
ಮಡಿಕೇರಿ NEWS DESK ಜೂ.12 : ವಯೋವೃದ್ಧರು ಹಾಗೂ ಆಶ್ರಯ ಇಲ್ಲದವರಿಗೆ ಆಶ್ರಯ ನೀಡಿ ಸಂತೈಸುತ್ತಿರುವ ಮಡಿಕೇರಿಯ ವಿಕಾಸ್ ಜನತಾ ಸೇವಾ ಟ್ರಸ್ಟ್ ನ ವ್ಯವಸ್ಥಾಪನಾ ಸಮಿತಿಯ ನೂತನ ನಿರ್ದೇಶಕರುಗಳಾಗಿ ಓಂ ಪ್ರಕಾಶ್ ರಾತ್ಹೊರೆ, ರಾಜೀವ್, ಪ್ರಸಾದ್ ಕೆ.ಬಿ ಹಾಗೂ ಮಲ್ಲಿಗೆ ಗೋಪಾಲ್ ಆಯ್ಕೆಯಾಗಿದ್ದಾರೆ. ಟ್ರಸ್ಟ್ ನ ಅಧ್ಯಕ್ಷ ನವೀನ್, ಗೌರವಾಧ್ಯಕ್ಷ ಪ್ರಸನ್ನ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಮಿನಾಜ಼್ ಪ್ರವೀಣ್ ಅವರ ಸಮ್ಮುಖದಲ್ಲಿ ನೂತನ ನಿರ್ದೇಶಕರುಗಳ ಆಯ್ಕೆ ಪ್ರಕಿಯೆ ನಡೆಯಿತು ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








