
ಸುಂಟಿಕೊಪ್ಪ ಜು.11 NEWS DESK : ಮಳೆಗೆ ಹಾನಿಯಾದ ಮನೆಯ ಸಂತ್ರಸ್ತರನ್ನು ಶಾಸಕ ಡಾ.ಮಂತರ್ ಗೌಡ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಸುಂಟಿಕೊಪ್ಪದ ಜನತಾ ಕಾಲೋನಿಯ ಎಲಿಜಬೆತ್ ಎಂಬವರ ಮನೆಯು ಗಾಳಿ ಮಳೆಗೆ ಹಾನಿಗೊಂಡಿದ್ದು, ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‍ಗೌಡ ಭೇಟಿ ನೀಡಿ ಸಾಂತ್ವನ ಹೇಳಿ ಸರಕಾರ ಹಾಗೂ ವೈಯಕ್ತಿಕ ಸಹಾಯಹಸ್ತ ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು. ಅಧಿಕಾರಿಗಳಿಗೆ ಸರಕಾರದಿಂದ ದೊರೆಯುವ ಸಲವತ್ತುಗಳನ್ನು ಅದಷ್ಟು ಬೇಗನೆ ಒದಗಿಸಿಕೊಡಬೇಕು ಅಲ್ಲದೆ ನನ್ನ ವೈಯಕ್ತಿಕ ಸಹಾಯಹಸ್ತವನ್ನು ನೀಡುವ ಮೂಲಕ ಪುನರ್ ಮನೆ ನಿರ್ಮಾಣಕ್ಕೆ ಮುಂದಾಗುವುದಾಗಿ ಅವರು ಹೇಳಿದರು. ಕುಟುಂಬವು ತುಂಬಾ ಅಪಾಯದಲ್ಲಿರುವ ಮನೆಯಲ್ಲಿಯೇ ವಾಸಿಸುತ್ತಿರುವುದನ್ನು ಮನಗಂಡ ಶಾಸಕರು ಮನೆಯನ್ನು ತೆರವುಗೊಳಿಸಿ ಬಾಡಿಗೆ ಮನೆಯಲ್ಲಿ ನೆಲೆಸುವಂತೆ ಸೂಚಿಸಿದರಲ್ಲದೆ. ಅವರಿಗೆ ಬೇಕಾದ ಅಗತ್ಯ ನೇರವನ್ನು ಒದಗಿಸುವುದಾಗಿ ಭರವಸೆಯನ್ನು ನೀಡಿದರು. ಕಂದಾಯ ಇಲಾಖೆಯ ಕಂದಾಯ ಪರೀವಿಕ್ಷಕರಾದ ಪ್ರಶಾಂತ್ ಅವರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕೆಂದು ಅವರು ಸೂಚಿಸಿದರು. ಪಂಚಾಯಿತಿ ವತಿಯಿಂದ ಸಂತ್ರಸ್ತರಿಗೆ ಬೇಕಾದ ಸೂಕ್ತ ಸೌಲಭ್ಯವನ್ನು ಒದಗಿಸುವಂತೆ ಶಾಸಕರು ಸೂಚಿಸಿದರು. ಜನತಾ ಕಾಲೋನಿಯಲ್ಲಿ ನೆಲೆಸಿರುವ ನಿವಾಸಿಗಳು ವಾಸದ ಮನೆಯವರು ಸುತ್ತ ಮುತ್ತಲಿನ ಕೆಲವು ಮನೆಯ ಆವರಣಗೋಡೆಯು ಅಪಾಯದ ಅಂಚಿನಲ್ಲಿದ್ದು, ಕಾಲೋನಿಯು ತಗ್ಗುಪ್ರದೇಶದಲ್ಲಿದ್ದು, ಮಳೆ ಅಧಿಕವಾಗಿ ಸುರಿದರೆ 2 ಭಾಗಗಳಿಂದ ಮಳೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ರಸ್ತೆ, ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ನಾವು ಮಳೆಗಾಲದಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ರಸ್ತೆ ಚರಂಡಿ ಸೇರಿದಂತೆ ಸಾಕಷ್ಟು ಅವ್ಯವಸ್ಥೆಗಳು ಈ ಕಾಲೋನಿಯಲ್ಲಿದ್ದು ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಲೋನಿಯ ನಿವಾಸಿಗಳು ಮನವಿ ಮಾಡಿಕೊಂಡರು. ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್‍ಖಾನ್, ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಪಿ.ಎಫ್.ಸಬಾಸ್ಟೀನ್,ಶಿವಮ್ಮ ಮಹೇಶ್, ಮಾಜಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಮಣಿ ಹಾಗೂ ಕಾಲೋನಿಯ ನಿವಾಸಿಗಳು ಇದ್ದರು.









