
ಕುಶಾಲನಗರ ಏ.9 NEWS DESK : ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಬಿ.ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಎರಡು ಮಂದಿ ನಾಮಪತ್ರಗಳನ್ನು ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ಒಟ್ಟು 12 ಮಂದಿ ನಿರ್ದೇಶಕರು ಹಾಜರಿದ್ದು , ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಬಿ.ಚಂದ್ರಪ್ಪ ಅವರಿಗೆ 7 ಮತಗಳು, ಪ್ರತಿಸ್ಪರ್ಧಿ ಕೆ.ಎಂ.ಪ್ರಸನ್ನ ಅವರಿಗೆ 5 ಮತಗಳು ಬಂದವು. ಚುನಾವಣಾ ಅಧಿಕಾರಿಯಾಗಿ ಸೋಮವಾರಪೇಟೆ ತಾಲ್ಲೂಕಿನ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಅಧಿಕಾರಿ ಪಿ. ಬಿ. ಮೋಹನ್ ಕಾರ್ಯನಿರ್ವಹಿಸಿದರು. ಸಂಘದ ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪನವರು ನಿಧನದಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಚಂದ್ರಕಲಾ, ನಿರ್ದೇಶಕರಾದ ಬಿ.ಎಂ.ಪಾರ್ವತಿ, ಕೆ.ಎಸ್.ಮಂಜುನಾಥ್, ಎನ್.ಸಿ.ಪೊನ್ನಪ್ಪ, ಹೆಚ್.ಜೆ.ಶರತ್, ಬಿ.ಸಿ.ಮಲ್ಲಿಕಾರ್ಜುನ, ಹೆಚ್.ಡಿ.ನಂದಕುಮಾರ್, ಡಿ.ಕೆ.ಗಂಗಾಧರ್, ಹೆಚ್.ಎನ್.ಮಹಾದೇವ ಹಾಗೂ ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಜಲಜಾ ಶೇಖರ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜಗದೀಶ್ ಹಾಜರಿದ್ದರು.









