Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿದ್ಯಾರ್ಥಿಗಳಿಗೆ ಪುಸ್ತಕ ಉತ್ತಮ ಸಹಚರರಾಗಿರಬೇಕು : ಪ್ರೊ.ಬಿ.ನಂಜುಂಡ ಸ್ವಾಮಿ*
  • *ಮಡಿಕೇರಿ ಕೊಡವ ಸಮಾಜಕ್ಕೆ ಕೊಡವ ಹೆರಿಟೇಜ್ ಕೇಂದ್ರ ಹಸ್ತಾಂತರಿಸಲು ಮನವಿ*
  • *ಮಡಿಕೇರಿ : 272 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*
  • *ರಾಜಸೀಟು ಉದ್ಯಾನವನದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಚಾಲನೆ*
  • *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಅಂತರ ಕಾಲೇಜು ಥ್ರೋಬಾಲ್ ಪಂದ್ಯಾಟ : ಕ್ರೀಡೆ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ : ಪ್ರೊ.ಮೇಜರ್ ರಾಘವ ಬಿ. ಅಭಿಮತ*
  • *ತೈಲ ಬಿಕ್ಕಟ್ಟು : ಬೆಂಗಾವಲು ಪಡೆಯನ್ನು ಹಿಂಪಡೆಯುವಂತೆ ಕೋರಿದ ಶಾಸಕ ಪೊನ್ನಣ್ಣ*
  • *ರಾಜಾಸೀಟ್ ನಲ್ಲಿ ಕಂಗೊಳಿಸಿದ ಕೋವಿ ಮತ್ತು ಕೊಳಲು : ಬಾಸುಮ ಕೊಡಗು ನಿದೇ೯ಶನದ ಹೊಸ ಚಿತ್ರಕ್ಕೆ ಮುಹೂತ೯ ನೆರವೇರಿಸಿದ ಆಯ೯ವಧ೯ನ್ ಗುರೂಜಿ*
  • *ಪಟ್ಟಮಾಡ ಕುಟುಂಬದ ಐನ್ ಮನೆಯಲ್ಲಿ ಗುರುಕಾರೋಣ ತೆರೆ :  ಸಂಪ್ರದಾಯ ಸಂರಕ್ಷಣೆಯಲ್ಲಿ ಐನ್ ಮನೆಗಳ ಪಾತ್ರ ಪ್ರಮುಖ : ಶಾಸಕ ಎ.ಎಸ್.ಪೊನ್ನಣ್ಣ*
  • *ಮಡಿಕೇರಿ ಕೊಡವ ಸಮಾಜಕ್ಕೆ ಕೊಡವ ಹೆರಿಟೇಜ್ ಕೇಂದ್ರ ಹಸ್ತಾಂತರಿಸಲು ಮನವಿ*
  • *ಪೊನ್ನಂಪೇಟೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ‌ ಸಭೆ : ಮುಂಗಾರು ಶೀಘ್ರ ಆರಂಭ : ಅಗತ್ಯ ಸಿದ್ಧತೆಗೆ ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಜಾಸೀಟ್ ನಲ್ಲಿ ಕಂಗೊಳಿಸಿದ ಕೋವಿ ಮತ್ತು ಕೊಳಲು : ಬಾಸುಮ ಕೊಡಗು ನಿದೇ೯ಶನದ ಹೊಸ ಚಿತ್ರಕ್ಕೆ ಮುಹೂತ೯ ನೆರವೇರಿಸಿದ ಆಯ೯ವಧ೯ನ್ ಗುರೂಜಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಜಾಸೀಟ್ ನಲ್ಲಿ ಕಂಗೊಳಿಸಿದ ಕೋವಿ ಮತ್ತು ಕೊಳಲು : ಬಾಸುಮ ಕೊಡಗು ನಿದೇ೯ಶನದ ಹೊಸ ಚಿತ್ರಕ್ಕೆ ಮುಹೂತ೯ ನೆರವೇರಿಸಿದ ಆಯ೯ವಧ೯ನ್ ಗುರೂಜಿ*

ಮೇ 15, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 15 NEWS DESK :  ನಗರದ ರಾಜಾಸೀಟ್ ನಲ್ಲಿ ಕೋವಿ ಮತ್ತು ಕೊಳಲು ಹೆಸರಿನ ನೂತನ ಚಲನಚಿತ್ರಕ್ಕೆ ಮುಹೂತ೯ ನೆರವೇರಿತು. ಹಿರಿಯ ಕಲಾವಿದ ಕಾಂತಾರ ಖ್ಯಾತಿಯ ಬಾಸುಮ ಕೊಡಗು ನಿದೇ೯ಶನದಲ್ಲಿ ಮಂಗಳೂರಿನ  ಇಂಪೀರಿಯಲ್ ಪ್ರೊಡಕ್ಷನ್ಸ್ ಸಂಸ್ಥೆಯ ನಿಮಾ೯ಣದಲ್ಲಿ ತಯಾರಾಗುವ ಕೋವಿ ಮತ್ತು ಕೊಳಲು ಚಿತ್ರಕ್ಕೆ ಮುಹೂತ೯  ಪೂಜೆ ನೆರವೇರಿಸಿ  ಖ್ಯಾತ ಜೋತಿಷಿ ಆಯ೯ವಧ೯ನ್ ಗುರೂಜಿ ಕ್ಲಾಪ್ ಮಾಡಿದರು. ಉತ್ತಮ ಕನ್ನಡ ಚಿತ್ರಗಳು ತೆರೆಗೆ ಬರಬೇಕಾಗಿರುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬಾಸುಮ ಅವರ ಕೋವಿ ಮತ್ತು ಕೊಳಲು ಭರವಸೆ ಮೂಡಿಸಿದೆ ಎಂದು ಅವರು ಹೇಳಿದರು. ಚಿತ್ರದ ನಿಮಾ೯ಣ ಸಂಸ್ಥೆಯಾದ ಇಂಪೀರಿಯಲ್  ಸಂಸ್ಥೆಯ ಮುಖ್ಯಕಾಯ೯ನಿವ೯ಹಣಾಧಿಕಾರಿ   ಹೇಮಂತ್ ಕುಲಾಲ್, ಮಾತನಾಡಿ, ಕೋವಿ ಮತ್ತು ಕೊಳಲು ಉತ್ತಮ ಕಥೆ ಹೊಂದಿರುವ ಹಿನ್ನಲೆಯಲ್ಲಿ ನಿಮಾ೯ಣಕ್ಕೆ ಮುಂದಾಗಿರುವುದಾಗಿ ಹೇಳಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಮಾತನಾಡಿ,  ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹೆಸರಾಗಿರುವ ಹಿರಿಯ ರಂಗಕಮಿ೯ ಬಾಸುಮ ಅವರು ಕನ್ನಡದ ಗಟ್ಟಿ ಕಥೆಯನ್ನು ಆದರಿಸಿ ಕೋವಿ ಮತ್ತು ಕೊಳಲು ಚಿತ್ರವನ್ನು ತೆರೆಗೆ ತೆರುತ್ತಿರುವುದು ಶ್ಲಾಘನೀಯ ಪ್ರಯತ್ನ ಎಂದರು.  ಅನೇಕ ರಂಗಕಮಿ೯ಗಳಿಗೆ ಈ ಚಿತ್ರ ಅವಕಾಶ ಕಲ್ಪಿಸಿರುವುದು ಮೆಚ್ಚತಕ್ಕದ್ದು ಎಂದು ನುಡಿದ ಅನಿಲ್,  ತನ್ನ ಹೆಸರಿನಲ್ಲಿಯೇ ಕೊಡಗು ಎಂಬ ಹೆಸರನ್ನು ಹೊಂದಿರುವ ಬಾಸುಮ ಕೊಡಗು, ಯಶಸ್ವಿ ಚಿತ್ರದ ಮೂಲಕ ದೇಶವ್ಯಾಪಿ  ಕಲಾಲೋಕದಲ್ಲಿ ಕೊಡಗಿನ  ಕೀತಿ೯ಯನ್ನೂ   ವಿಜೖಂಭಿಸುವಂತೆ ಮಾಡಲಿ ಎಂದು ಹಾರೈಸಿದರು. ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಮಾತನಾಡಿ, ಡಾ. ರಾಜ್ ಕುಮಾರ್, ವಿಷ್ಮುವಧ೯ನ್ ಮತ್ತಿತರ ನಟರು ಕನ್ನಡ ಪರವಾದ ಸಂಸ್ಕೃತಿಯನ್ನು ದೇಶವ್ಯಾಪಿ ಬಿಂಬಿಸಿದ್ದರು. ಕುಟುಂಬ ಸಹಿತ ವೀಕ್ಷಿಸುವಂಥ ಕನ್ನಡ ಚಿತ್ರಗಳು ಹೆಚ್ಚಾಗಿ ನಿಮಾ೯ಣವಾಗಬೇಕಾಗಿದೆ ಎಂದು  ನುಡಿದರು.  ಕೋವಿ ಮತ್ತು ಕೊಳಲು ಸಿನಿಮಾ ನಿದೇಶಕ ಬಾಸುಮ ಕೊಡಗು ಮಾತನಾಡಿ, ಗುರುರಾಜ ಮಾರ್ಪಳ್ಳಿಯವರ “ಗರ್ಭ” ಕಾದಂಬರಿ ಆಧಾರಿತ ಕೋವಿ ಮತ್ತು ಕೊಳಲು ಸಿನೆಮಾವು ಕಲಾತ್ಮಕ ಹಾಗೂ ವಾಣಿಜ್ಯಕ ಚಲನಚಿತ್ರವಾಗಿದೆ.  ಮಡಿಕೇರಿ, ಸಂಪಾಜೆ ಮತ್ತು ಸುಳ್ಯ ವಿಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.   ಕಲೆ ಮತ್ತು ಹಣದ ನಡುವಿನ ಸಂಘರ್ಷಗಳ ಕುರಿತ ಕಥೆಯನ್ನು ಇಲ್ಲಿ ಚಲನಚಿತ್ರವಾಗಿ ನಿರ್ಮಿಸಲಾಗುತ್ತಿದೆ.  ಈ ವಷ೯ಧ ಸೆಪ್ಪಂಬರ್ ನಲ್ಲಿ ತೆರೆಕಾಣಲಿದೆ ಎಂದರು. ಚಿತ್ರದ  ನಾಯಕಿ,  ರಾಷ್ಟ್ರ   ಪ್ರಶಸ್ತಿ ವಿಜೇತ ಕಲಾವಿದೆ ಅಕ್ಷತಾ ಪಾಂಡವಪುರ ಮಾತನಾಡಿ, ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ರಂಗಭೂಮಿಯಲ್ಲಿ ಹೆಸರು ಮಾಡಿರುವ ಅನೇಕರು ನಟಿಸುತ್ತಿದ್ದಾರೆ. ತಾನು ರಾಜ್ಯವ್ಯಾಪಿ ರಂಗಪ್ರದಶ೯ನ ನೀಡಿದ್ದರೂ ಕೊಡಗು ಜಿಲ್ಲೆಯಲ್ಲಿ ಅವಕಾಶ ದೊರಕಿರಲಿಲ್ಲ. ಈ ಚಿತ್ರದ ಮೂಲಕ ಮಡಿಕೇರಿಗೆ ಬರುವ ಅವಕಾಶ ಲಭಿಸಿತು ಎಂದರು. ಕನಾ೯ಟಕ ಅರೆಭಾಷಾ ಸಾಹಿತ್ಯ ಸಾಂಸ್ಕೖತಿಕ ಅಕಾಡೆಮಿ ಸದಸ್ಯ ಪಿ.ಎಂ.ಸಂದೀಪ್ ಮಾತನಾಡಿ, ಕೋವಿ ಮತ್ತು ಕೊಳಲು ಎಂಬ ಹೆಸರೇ ಗಮನ ಸೆಳೆಯುತ್ತಿದೆ. ಕೊಡಗಿನ ಸಂಸ್ಕೃತಿಯ ಭಾಗವಾಗಿರುವ ಕೋವಿಯ ಹೆಸರು ಚಿತ್ರದಲ್ಲಿ ಮುಖ್ಯ ಅಂಶವಾಗಿರುವುದು ಕುತೂಹಲಕಾರಿಯಾಗಿದೆ ಎಂದರು.   ಪಿಎಸ್ ಫಿಲಂಸ್ ನಿರ್ದೇಶಕರಾದ ಕುಮಾರ್ ಬಿ.ಟಿ., ಪ್ರೊಡಕ್ಷನ್ ಮ್ಯಾನೇಜರ್ ಜಯ ಕುಮಾರ್,  ತೋಟಗಾರಿಕಾ ಇಲಾಖಾ ಹಿರಿಯ ನಿರ್ದೇಶಕರಾದ ಫಣೀಂದ್ರ, ಪುರಾತತ್ವ ಇಲಾಖೆಯ  ಅಧಿಕಾರಿ ರೇಖಾ,   ಪತ್ರಕತ೯ , ರಘು ಕೋಟಿ ಚಿತ್ರದ   ಮುಹೂತ೯ ಸಂದಭ೯  ಹಾಜರಿದ್ದು ಶುಭಹಾರೈಸಿದರು.  ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶೌರ್ಯತೇಜ  ಚಿತ್ರಕಥೆ, ಸಂಭಾಷಣೆ ಬರೆದಿರುವ ಚಿತ್ರಕ್ಕೆ   . ಛಾಯಾಗ್ರಾಹಕರಾಗಿ ದೃಶಾ ಕೊಡಗು, ಕಲಾ ನಿರ್ದೇಶಕರಾಗಿ   ಲೋಕೇಶ್ ಊರುಬೈಲು   ಕಾಯ೯ನಿವ೯ಹಿಸುತ್ತಿದ್ದಾರೆ.  ತಾರಾಗಣದಲ್ಲಿ  ಅಕ್ಷತಾ ಪಾಂಡವಪುರ, ನವೀನ್ ಡಿ.ಪಡೀಲ್, ಮೋಹನ್ ಶೇಣಿ, ಮುರಳಿ ಶೃಂಗೇರಿ, ಆನಂದ ತುಮಕೂರು, ಶೈಲಶ್ರೀ, ಡಿಂಗ್ರಿ ನರೇಶ್, ಪಲ್ಲವಿ  , ಕುಶಾಲನಗರದ ಮಾನ್ಯ ಕುಮಾರ್ ಅಭಿನಯಿಸುತ್ತಿದ್ದಾರೆ.  :: ಶಾಸಕ ಡಾ.ಮಂಥರ್ ಗೌಡ ಶುಭಹಾರೈಕೆ ::  ರಾಜಾಸೀಟ್ ಬಳಿ ನೂತನ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಕೋವಿ ಮತ್ತು ಕೊಳಲ  ಚಿತ್ರತಂಡವನ್ನು ಭೇಟಿಯಾಗಿ ಶುಭಹಾರೈಸಿದರು. ಕೊಡಗಿನ ಸಂಪಾಜೆ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸುವ ಮೂಲಕ  ಜಿಲ್ಲೆಯ ಸುಂದರ ದೖಶ್ಯಗಳನ್ನು  ಪ್ರೇಕ್ಷಕರಿಗೆ ಪರಿಚಯಿಸುವ ಕಾಯ೯ ಶ್ಲಾಘನೀಯ ಎಂದೂ ಶಾಸಕ ಮಂಥರ್ ನುಡಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿದ್ಯಾರ್ಥಿಗಳಿಗೆ ಪುಸ್ತಕ ಉತ್ತಮ ಸಹಚರರಾಗಿರಬೇಕು : ಪ್ರೊ.ಬಿ.ನಂಜುಂಡ ಸ್ವಾಮಿ*

ಮೇ 15, 2026

*ಮಡಿಕೇರಿ ಕೊಡವ ಸಮಾಜಕ್ಕೆ ಕೊಡವ ಹೆರಿಟೇಜ್ ಕೇಂದ್ರ ಹಸ್ತಾಂತರಿಸಲು ಮನವಿ*

ಮೇ 15, 2026

*ಮಡಿಕೇರಿ : 272 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*

ಮೇ 15, 2026

*ಮಡಿಕೇರಿ ಕೊಡವ ಸಮಾಜಕ್ಕೆ ಕೊಡವ ಹೆರಿಟೇಜ್ ಕೇಂದ್ರ ಹಸ್ತಾಂತರಿಸಲು ಮನವಿ*

ಮೇ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ,ಮೇ 15 NEWS DESK : ಮಡಿಕೇರಿಯಲ್ಲಿರುವ ಕೊಡವ ಹೆರಿಟೇಜ್ ಕೇಂದ್ರವನ್ನು ಮಡಿಕೇರಿ ಕೊಡವ ಸಮಾಜಕ್ಕೆ ಹಸ್ತಾಂತರಿಸುವ ಕುರಿತು ಮಡಿಕೇರಿ…

*ಮಡಿಕೇರಿ : 272 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*

ಮೇ 15, 2026

*ರಾಜಸೀಟು ಉದ್ಯಾನವನದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಚಾಲನೆ*

ಮೇ 15, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಅಂತರ ಕಾಲೇಜು ಥ್ರೋಬಾಲ್ ಪಂದ್ಯಾಟ : ಕ್ರೀಡೆ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ : ಪ್ರೊ.ಮೇಜರ್ ರಾಘವ ಬಿ. ಅಭಿಮತ*

ಮೇ 15, 2026

*ತೈಲ ಬಿಕ್ಕಟ್ಟು : ಬೆಂಗಾವಲು ಪಡೆಯನ್ನು ಹಿಂಪಡೆಯುವಂತೆ ಕೋರಿದ ಶಾಸಕ ಪೊನ್ನಣ್ಣ*

ಮೇ 15, 2026

*ರಾಜಾಸೀಟ್ ನಲ್ಲಿ ಕಂಗೊಳಿಸಿದ ಕೋವಿ ಮತ್ತು ಕೊಳಲು : ಬಾಸುಮ ಕೊಡಗು ನಿದೇ೯ಶನದ ಹೊಸ ಚಿತ್ರಕ್ಕೆ ಮುಹೂತ೯ ನೆರವೇರಿಸಿದ ಆಯ೯ವಧ೯ನ್ ಗುರೂಜಿ*

ಮೇ 15, 2026

*ಪಟ್ಟಮಾಡ ಕುಟುಂಬದ ಐನ್ ಮನೆಯಲ್ಲಿ ಗುರುಕಾರೋಣ ತೆರೆ :  ಸಂಪ್ರದಾಯ ಸಂರಕ್ಷಣೆಯಲ್ಲಿ ಐನ್ ಮನೆಗಳ ಪಾತ್ರ ಪ್ರಮುಖ : ಶಾಸಕ ಎ.ಎಸ್.ಪೊನ್ನಣ್ಣ*

ಮೇ 15, 2026

*ಮಡಿಕೇರಿ ಕೊಡವ ಸಮಾಜಕ್ಕೆ ಕೊಡವ ಹೆರಿಟೇಜ್ ಕೇಂದ್ರ ಹಸ್ತಾಂತರಿಸಲು ಮನವಿ*

ಮೇ 15, 2026

*ಪೊನ್ನಂಪೇಟೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ‌ ಸಭೆ : ಮುಂಗಾರು ಶೀಘ್ರ ಆರಂಭ : ಅಗತ್ಯ ಸಿದ್ಧತೆಗೆ ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ*

ಮೇ 15, 2026

*ಅಭಿವೃದ್ಧಿ ಶೂನ್ಯ ಸರಕಾರ ಹಿಜಾಬ್ ರಾಜಕಾರಣಕ್ಕಿಳಿದಿದೆ : ವಿರಾಜಪೇಟೆ ಬಿಜೆಪಿ ಅಸಮಾಧಾನ*

ಮೇ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.