
ಮಡಿಕೇರಿ ಏ.9 NEWS DESK : ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪ ಸಮೀಪದ ಹಾಲೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಹಾಲೇರಿ ಗ್ರಾಮದ ನಿವಾಸಿ ರವಿ ರೈ(67) ಎಂಬುವವರೇ ಮೃತ ದುರ್ದೈವಿ. ಮನೆ ಬಳಿಯ ತೋಟದಲ್ಲಿನ ಮರವನ್ನೇರಿ ಕೊಂಬೆಗಳನ್ನು ಕಡಿಯುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.









