Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»32ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕೋಟೆ ಬೆಟ್ಟ’ ಆಯ್ಕೆ; ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ–ಯಶೋಧ ಪ್ರಕಾಶ್ ದಂಪತಿಗೆ ಮತ್ತೊಂದು ಹೆಗ್ಗಳಿಕೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

32ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕೋಟೆ ಬೆಟ್ಟ’ ಆಯ್ಕೆ; ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ–ಯಶೋಧ ಪ್ರಕಾಶ್ ದಂಪತಿಗೆ ಮತ್ತೊಂದು ಹೆಗ್ಗಳಿಕೆ

ನವೆಂಬರ್ 19, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ನ.19: ಸ್ವಸ್ತಿಕ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ ‘ಕೋಟೆ ಬೆಟ್ಟ’ 32ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಡಿ.16ರಿಂದ 23ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ಈ ಪ್ರತಿಷ್ಠಿತ ಉತ್ಸವವನ್ನು ಆಯೋಜಿಸುತ್ತಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮಾನ್ಯತೆ ಪಡೆದ ಚಿತ್ರಗಳ ರಾಷ್ಟ್ರೀಯ ವಿಭಾಗದಲ್ಲಿ ಕೊಡವ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ.

ಕೋಲ್ಕತ್ತಾದ ನಂದನ್ ಅಕಾಡೆಮಿ ಚಿತ್ರಮಂದಿರದಲ್ಲಿ ‘ಕೋಟೆ ಬೆಟ್ಟ’ ಚಿತ್ರ ಎರಡು ಪ್ರದರ್ಶನಗಳನ್ನು ಕಾಣಲಿದೆ. 2016ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಾಗೂ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮತ್ತು ಯಶೋಧ ಪ್ರಕಾಶ್ ದಂಪತಿಗೆ ಈ ಆಯ್ಕೆ ಮತ್ತೊಂದು ಮಹತ್ವದ ಹೆಗ್ಗಳಿಕೆಯಾಗಿದೆ.

‘ಕೋಟೆ ಬೆಟ್ಟ’ ಚಿತ್ರವು ಕಾಲೂರು, ಕೋಟೆ ಬೆಟ್ಟ, ಶಿರಂಗಳ್ಳಿ, ಮಾದಾಪುರ, ಗರ್ವಾಲೆ, ಮೈಸೂರು ಮತ್ತು ಮಡಿಕೇರಿಯ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿದೆ. ಮಕ್ಕಳ ಮನಸ್ಸಿನ ಭಾವನೆಗಳು ಹಾಗೂ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರದಲ್ಲಿ ಕೊಡಗಿನ ನಿಸರ್ಗ ಸೌಂದರ್ಯ ಮತ್ತು ಕೊಡವ ಸಂಸ್ಕೃತಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಚಿತ್ರದಲ್ಲಿ ಸಹ ನಿರ್ಮಾಪಕರಾಗಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಸೇರಿದಂತೆ ಅಪ್ಪಂಡೆರಂಡ ತೇಜು ಪೊನ್ನಪ್ಪ, ತಾಂತಂಡ ಪ್ರಭಾ ನಾಣಯ್ಯ, ಕೋಳುಮಾಡಂಡ ಸತೀಶ್ ನಾಣಯ್ಯ, ಮಂದೆಯಂಡ ರಜಿ ಬೆಳ್ಯಪ್ಪ, ಕಾಡ್ಯಮಾಡ ಸುಮನ್, ಕಾಳಮಂಡ ಜಗತ್, ತಂಬುಕುತ್ತೀರ ಗಪ್ಪು ಸೋಮಯ್ಯ, ಬುಟ್ಟಂಡ ಕಶ್ಮಾ ಅಯ್ಯಣ್ಣ, ಮಂಡೀರ ಪದ್ಮ ಬೋಪಯ್ಯ, ಮಂಜುಳ ಮೈಸೂರು, ಈರಮಂಡ ವಿಜಯ್ ಉತ್ತಯ್ಯ, ಹರಿಣಿ ವಿಜಯ್, ಬಿ.ಜಿ. ಅನಂತಶಯನ, ಸ್ಮಿತ ಉಡುವೇರ, ನಾಪಂಡ ಅರುಣ್ ದೇವಯ್ಯ, ನಾಪಂಡ ಚಿಣ್ಣಪ್ಪ, ವಿದಿತ್ ಪಾಸುರ, ಉಡುವೇರ ಶಿವ, ಮೌನಿ ಬೋಪಯ್ಯ, ಮಂದೆಯಂಡ ಭೀಮಣಿ, ಮಂದೆಯಂಡ ರಾಯ್, ಮಂದೆಯಂಡ ಮಣಿ, ಮೋರ್ಕಂಡ ತಿಮ್ಮಯ್ಯ ಹಾಗೂ ಉಡುವೇರ ಭೀಮಯ್ಯ ಅಭಿನಯಿಸಿದ್ದಾರೆ.

ಮುಖ್ಯ ಬಾಲನಟರಾಗಿ ಕೊಟ್ಟುಕತ್ತಿರ ತೇಜಲ್ ಕಾರ್ಯಪ್ಪ, ಕೊಟ್ಟುಕತ್ತಿರ ತನಂ ಕಾರ್ಯಪ್ಪ, ಹೊಟ್ಟೆಯಂಡ ಆಚಲ್ ಅಪ್ಪಚ್ಚು, ಉಡುವೇರ ಶಾನ್ ಬೋಜಮ್ಮ, ಮಂದೆಯಂಡ ಟಿಮ್ಸ್ , ಉಡುವೇರ ಸಾತ್ವಿಕ್ ಗಣಪತಿ, ಮಂದೆಯಂಡ ಧನುಷ್ ಕಾರ್ಯಪ್ಪ, ತಂಬುಕುತ್ತೀರ ಪೊನ್ನಮ್ಮ, ಮುದ್ದಿಯಡ ತಕ್ಷಿಲ್ ತಂಗಮ್ಮ, ಮಂದೆಯಂಡ ಮನಿಷ್, ಮಾನ್ಯ, ಧನುಷ್, ರಾಜಿ, ಶ್ರೀನಿಧಿ ಹಾಗೂ ಚೆರಿಯಪಂಡ ಪರೀಕ್ಷಿತ್ ಪೆಮ್ಮಯ್ಯ ಮತ್ತು ಮೂಕಚಂಡ ನಕ್ಷ ನೀಲಮ್ಮ ಅಭಿನಯಿಸಿದ್ದಾರೆ.

ಪ್ರದೀಪ್ ಆರ್ಯನ್, ಸಂತೋಷ್ ಬಪ್ಪು ಮತ್ತು ವಿಜಯ್ ಬರ್ಮಾಲಿ ಛಾಯಾಗ್ರಹಣ ನಿರ್ವಹಿಸಿದ್ದು, ವಿಠಲ್ ರಂಗದೋಳ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಟಿ. ಮುತ್ತುರಾಜ್ ಸಂಕಲನ, ಸ್ಯಾಮ್ಸನ್ ವಿಎಫ್‌ಎಕ್ಸ್, ಗಾರ್ಗಿ ಕಾರೆಹಕ್ಲು ಚಿತ್ರಕಥೆ ಹಾಗೂ ಮುಕ್ಕಾಟಿರ ಮೌನಿ ನಾಣಯ್ಯ ಹಾಡುಗಳನ್ನು ರಚಿಸಿದ್ದಾರೆ. ಬಯೋವಂಡ ಬೀನು ಸಚಿನ್ ಮತ್ತು ಕೊಟ್ಟುಕತ್ತಿರ ಪ್ರತೀಶ್ ಅಯ್ಯಪ್ಪ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕೋಳುಮಾಡಂಡ ನಾಣಯ್ಯ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ.

ಚಿತ್ರರಂಗದಲ್ಲಿ ಖ್ಯಾತಿ

ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮತ್ತು ಯಶೋಧ ಪ್ರಕಾಶ್ ಅವರು ಕೊಡವ ಹಾಗೂ ಕನ್ನಡ ಚಿತ್ರರಂಗದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಗಳಿಸಿರುವ ಕೊಡಗಿನ ಹೆಸರಾಂತ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ದಂಪತಿಯಾಗಿದ್ದಾರೆ.

ಇವರ ನಿರ್ಮಾಣದಲ್ಲಿ ಮೂಡಿಬಂದ ಹಾಗೂ ಯಶೋಧ ಪ್ರಕಾಶ್ ನಿರ್ದೇಶಿಸಿರುವ ಕನ್ನಡ ಚಲನಚಿತ್ರ ‘ಕಂದೀಲು’ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿರುವ ಈ ದಂಪತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮೊದಲ ಕೊಡವ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ‘ನಾಡ ಪೆದ ಆಶಾ’ ಕೊಡವ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿಗಳು ಲಭಿಸಿವೆ.

ಸಾಮಾಜಿಕ ಕಳಕಳಿಯುಳ್ಳ ಹಾಗೂ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ 23ಕ್ಕೂ ಹೆಚ್ಚು ಕನ್ನಡ ಮತ್ತು ಕೊಡವ ಚಲನಚಿತ್ರಗಳು ಹಾಗೂ ಕೊಡವ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಈ ದಂಪತಿ ಕೊಡಗಿನ ಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

32ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕೋಟೆ ಬೆಟ್ಟ’ ಆಯ್ಕೆ; ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ–ಯಶೋಧ ಪ್ರಕಾಶ್ ದಂಪತಿಗೆ ಮತ್ತೊಂದು ಹೆಗ್ಗಳಿಕೆ

ನವೆಂಬರ್ 19, 2026

ವಿರಾಜಪೇಟೆ ವಿದ್ಯಾರ್ಥಿಗಳಿಂದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಸಾಧನೆ: 6ನೇ ಮೈಸೂರು ಕಪ್‌ನಲ್ಲಿ ಹಲವು ಪ್ರಶಸ್ತಿಗಳ ಗರಿ

ನವೆಂಬರ್ 19, 2026

ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜನ್ಮದಿನಾಚರಣೆ: ಸಾಧಕ ಮಹಿಳೆಯರಿಗೆ ಸನ್ಮಾನ

ನವೆಂಬರ್ 19, 2026

ವಿರಾಜಪೇಟೆ ವಿದ್ಯಾರ್ಥಿಗಳಿಂದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಸಾಧನೆ: 6ನೇ ಮೈಸೂರು ಕಪ್‌ನಲ್ಲಿ ಹಲವು ಪ್ರಶಸ್ತಿಗಳ ಗರಿ

ನವೆಂಬರ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ NEWS DESK ನ.19: ಮೈಸೂರಿನ ನಜರ್‌ಬಾದ್‌ನ ಚಾಮುಂಡಿ ವಿಹಾರ ಸ್ಟೇಡಿಯಂನ ಒಳಾಂಗಣ ಕ್ರೀಡಾಂಗಣದಲ್ಲಿ ವಿ.ಎನ್. ಯೋಧಾ ಮಾರ್ಷಲ್ ಆರ್ಟ್ಸ್…

ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜನ್ಮದಿನಾಚರಣೆ: ಸಾಧಕ ಮಹಿಳೆಯರಿಗೆ ಸನ್ಮಾನ

ನವೆಂಬರ್ 19, 2026

ಚಿಕ್ಕಪೇಟೆಯಿಂದ ಬೋಯಿಕೇರಿವರೆಗಿನ ರಸ್ತೆ ಮರು ಡಾಂಬರೀಕರಣಕ್ಕೆ ಆಗ್ರಹ

ನವೆಂಬರ್ 19, 2026

ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿಯ 250ನೇ ವಿಶೇಷ ಕಾರ್ಯಕ್ರಮಕ್ಕೆ ಸಿದ್ಧತೆ

ನವೆಂಬರ್ 19, 2026

ಕೊಡವ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿಶೇಷ, ವಿಶಿಷ್ಟ ಸ್ಥಾನ: ಮಹೇಶ್ ನಾಚಯ್ಯ; ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ದುಡಿ, ತಾಳ ಸೇರಿದಂತೆ ಹಲವು ಪರಿಕರಗಳ ವಿತರಣೆ

ನವೆಂಬರ್ 19, 2026

ರಾಷ್ಟ್ರೀಯ ಐಕ್ಯತಾ ದಿನ: ಮಡಿಕೇರಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ನವೆಂಬರ್ 19, 2026

32ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕೋಟೆ ಬೆಟ್ಟ’ ಆಯ್ಕೆ; ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ–ಯಶೋಧ ಪ್ರಕಾಶ್ ದಂಪತಿಗೆ ಮತ್ತೊಂದು ಹೆಗ್ಗಳಿಕೆ

ನವೆಂಬರ್ 19, 2026

ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಕೊಡಗಿನ ಕ್ರೀಡಾಪಟುಗಳ ಅಮೋಘ ಸಾಧನೆ; ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ಗೆ 17 ಕ್ರೀಡಾಪಟುಗಳ ಆಯ್ಕೆ

ನವೆಂಬರ್ 19, 2026

ಕಾವೇರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ನವೆಂಬರ್ 19, 2026

ಸುಂಟಿಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ‘ಬೇಡ ಬ್ರೋ’ ಅಭಿಯಾನ ಮತ್ತು ರಸ್ತೆ ಸುರಕ್ಷತಾ ಜಾಗೃತಿ

ನವೆಂಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.