


ಮಡಿಕೇರಿ, NEWS DESK ಅ.6: ಕೊಡಗು ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ವಿಭಾಗ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕೊಡಗು ವಿಶ್ವವಿದ್ಯಾಲಯ ಅಂತರ ಕಾಲೇಜು ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮಹಿಳಾ ಬ್ಯಾಡ್ಮಿಂಟನ್ ತಂಡ ಹಾಗೂ ಪುರುಷರ ಟೇಬಲ್ ಟೆನ್ನಿಸ್ ತಂಡಗಳು ದ್ವಿತೀಯ ಸ್ಥಾನ ಪಡೆದುಕೊಂಡಿವೆ. ಮಹಿಳೆಯರ ಬ್ಯಾಡ್ಮಿಂಟನ್ ತಂಡದಲ್ಲಿ ತೃತೀಯ ಬಿ.ಎ.ಯ ಗಾನಶ್ರೀ, ದ್ವಿತೀಯ ಬಿಬಿಎಯ ರಕ್ಷಿತ ಪೊನ್ನಮ್ಮ, ದ್ವಿತೀಯ ಬಿ.ಕಾಂನ ಸಾವಿತ್ರಿ ಎಂ.ಪಿ. ಹಾಗೂ ದ್ವಿತೀಯ ಬಿಬಿಎಯ ಫಾತಿಮತುಲ್ ಜೋರಾ ಪಾಲ್ಗೊಂಡಿದ್ದರು. ಪುರುಷರ ಟೇಬಲ್ ಟೆನ್ನಿಸ್ ತಂಡದಲ್ಲಿ ದ್ವಿತೀಯ ಬಿ.ಕಾಂನ ಪ್ರತೀನ್, ದ್ವಿತೀಯ ಬಿಬಿಎಯ ಪ್ರೀತಮ್, ಪ್ರಥಮ ಬಿ.ಕಾಂನ ಆದಿಬ್ ವಾಸಿಮ್ ಹಾಗೂ ಪ್ರಥಮ ಬಿಸಿಎಯ ಹೇಮಂತ್ ಭಾಗವಹಿಸಿದ್ದರು. ವಿಜೇತ ಆಟಗಾರರನ್ನು ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ., ಕ್ರೀಡಾ ವಿಭಾಗದ ಸಂಯೋಜಕರಾದ ಡಾ. ತಳವಾರ್ ಬಿ.ಎಚ್. ಹಾಗೂ ದೈಹಿಕ ಶಿಕ್ಷಣ ವಿಭಾಗದ ಪಿ.ಸಿ. ರಮೇಶ ಸೇರಿದಂತೆ ಇತರರು ಅಭಿನಂದಿಸಿದರು.









