
ಮಡಿಕೇರಿ NEWS DESK ಜು.14 : ಯುನೈಟೆಡ್ ಕೊಡವ ಆರ್ಗನೈಸೇಷನ್ ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು. ಪೊನ್ನಣ್ಣಗೆ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಿದ ಪ್ರಮುಖರು ಸುದೀರ್ಘ ಚರ್ಚೆ ನಡೆಸಿದರು. ಈ ಸಂದರ್ಭ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಪೊನ್ನಣ್ಣ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಯುವ ಮುಖಂಡರಾಗಿದ್ದಾರೆ. ನಾನು ಅವರ ಮೇಲೆ ಭರವಸೆಯನ್ನಿಟ್ಟು ಟಿಕೆಟ್ ನೀಡಿದ್ದೆ, ಅವರು ಬಂದ ನಂತರ ಕನಿಷ್ಠ ಕೊಡಗಿನಲ್ಲಿ ವಾರಕ್ಕೆ ಎರಡು ದಿನ ಇರಲೇಬೇಕೆಂದಿದ್ದೆ. ಆದರೆ ಅವರು ಗರಿಷ್ಠ ಸಮಯವನ್ನು ಕೊಡಗಿಗೆ ಮೀಸಲಿಡುವುದರ ಮೂಲಕ ನಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಎಂದರು. ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಒಲವಿದೆ, ಮುಂದೇನಾಗುತ್ತದೋ ನೋಡುವಾ, ಅವರು ಮಂತ್ರಿಯಾದರೆ ನಿಮ್ಮಷ್ಟೇ ನನಗೂ ಸಂತೋಷವಾಗುತ್ತದೆ ಎಂದು ಹೇಳಿದರು. ನಿಯೋಗದಲ್ಲಿ ಅಪ್ಪಾರಂಡ ವೇಣು ಪೊನ್ನಪ್ಪ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ, ಮಚ್ಚಾಮಾಡ ರಮೇಶ್, ತೀತಿಮಾಡ ಬೊಸ್ ಅಯ್ಯಪ್ಪ, ಬಾದುಮಂಡ ವಿಷ್ಣು ಕಾರ್ಯಪ್ಪ, ಕೊಟ್ಟಂಗಡ ಮೊಣ್ಣಪ್ಪ, ಮಲ್ಲಮಾಡ ದೇವಯ್ಯ, ಅರೆಯಡ ಲೋಕೇಶ್, ಕಳ್ಳಿಚಂಡ ದೀನ ಉತ್ತಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಕುಂಜಿಲAಡ ಗ್ರೇಸಿ ಪೂಣಚ್ಚ, ಪಾಂಡoಡ ಸ್ವಾತಿ ಗಣಪತಿ, ಕಳ್ಳಿಚಂಡ ತನ್ವಿ ಉತ್ತಪ್ಪ, ಬಿದ್ದಂಡ ಜ್ಯೋತಿ ನವೀನ್ ಹಾಜರಿದ್ದರು.









