
ಮಡಿಕೇರಿ ಜು.13 NEWS DESK : ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ಎ.ವಿ.ಶಾಲೆಯಿಂದ ಅಭಿಫಾಲ್ಸ್ ಗೆ ಹಾಗೂ ಭಗವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿರುವುದರಿಂದ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಲಘು ವಾಹನಗಳಿಗೆ ಪರ್ಯಾಯ ರಸ್ತೆ ಇದ್ದು ಭಾರಿ ವಾಹನಗಳಿಗೆ ಪರ್ಯಾಯ ರಸ್ತೆ ಇರುವುದಿಲ್ಲ. ಆದ್ದರಿಂದ ಜುಲೈ, 14 ರಿಂದ ಆಗಸ್ಟ್, 05 ರವರೆಗೆ ಈ ರಸ್ತೆಯ ಕಾಮಗಾರಿ ನಡೆಯಬೇಕಾಗಿರುವುದರಿಂದ ವಾಹನ ಚಾಲಕರು ಕಾಮಗಾರಿ ನಡೆಸಲು ಸಹಕರಿಸುವಂತೆ ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಕೋರಿದ್ದಾರೆ.








