Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*
  • *VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*
  • *ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*
  • *ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*
  • *ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*
  • *ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*
  • *ಕಸ್ತೂರಿರಂಗನ್ ವರದಿ ಸಂವಾದ : ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್ ಅಭಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೂಡುಮಂಗಳೂರು : ಟಿ.ಜಿ.ಪ್ರೇಮಕುಮಾರ್ ಅವರಿಗೆ ಬೀಳ್ಕೊಡುಗೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೂಡುಮಂಗಳೂರು : ಟಿ.ಜಿ.ಪ್ರೇಮಕುಮಾರ್ ಅವರಿಗೆ ಬೀಳ್ಕೊಡುಗೆ*

ಜುಲೈ 13, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ, ಜು.12 NEWS DESK  : ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಪರಿಸರ ಪ್ರೇಮಿಯೂ ಆದ ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ‌ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರಿಗೆ ಶಾಲೆಯಲ್ಲಿ ಎಸ್.ಡಿ.ಎಂ.ಸಿ., ಶಾಲಾ ಶಿಕ್ಷಕ ವೃಂದ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರೇಮಕುಮಾರ್ ಅವರನ್ನು
ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. “ಪರಿಸರಕ್ಕಾಗಿ ನಾವು”- ಮಕ್ಕಳ ಪರಿಸರ ಸಂಭ್ರಮ: 2026 ದೊಂದಿಗೆ ಏರ್ಪಡಿಸಿದ್ದ
ಅಭಿನಂದನಾ ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿ ವೃಂದ, ವಿವಿಧ ಶಾಲಾ- ಕಾಲೇಜುಗಳು, ವಿವಿಧ ಸಂಘ- ಸಂಸ್ಥೆಗಳು ಸೇರಿದಂತೆ ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿ , ಗ್ರಾಮಸ್ಥರು ಹಾಗೂ ನಾಗರಿಕರು ಜತೆಗೂಡಿ ಟಿ.ಜಿ.ಪ್ರೇಮಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಸೇವಾ ನಿವೃತ್ತಿ ಹೊಂದಿದ‌ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮ ಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ‌ ಮಾತನಾಡಿ, ತಮ್ಮ ಶೈಕ್ಷಣಿಕ, ವಿಜ್ಞಾನ ಹಾಗೂ ಪರಿಸರ ಚಟುವಟಿಕೆಗಳ ಮೂಲಕ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಟಿ.ಜಿ.ಪ್ರೇಮಕುಮಾರ್ ಅವರು ತಮ್ಮ ಪರಿಸರ ಕಾಳಜಿಯೊಂದಿಗೆ ಅವರ ಮುಂದಿನ ಜೀವನ ಸುಖ,ಸಂವೃದ್ಧಿ, ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಪರಿಸರ ಸಂಘಟಕರಾದ ಟಿ.ಜಿ.ಪ್ರೇಮಕುಮಾರ್ ಅವರು ನಿವೃತ್ತಿ ನಂತರವೂ ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ. ಅವರ ಇಂತಹ ಪರಿಸರ ಮತ್ತಿತರ ಸಾಮಾಜಿಕ ಕಾರ್ಯಕ್ಕೆ ತಾವು ಕೈಜೋಡಿಸುವುದಾಗಿ ತಿಳಿಸಿದರು. ಜೀವನದುದ್ದಕ್ಕೂ ಹಸಿರನ್ನೇ ಉಸಿರಾಗಿಸಿಕೊಂಡು ಸದಾ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ
ಟಿ.ಜಿ.ಪ್ರೇಮಕುಮಾರ್ ಅವರಲ್ಲಿರುವ ಪರಿಸರ ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು
ಎಂದರು. ಈ ಪ್ರೌಢಶಾಲೆಗೆ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸುವಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಶ್ರಮ ಶ್ಲಾಘನೀಯ ವಾದುದು. ಪೋಷಕರು ತಮ್ಮ ಮಕ್ಕಳನ್ನು ಇಂತಹ ಸರ್ಕಾರಿ ಶಾಲೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಡಾ ಮಂತರ್ ಗೌಡ ಹೇಳಿದರು. ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಶಾಲೆಯ ಶೈಕ್ಷಣಿಕ ಕಾರ್ಯದೊಂದಿಗೆ ಮಕ್ಕಳು ಮತ್ತು ಸಮುದಾಯದಲ್ಲಿ ಸದಾ ಪರಿಸರ ಮತ್ತು ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮುಖ್ಯ ಶಿಕ್ಷಕ ಪ್ರೇಮಕುಮಾರ್ ಅವರ
ಪರಿಸರ ಕಾಳಜಿ ಶ್ಲಾಘನೀಯವಾದುದು. ವಿದ್ಯಾರ್ಥಿಗಳು ಕೂಡ ಪ್ರೇಮಕುಮಾರ್ ಅವರ ಮಾದರಿಯಲ್ಲಿ ಶಿಕ್ಷಣದ ಜತೆಗೆ ತಮ್ಮನ್ನು ಪರಿಸರದ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಅಭಿನಂದನಾ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ಪಿ.ರಮೇಶ್,
ಶಾಲಾ ಶೈಕ್ಷಣಿಕ ಪ್ರಗತಿ, ಶಾಲಾಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳು ಹಾಗೂ ಜನ ಸಮುದಾಯದಲ್ಲಿ ವಿಜ್ಞಾನದಲ್ಲಿ ಆಸಕ್ತಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಟಿ.ಜಿ.ಪ್ರೇಮಕುಮಾರ್, ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ
ಜನ ಜಾಗೃತಿ ಮೂಡಿಸುತ್ತಿರುವುದು ಮಾದರಿಯಾದುದು ಎಂದು ಶ್ಲಾಘಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಟಿ.ಜಿ.ಪ್ರೇಮಕುಮಾರ್ ಅವರು ಶೈಕ್ಷಣಿಕ ಮತ್ತು ಪರಿಸರ ಚಟುವಟಿಕೆಗಳಿಗೆ ತೊಡಗಿಸಿಕೊಂಡಂತೆ ಮುಂದಿನ ದಿನಗಳಲ್ಲಿ ಸಾಹಿತ್ಯ- ಸಂಸ್ಕೃತಿ ಬೆಳವಣಿಗೆಗೂ ಹೆಚ್ಚಿನ ಆದ್ಯತೆ ನೀಡಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತಗೊಂಡ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ನಮ್ಮ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ‌ ಅಭಿವೃದ್ಧಿಗೆ ಶ್ರಮಿಸಿದ ಎಸ್.ಡಿ.ಎಂ.ಸಿ., ಶಿಕ್ಷಕರು ಪೋಷಕರು ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಣವೇ ಶಕ್ತಿ,ವಿಜ್ಞಾನವೇ ಸತ್ಯ, ಪರಿಸರವೇ ನಮ್ಮ ಉಸಿರು. ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕೂಡಿಗೆ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಮಾತನಾಡಿ, ಪ್ರೇಮಕುಮಾರ್ ಅವರು ಶಿಕ್ಷಣ ಇಲಾಖೆಯ ಮೂಲಕ ಶಿಕ್ಷಣ, ವಿಜ್ಞಾನ, ಪರಿಸರ ಕುರಿತಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ ಎಂದರು. ಜಿಲ್ಲಾ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮಾಥ್ಯೂ , ಪರಿಸರ ಪ್ರೇಮಿಯಾದ ಟಿ.ಜಿ.ಪ್ರೇಮಕುಮಾರ್ ಅವರ ಪರಿಸರ ಕಾಳಜಿಯು ಅನನ್ಯವಾದುದು ಎಂದು‌ ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಡಾ ಜೆ.ಸೋಮಣ್ಣ, ವೃತ್ತಿಯ ಜತೆಗೆ ಸಮಾಜದ ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟಿ.ಜಿ.ಪ್ರೇಮಕುಮಾರ್ ಅವರ ಸೇವಾ ಕಾರ್ಯ ಅನನ್ಯವಾದುದು ಎಂದರು. ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಪ್ರವಾಸೋದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್, ಸರ್ಕಾರಿ ಎಂಜಿನಿಯರ್ ಕಾಲೇಜಿನ‌ ಪ್ರಾಂಶುಪಾಲ ಡಾ ಪರಶಿವಮೂರ್ತಿ, ಪ್ರಾಧ್ಯಾಪಕ ಡಾ ಸೀನಪ್ಪ, ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾದ ಎಂ.ಕೆ.ನಾಗರಾಜ್, ಆರ್.ಜಿ.ಮಹಾದೇವಸ್ವಾಮಿ, ಎನ್. ಮಹಾದೇವಪ್ಪ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜೆ.ಕುಮಾರ್, ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್,
ಶುಭ ಕೋರಿದರು. ಎಸ್ ಡಿ ಎಂ.ಸಿ ಸದಸ್ಯೆ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಗ್ರಂಥ ಸಮಿತಿಯ ಪ್ರಮುಖರಾದ ಸಾಹಿತಿ ಡಾ ಜೆ.ಸೋಮಣ್ಣ, ಪ್ರಮುಖರಾದ ಇ.ಸುಲೇಮಾನ್, ಮೆ.ನಾ.ವೆಂಕಟನಾಯಕ್, ಟಿ.ಬಿ.ಮಂಜುನಾಥ್, ಕೆ.ವಿ.ಉಮೇಶ್, ಕುಶಾಲನಗರ‌ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್.ಪವನ್ ಕುಮಾರ್, ರಂಗಭೂಮಿ ಕಲಾವಿದ ಭರಮಣ್ಣ ಟಿ.ಬೆಟಗೇರಿ, ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್
ದೇವರಗುಂಡ ಸೋಮಪ್ಪ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್ , ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಶಿಕ್ಷಕಿ ಟಿ.ವಿ.ಶೈಲಾ, ನಿವೃತ್ತ ಉಪನ್ಯಾಸಕರಾದ ಎಚ್.ಎಚ್.ಸುಂದರ್, ಎಚ್.ಎಸ್.ಗುರುಸ್ವಾಮಿ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಮುಖರಾದ ಎಚ್.ಆರ್.ಮುತ್ತಪ್ಪ, ಟಿ.ಎಂ.ಮುದ್ದಯ್ಯ, ಕೆ.ಯು.ರಂಜಿತ್, ಸಿ.ಎಂ.ಸುಲೋಚನಾ, ಯು.ಸಿ.ದಮಯಂತಿ, ಜಿಲ್ಲಾ ಕಸಾಪ ಕಾರ್ಯದರ್ಶಿ ರೇವತಿ ರಮೇಶ್, ಗ್ರಾಮದ ಮುಖಂಡರಾದ ಕೆ.ಎಸ್.ರಾಜಾಚಾರಿ, ಜವರೇಗೌಡ, ವಿಜ್ಞಾನ ಸಂವಹನಕಾರ ಜಿ.ಶ್ರೀನಾಥ್, ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಎಚ್.ಜೆ.ನಾಗರಾಜ್, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಈರಪ್ಪ, ಎಸ್.ಎನ್.ಪುಟ್ಟಸ್ವಾಮಿ,ಎ.ಎಂ. ಜವರಯ್ಯ, ಈರಪ್ಪ,
ಸಹಕಾರಿಗಳಾದ ಕೆ.ಎಸ್.ಕೃಷ್ಣೇಗೌಡ, ಟಿ.ಬಿ.ಜಗದೀಶ್, ಟಿ.ಕೆ.ಪಾಂಡುರಂಗ, ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು , ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು,
ನಾಗರಿಕರು ಇದ್ದರು. ಶಿಕ್ಷಕ ಮೆ.ನಾ.ವೆಂಕಟನಾಯಕ್ ನಿರ್ವಹಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026

*VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಗುಂಡಿಕೆರೆ, NEWS DESK ಆ.27: ಜುಲೈ 25, 26 ರಂದು ಗುಂಡಿಕೆರೆಯಲ್ಲಿ ನಡೆದ SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಸೀನಿಯರ್…

*VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*

ಆಗಷ್ಟ್ 27, 2026

*ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*

ಆಗಷ್ಟ್ 27, 2026

*ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*

ಆಗಷ್ಟ್ 27, 2026

*ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*

ಆಗಷ್ಟ್ 27, 2026

*ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*

ಆಗಷ್ಟ್ 27, 2026

*ಕಸ್ತೂರಿರಂಗನ್ ವರದಿ ಸಂವಾದ : ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್ ಅಭಯ*

ಆಗಷ್ಟ್ 27, 2026

*ಈದ್ ಮಿಲಾದ್ ಪ್ರೀತಿ, ಶಾಂತಿ, ಸಹೋದರತ್ವದ ಸಂದೇಶ ಸಾರುವ ಪವಿತ್ರ ದಿನ ಶಾಸಕ ಮಂತರ್‌ಗೌಡ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.