Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*
  • *ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*
  • *ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*
  • *ಶ್ರೀ ಕೋಟೆ ಮಹಾಗಣಪತಿ ದಸರಾ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಗಮನ ಸೆಳೆದ ಬೃಹತ್ ವಾಹನ ಜಾಥಾ; ಕಂಗೊಳಿಸುತ್ತಿರುವ ವಿದ್ಯುತ್ ದೀಪಾಲಂಕಾರಮಂಟಪ ಸಮಿತಿಯ ಸುವರ್ಣ ಮಹೋತ್ಸವ : ಗಮನ ಸೆಳೆದ ಬೃಹತ್ ವಾಹನ ಜಾಥಾ : ಕಂಗೊಳಿಸುತ್ತಿರುವ ವಿದ್ಯುತ್ ದೀಪದ ಅಲಂಕಾರ*
  • *ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಗೆ ಡಾ. ಜೆ.ಜಿ.ಮಂಜುನಾಥ*
  • *ಆನೆಕಾಡು ಹೆದ್ದಾರಿ ಅಪಘಾತ ವಲಯಗಳ ಕುರಿತು ತುರ್ತು ಸಭೆ*
  • *ವಿರಾಜಪೇಟೆ : ವಿಕಸನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಅಗತ್ಯ : ಗಣ್ಯರ ಕರೆ*
  • *ವಿರಾಜಪೇಟೆ : ಕೊಡಗು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಮಾಜದ ಅಭಿವೃದ್ಧಿಗೆ ಹಂತ ಹಂತವಾಗಿ ಯೋಜನೆ*
  • *ಮೂರ್ನಾಡಿನಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*
  • *ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ*

ಸೆಪ್ಟೆಂಬರ್ 12, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ, NEWS DESK ಸೆ. 12: ಮಹಾರಾಷ್ಟ್ರದ ಕೊಲ್ಹಾಪುರದ ಸಂಜೀವನ್ ಶಾಲೆಯಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕಿಯರ ಹಾಗೂ ಬಾಲಕರ ಹಾಕಿ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿವೆ.

ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು, ಇದೇ ತಿಂಗಳು ಪಂಜಾಬ್‌ನ ಅಮೃತಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಕೊಡಗು ವಿದ್ಯಾಲಯದ ಕ್ರೀಡಾ ಕ್ಷೇತ್ರದ ಹೆಮ್ಮೆಯ ಸಾಧನೆಯಾಗಿದೆ.

ಬಾಲಕಿಯರ ತಂಡವು ಲೀಗ್ ಹಂತದಲ್ಲಿ ಡಿಫೆನ್ಸ್ ಕೆರಿಯರ್ ಅಕಾಡೆಮಿ ವಿರುದ್ಧ 18–0 ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್, ಮೈಸೂರು ವಿರುದ್ಧ 6–0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಜನನ ಸ್ವೀಕರ್ ತಂಡವನ್ನು 6–0 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯದಲ್ಲಿ ಆತಿಥೇಯ ಸಂಜೀವನ್ ಶಾಲೆ, ಕೊಲ್ಹಾಪುರ ತಂಡವನ್ನು 4–3 ಗೋಲುಗಳ ಅಂತರದಲ್ಲಿ ರೋಚಕವಾಗಿ ಸೋಲಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಬಾಲಕಿಯರ ತಂಡದ ನಾಯಕಿಯಾಗಿ ಲಕ್ಷ್ಯ ಪೊನ್ನಕ್ಕ ತಂಡವನ್ನು ಮುನ್ನಡೆಸಿದರು.

ಬಾಲಕರ ತಂಡವೂ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಗಳಿಸಿತು.

ಲೀಗ್ ಹಂತದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್, ಎಲೆಕ್ಟ್ರಾನಿಕ್ ಸಿಟಿ ವಿರುದ್ಧ 6–0 ಹಾಗೂ ಎಸ್.ಬಿ. ಪಾಟೀಲ್, ರಾವೆಟ್, ಪುಣೆ ತಂಡದ ವಿರುದ್ಧ 2–0 ಅಂತರದಲ್ಲಿ ಜಯ ಸಾಧಿಸಿತು. ಸೆಮಿಫೈನಲ್‌ನಲ್ಲಿ ಸಂಜಯ್ ಘೋಡಾವತ್ ತಂಡವನ್ನು 3–0 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯದಲ್ಲಿ ಸಂಜೀವನ್ ಶಾಲೆ, ಕೊಲ್ಹಾಪುರ ತಂಡದ ವಿರುದ್ಧ 2–0 ಅಂತರದಲ್ಲಿ ಸೋಲು ಅನುಭವಿಸಿ ದ್ವಿತೀಯ ಸ್ಥಾನ ಗಳಿಸಿತು.

ಬಾಲಕರ ತಂಡದ ನಾಯಕನಾಗಿ ತನಿಷ್ ಎನ್.ಜಿ. ತಂಡವನ್ನು ಮುನ್ನಡೆಸಿದರು.

ಈ ಎರಡೂ ತಂಡಗಳ ಯಶಸ್ಸಿನಲ್ಲಿ ಹಾಕಿ ಕೋಚ್‌ಗಳಾದ ದೀನಾ ಎಚ್.ಡಿ. ಹಾಗೂ ಪಾರ್ವತಿ ಕೆ.ಎ. ಅವರ ತರಬೇತಿ ಹಾಗೂ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.

ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ, ನಿರಂತರ ಅಭ್ಯಾಸದ ಮೂಲಕ ಅವರ ಆಟದ ಕೌಶಲ್ಯವನ್ನು ಬೆಳೆಸಿದ ಕೋಚ್‌ಗಳ ಮಾರ್ಗದರ್ಶನದಿಂದ ತಂಡಗಳು ಆತ್ಮವಿಶ್ವಾಸದಿಂದ ಪಂದ್ಯಗಳನ್ನು ಎದುರಿಸಿ ಈ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಯಿತು.

ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ ಈ ಸಾಧನೆಯು ಅವರ ಪ್ರತಿಭೆ, ಕಠಿಣ ಪರಿಶ್ರಮ, ತಂಡಸ್ಫೂರ್ತಿ ಹಾಗೂ ಕೋಚ್‌ಗಳ ಸಮರ್ಪಣೆಗೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ಬಾಲಕಿಯರ ತಂಡಕ್ಕೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ ಹಾಗೂ ಆಡಳಿತ ಮುಖ್ಯಸ್ಥರಾದ ರವಿ ಪಿ. ಅಭಿನಂದನೆ ಸಲ್ಲಿಸಿ, ಅಮೃತಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*

ಅಕ್ಟೋಬರ್ 7, 2026

*ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*

ಅಕ್ಟೋಬರ್ 7, 2026

*ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*

ಅಕ್ಟೋಬರ್ 7, 2026

*ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*

ಅಕ್ಟೋಬರ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.7 NEWS DESK : 66/11ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಮತ್ತು ಎಫ್5…

*ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*

ಅಕ್ಟೋಬರ್ 7, 2026

*ಶ್ರೀ ಕೋಟೆ ಮಹಾಗಣಪತಿ ದಸರಾ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಗಮನ ಸೆಳೆದ ಬೃಹತ್ ವಾಹನ ಜಾಥಾ; ಕಂಗೊಳಿಸುತ್ತಿರುವ ವಿದ್ಯುತ್ ದೀಪಾಲಂಕಾರಮಂಟಪ ಸಮಿತಿಯ ಸುವರ್ಣ ಮಹೋತ್ಸವ : ಗಮನ ಸೆಳೆದ ಬೃಹತ್ ವಾಹನ ಜಾಥಾ : ಕಂಗೊಳಿಸುತ್ತಿರುವ ವಿದ್ಯುತ್ ದೀಪದ ಅಲಂಕಾರ*

ಅಕ್ಟೋಬರ್ 7, 2026

*ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಗೆ ಡಾ. ಜೆ.ಜಿ.ಮಂಜುನಾಥ*

ಅಕ್ಟೋಬರ್ 7, 2026

*ಆನೆಕಾಡು ಹೆದ್ದಾರಿ ಅಪಘಾತ ವಲಯಗಳ ಕುರಿತು ತುರ್ತು ಸಭೆ*

ಅಕ್ಟೋಬರ್ 7, 2026

*ವಿರಾಜಪೇಟೆ : ವಿಕಸನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಅಗತ್ಯ : ಗಣ್ಯರ ಕರೆ*

ಅಕ್ಟೋಬರ್ 7, 2026

*ವಿರಾಜಪೇಟೆ : ಕೊಡಗು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಮಾಜದ ಅಭಿವೃದ್ಧಿಗೆ ಹಂತ ಹಂತವಾಗಿ ಯೋಜನೆ*

ಅಕ್ಟೋಬರ್ 7, 2026

*ಮೂರ್ನಾಡಿನಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*

ಅಕ್ಟೋಬರ್ 7, 2026

*ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*

ಅಕ್ಟೋಬರ್ 7, 2026

*ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ವಿದ್ಯಾರ್ಥಿಗಳ ಆಲೋಚನೆಗಳಿಗೆ ಶಕ್ತಿ: ಪ್ರೊ. ಸುರೇಶ್ ಎಂ.*

ಅಕ್ಟೋಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.