
ಮಡಿಕೇರಿ ಜು.13 NEWS DESK : 2026-2027ನೇ ಸಾಲಿನ ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಹಾಗೂ ತರಗತಿ ಪ್ರತಿನಿಧಿಗಳ ಚುನಾವಣೆ ನಡೆಯಿತು. ಪ್ರತಿ ತರಗತಿಯಿಂದ ತಲಾ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪ್ರಥಮ ಕಲಾ ವಿಭಾಗದಿಂದ ಅಭಿಜಿತ್ ಹೆಚ್.ಎನ್. ಮತ್ತು ನವ್ಯ ಹೆಚ್. ಜಿ.,ದ್ವಿತೀಯ ಕಲಾ ವಿಭಾಗದಿಂದ ವೇದಾಂತ್ ಪೂವಯ್ಯ ಎಂ. ಟಿ ಮತ್ತು ಪ್ರಜ್ಞಾ. ಪಿ.ಸಿ., ಪ್ರಥಮ ವಾಣಿಜ್ಯ ವಿಭಾಗದಿಂದ ದ್ವಿತೀಯ ವಾಣಿಜ್ಯ ವಿಭಾಗದಿಂದ ಸಂಜು ಪಿ.ಟಿ ಮತ್ತು ಕಾವ್ಯ ವೈ.ಎಸ್. ಪ್ರಥಮ ವಿಜ್ಞಾನ ವಿಭಾಗದಿಂದ ಮೊಹಮ್ಮದ್ ಹಿಷನ್ ಕೆ.ಎಸ್ ಮತ್ತು ಫ್ಲೆವಿಯ ಅಗ್ನಿಸ್ ಸಿ.ಫ್. ದ್ವಿತೀಯ ವಿಜ್ಞಾನ ವಿಭಾಗದಿಂದ ರಕ್ಷಿತಾ ಎಂ.ಎ ನಂತರ ನಡೆದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾವ್ಯ ವೈ.ಎಸ್.ದ್ವಿತೀಯ ವಾಣಿಜ್ಯ ವಿಭಾಗ, ಜಂಟಿ ಕಾರ್ಯದರ್ಶಿಗಳಾಗಿ ಸಂಜು ಪಿ. ಟಿ. ದ್ವಿತೀಯ ವಾಣಿಜ್ಯ ವಿಭಾಗ ಮತ್ತು ರಕ್ಷಿತಾ ಎಂ.ಎ.ದ್ವಿತೀಯ ವಿಜ್ಞಾನ ವಿಭಾಗ ಇವರು ಅವಿರೋಧವಾಗಿ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಯಾಗಿ ಕು.ಬೆನಿನ್ ಹಚ್. ಜಿ.,ದ್ವಿತೀಯ ವಾಣಿಜ್ಯ ವಿಭಾಗ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಶಿಕಾ ಟಿ. ಎನ್.ದ್ವಿತೀಯ ವಾಣಿಜ್ಯ ವಿಭಾಗದಿಂದ ಆಯ್ಕೆಗೊಂಡರು. ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಾಂಶುಪಾಲರು,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.









