶಾಲಪ್ಪ ಅವರಿಗೆ ಶುಭ ಹಾರೈಸಿದರು. “Folktales, Myths and Legends from the Deccan” ನಿತಿನ್ ಕುಶಾಲಪ್ಪ ಅವರು ರಚಿಸಿರುವ 10 ನೇ ಇಂಗ್ಲೀಷ್ ಕೃತಿಯಾಗಿದೆ. ಈ ಕೃತಿ ದಕ್ಷಿಣ ಭಾರತದ ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪರಿಚಯಿಸುವ ಅಪರೂಪದ ಪ್ರಯಾಣವಾಗಿದ್ದು, ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡು ಪ್ರದೇಶಗಳ 11 ಜನಪದ ಕಥೆಗಳ ಸಂಗ್ರಹವಿದೆ. ವಿವಿಧ ಪ್ರದೇಶಗಳಲ್ಲಿ ಅಡಗಿರುವ ಮರೆತು ಹೋದ ಮೌಖಿಕ ಸಂಪ್ರದಾಯಗಳು, ಪುರಾತನ ಪುರಾಣಗಳು ಮತ್ತು ಐತಿಹಾಸಿಕ ಸಾಕ್ಷಿಗಳನ್ನು ಅತ್ಯಂತ ಸುಂದರವಾಗಿ ಹೆಣೆಯಲಾಗಿದೆ. ಸ್ಥಳೀಯ ರಾಜರ ಶೌರ್ಯಗಾಥೆಗಳಿಂದ ಹಿಡಿದು, ಪವಿತ್ರ ವನಗಳ ರಹಸ್ಯಗಳು ಮತ್ತು ಜಾನಪದದ ರೋಚಕ ಕಥೆಗಳವರೆಗೆ ಲೇಖನವನ್ನು ವಿಸ್ತರಿಸಲಾಗಿದೆ. ಐತಿಹಾಸಿಕ ಸತ್ಯ ಮತ್ತು ಜನಪದ ನಂಬಿಕೆಗಳ ನಡುವಿನ ಕೊಂಡಿಯಾಗಿ ಈ ಕೃತಿ ರಚನೆಗೊಂಡಿದೆ. ಶತಮಾನಗಳಿಂದ ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕøತಿಕ ಸ್ವರೂಪವನ್ನು ರೂಪಿಸಿದ ಕಥೆಗಳನ್ನು ದಾಖಲಿಸುವ ಮೂಲಕ ಪ್ರಾದೇಶಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಈ ಪುಸ್ತಕ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲೇಖಕ ನಿತಿನ್ ಕುಶಾಲಪ್ಪ ತಿಳಿಸಿದರು. “Folktales, Myths and Legends from the Deccan” ಕೃತಿ ಅಮೆಜಾóನ್ ನಲ್ಲೂ ಲಭ್ಯವಿದೆ ಎಂದು ಹೇಳಿದರು. ನಿತಿನ್ ಕುಶಾಲಪ್ಪ ಅವರು ಇಲ್ಲಿಯವರೆಗೆ ಹತ್ತು ಪುಸ್ತಕಗಳನ್ನು ರಚಿಸಿದ್ದಾರೆ. ಕೊಡಗು ಇತಿಹಾಸದ ಕುರಿತಾಗಿ ಬರೆದಿರುವ ನಾಲ್ಕು ಪುಸ್ತಕಗಳು ಸಾಹಿತ್ಯಾಸಕ್ತರ ಗಮನ ಸೆಳೆದಿದೆ. 2023 ರಲ್ಲಿ ಇವರು ಹೊರ ತಂದಿರುವ ‘Dakshin : South Indian Myths and Fables Retold’ (ದಕ್ಷಿಣ : ದಕ್ಷಿಣ ಭಾರತೀಯ ಪೌರಾಣಿಕ ಕಥೆಗಳ ಪುನರ್ ವಿವರಣೆ) ಗೆ 2025 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ನಿತಿನ್ ಕುಶಾಲಪ್ಪ ಅವರ ತಾಯಿ ಮೂಕೋಂಡ ಪುಷ್ಪ ಪೂಣಚ್ಚ ಅವರು ಕೂಡ ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದ ಗಮನ ಸೆಳೆದಿದ್ದಾರೆ. ಪ್ರತಿಷ್ಠಿತ “ರೂಪಾ ಬುಕ್ಸ್” (Rupa Books) ಪ್ರಕಾಶನ ಸಂಸ್ಥೆಯು ಹೊರ ತಂದಿರುವ “Folktales, Myths and Legends from the Deccan” ಕೃತಿ ಬಿಡುಗಡೆ ಸಂದರ್ಭ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ, ದಿಶಾ ಸಮಿತಿ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಚೇಲಾವರದಲ್ಲಿ ಕಾಳಿಂಗ ಸರ್ಪದ ರಕ್ಷಣೆ

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.9 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ…

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಮಡಿಕೇರಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ : ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ಅಕ್ಟೋಬರ್ 9, 2026

ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೂ.1.75 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ : ಶಾಸಕ ಎ.ಎಸ್.ಪೊನ್ನಣ್ಣರಿಂದ ಭೂಮಿಪೂಜೆ

ಅಕ್ಟೋಬರ್ 9, 2026

ಅ.10ರಂದು ವಿರಾಜಪೇಟೆ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಅಕ್ಟೋಬರ್ 9, 2026

ಕೊಡಗು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 9, 2026

ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಹೈ ಅಲರ್ಟ್, 24 ಗಂಟೆ ಮೊಬೈಲ್ ಇಂಟರ್ನೆಟ್ ಸ್ಥಗಿತ; 57 ಮೆಟ್ರೋ ನಿಲ್ದಾಣಗಳ ಪ್ರವೇಶ–ನಿರ್ಗಮನ ದ್ವಾರ ಬಂದ್; 20 ವಲಯಗಳಾಗಿ ವಿಂಗಡಣೆ, 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

ಅಕ್ಟೋಬರ್ 9, 2026

ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಅಕ್ಟೋಬರ್ 9, 2026

ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ

ಅಕ್ಟೋಬರ್ 9, 2026

2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ

ಅಕ್ಟೋಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.