ಮಡಿಕೇರಿ, NEWS DESK ಅ.15 : ಕೊಡವಲ್ಯಾಂಡ್ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಗುರಿ ಸಾಧಿಸಲು 100 ದಿನಗಳು ಬೇಕಾಗಬಹುದು, 100 ತಿಂಗಳುಗಳು ಬೇಕಾಗಬಹುದು ಅಥವಾ 100 ವರ್ಷಗಳೇ ಕಳೆದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೊಡವ ನ್ಯಾಷನಲ್ ಕೌನ್ಸಿಲ್ ಬ್ಯಾನರ್ ಅಡಿಯಲ್ಲಿ ಕೊಡವರ ಹಕ್ಕುಗಳಿಗಾಗಿ ಶಾಂತಿಯುತವಾಗಿ ಮತ್ತು ಸಂವಿಧಾನಾತ್ಮಕವಾಗಿ ಹೋರಾಡಲು ನಾವು ದೃಢಸಂಕಲ್ಪ ಮಾಡಿದ್ದೇವೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಘೋಷಿಸಿದರು.
ಕಾಂತಮೂನಾಡ್ ನ ಮೂನಾಡ್ ನÀಲ್ಲಿ ಆಯೋಜಿಸಿದ್ದ ಸಿಎನ್ಸಿಯ 6ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಬಹುಸಂಖ್ಯಾತ ಸಮುದಾಯದ ಪ್ರಾಬಲ್ಯದ ನಡುವೆ ತಮ್ಮದೇ ಆದ ವಿಶಿಷ್ಟ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಐತಿಹಾಸಿಕ ಗುರುತನ್ನು ಹೊಂದಿರುವ ಕೊಡವರಂತಹ ದೇಶೀಯ ಸಮುದಾಯಕ್ಕೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಸಹಜವಾದದ್ದು. ಭಾರತೀಯ ಸಂವಿಧಾನ ಹಾಗೂ ಆದಿಮಸಂಜಾತ ಜನರ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಘೋಷಣೆಯ ಆಶಯಗಳಿಗೆ ಅನುಗುಣವಾಗಿ ಕೊಡವರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಪ್ರತಿಪಾದಿಸಿದರು.
ಸಂವಿಧಾನದ 29 ಮತ್ತು 30ನೇ ವಿಧಿಗಳಡಿ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಯ ಮಹತ್ವವನ್ನು ಪ್ರಸ್ತಾಪಿಸಿದ ನಾಚಪ್ಪ, ಸಂವಿಧಾನದ 5ನೇ ಮತ್ತು 6ನೇ ಅನುಸೂಚಿಗಳ ಆಶಯದಂತೆ ಕೊಡವಲ್ಯಾಂಡ್ಗೆ ವಿಶೇಷ ರಕ್ಷಣೆ ಹಾಗೂ ಸ್ವಯಂ ಆಡಳಿತದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಂವಿಧಾನದ 371ನೇ ವಿಧಿಯಡಿ ವಿಶೇಷ ವ್ಯವಸ್ಥೆಗಳ ಅಗತ್ಯವನ್ನೂ ಪ್ರಸ್ತಾಪಿಸಿದರು.
ಕೊಡವರು ಬಹುಸಂಖ್ಯಾತ ಸಮುದಾಯದ ದಯೆಯನ್ನು ಬೇಡುತ್ತಿಲ್ಲ. ತಮ್ಮ ಐತಿಹಾಸಿಕ ಮಾತೃಭೂಮಿ, ವಿಶಿಷ್ಟ ಜನಾಂಗೀಯ ಗುರುತು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಂವಿಧಾನಾತ್ಮಕ ರಕ್ಷಣೆಯನ್ನು ಬಯಸುತ್ತಿದ್ದಾರೆ. ಕೊಡವಲ್ಯಾಂಡ್ ಸ್ವಾಯತ್ತತೆಯ ಬೇಡಿಕೆಯನ್ನು ಯಾವುದೇ ಬೆದರಿಕೆ ಅಥವಾ ಒತ್ತಡದಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.
ಕೊಡವರ ಸಾಂಪ್ರದಾಯಿಕ ಬಂದೂಕು ಸಂಸ್ಕಾರವಾದ ‘ಗನ್-ತೋಕ್’ ಅನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾಗಿ ಪರಿಗಣಿಸಿ, ಸಂವಿಧಾನದ 25 ಮತ್ತು 26ನೇ ವಿಧಿಗಳ ಆಶಯದಡಿ ಅದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
*ಜನಗಣತಿಯಲ್ಲಿ ಪ್ರತ್ಯೇಕ ಗುರುತಿಗೆ ಒತ್ತಾಯ*
1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಗುರುತಿಸಲಾಗಿತ್ತು. ಆದರೆ ನಂತರದ ಅವಧಿಯಲ್ಲಿ ಆ ಪ್ರತ್ಯೇಕ ಗುರುತು ಕಳೆದುಹೋಗಿ, ಇತರ ದೊಡ್ಡ ಸಮುದಾಯಗಳೊಂದಿಗೆ ವಿಲೀನಗೊಂಡ ಪರಿಣಾಮ ಕೊಡವರ ಐತಿಹಾಸಿಕ ಅಸ್ಮಿತೆಗೆ ಹಿನ್ನಡೆಯಾಗಿದೆ ಎಂದು ನಾಚಪ್ಪ ಅಭಿಪ್ರಾಯಪಟ್ಟರು.
2027ರ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಿ, ಅವರ ನೈಜ ಜನಸಂಖ್ಯೆ ಮತ್ತು ವಿಶಿಷ್ಟ ಗುರುತನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.
ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಬೇಕು, ಕೊಡವರನ್ನು ದೇಶೀಯ ಸಮುದಾಯವಾಗಿ ಗುರುತಿಸಬೇಕು ಹಾಗೂ ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಪರಿಶೀಲಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.
*ಜಲಮೂಲಗಳ ರಕ್ಷಣೆಗೆ ಆಗ್ರಹ*
ಕೊಡಗಿನ ಭೂಮಿ, ಕಾಡು, ಜಲಮೂಲಗಳು ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯ ಅಗತ್ಯವನ್ನು ಒತ್ತಿಹೇಳಿದ ನಾಚಪ್ಪ ಅವರು, ವಾಣಿಜ್ಯ ಉದ್ದೇಶಗಳಿಗಾಗಿ ನಡೆಯುತ್ತಿರುವ ಭೂ ಪರಿವರ್ತನೆ, ಬೃಹತ್ ರೆಸಾರ್ಟ್ಗಳು, ಟೌನ್ಶಿಪ್ಗಳು ಮತ್ತು ಲೇಔಟ್ಗಳ ನಿರ್ಮಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಪಶ್ಚಿಮಘಟ್ಟಗಳ ಪರಿಸರ ಸಮತೋಲನಕ್ಕೆ ಕೊಡಗಿನ ಅರಣ್ಯಗಳು ಮತ್ತು ಕಾವೇರಿ ನದಿಯ ಉಗಮಸ್ಥಾನ ಪ್ರಮುಖವಾಗಿವೆ. ಬೆಟ್ಟಗಳನ್ನು ಕೊರೆಯುವುದು, ನೈಸರ್ಗಿಕ ಜಲಮೂಲಗಳನ್ನು ಮುಚ್ಚುವುದು ಮತ್ತು ಕೃಷಿ ಭೂಮಿಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಪರಿವರ್ತಿಸುವುದರಿಂದ ಭವಿಷ್ಯದಲ್ಲಿ ಗಂಭೀರ ಪರಿಸರ ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಸಿದರು.
ಕೊಡಗಿನ ಪರಿಸರ ಸಂರಕ್ಷಣೆಯು ಕಾವೇರಿ ನದಿಯನ್ನು ಅವಲಂಬಿಸಿರುವ ಲಕ್ಷಾಂತರ ಜನರ ಹಿತದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಆದ್ದರಿಂದ ಕೊಡಗಿನ ಭೂಮಿ ಮತ್ತು ಜಲಮೂಲಗಳನ್ನು ರಕ್ಷಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಡವ ನರಮೇಧದ ಐತಿಹಾಸಿಕ ಸ್ಥಳವಾದ ದೇವಟ್ಪರಂಬು, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಅರಮನೆಯಂತಹ ಪರಂಪರೆಯ ತಾಣಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಬೇಕು. ಕೊಡವರ ಆಧ್ಯಾತ್ಮಿಕ ವಾಸಸ್ಥಾನಗಳಾದ ಮಂದ್ಗಳು, ದೇವಬನಗಳು ಮತ್ತು ಇತರ ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಬೇಕು. ತಲಕಾವೇರಿಯನ್ನು ಕೊಡವರ ಪವಿತ್ರ ಯಾತ್ರಾಸ್ಥಳವಾಗಿ ಗುರುತಿಸುವುದರ ಜೊತೆಗೆ, ಕಾವೇರಿ ಜಲಾನಯನ ಪ್ರದೇಶದ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕೊಡವರ ಸಾಂಪ್ರದಾಯಿಕ ಭೂಮಿಯ ಹಕ್ಕುಗಳ ರಕ್ಷಣೆ, ಐತಿಹಾಸಿಕವಾಗಿ ಕಳೆದುಹೋದ ಭೂಮಿಯ ಕುರಿತು ಪರಿಶೀಲನೆ ಹಾಗೂ ಕೊಡವರಿಗೆ ಶಾಸನಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸುವ ಬೇಡಿಕೆಗಳನ್ನೂ ಪ್ರಸ್ತಾಪಿಸಿದರು.
1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಕಾಯ್ದೆಯಡಿ ಕೊಡಗು ಕರ್ನಾಟಕದಲ್ಲಿ ವಿಲೀನಗೊಂಡಿದ್ದು, ಅದಕ್ಕೂ ಮೊದಲು ಕೊಡಗು ಪ್ರತ್ಯೇಕ ರಾಜ್ಯ ಸ್ಥಾನಮಾನ ಹೊಂದಿತ್ತು. ಈ ಬೆಳವಣಿಗೆಗಳು ಕೊಡವರ ರಾಜಕೀಯ ಮತ್ತು ಸಾಂಸ್ಕೃತಿಕ ಗುರುತಿನ ಮೇಲೆ ಪರಿಣಾಮ ಬೀರಿವೆ ಎಂದು ಅವರು ಹೇಳಿದರು.
ಕೊಡವರ ಅಧಿಕೃತ ಹೆಸರನ್ನು ‘ಕೊಡಗರು’ ಬದಲಿಗೆ ‘ಕೊಡವ’ ಎಂದು ಗುರುತಿಸುವ ವಿಚಾರದಲ್ಲಿ ಸಿಎನ್ಸಿ ನಡೆಸಿದ ಕಾನೂನು ಹೋರಾಟವನ್ನು ನಾಚಪ್ಪ ಉಲ್ಲೇಖಿಸಿದರು. ಕರ್ನಾಟಕ ಹೈಕೋರ್ಟ್ನ 2021ರ ಡಿಸೆಂಬರ್ 8ರ ತೀರ್ಪು ಈ ವಿಚಾರದಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕೊಡವ ಗುರುತಿನ ರಕ್ಷಣೆ, ಭಾಷೆಯ ಮಾನ್ಯತೆ, ಭೂಮಿಯ ಹಕ್ಕುಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ನಿರಂತರ ಜಾಗೃತಿ ಅಗತ್ಯವಿದೆ ಎಂದು ಎನ್.ಯು.ನಾಚಪ್ಪ ಹೇಳಿದರು.
ಮಾನವ ಸರಪಳಿಯಲ್ಲಿ ಭಾಗವಹಿಸಿದವರು ಕೊಡವರ ಭೂಮಿ, ನೀರು, ಸಂಸ್ಕೃತಿ, ಪರಂಪರೆ ಮತ್ತು ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ಸಿಎನ್ಸಿ ಹಮ್ಮಿಕೊಂಡಿರುವ ಶಾಂತಿಯುತ ಹೋರಾಟಕ್ಕೆ ಗುರು-ಕಾರೋಣ, ಸೂರ್ಯ-ಚಂದ್ರ, ಭೂಮಿತಾಯಿ, ವನದೇವಿ, ಕಾವೇರಿ ಜಲದೇವತೆ ಮತ್ತು ಭಾರತದ ಸಂವಿಧಾನದ ಹೆಸರಿನಲ್ಲಿ ಬದ್ಧತೆಯ ಪ್ರಮಾಣವಚನ ಸ್ವೀಕರಿಸಿದರು.
ಚಂಗAಡ ಸೂರಜ್ ಸ್ವಾಗತಿಸಿ, ಪೆಮ್ಮುಡಿಯಂಡ ವೇಣು ಅಪ್ಪಣ್ಣ ವಂದಿಸಿದರು. ಸಿಎನ್ಸಿಯ ಮುಂದಿನ ಮಾನವ ಸರಪಳಿ ಕಾರ್ಯಕ್ರಮ ಅಕ್ಟೋಬರ್ 26ರಂದು ನೂರಂಬಡನಾಡಿನ ನಾಪೋಕ್ಲುವಿನಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಕೊಡವ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿದ್ದಂಡ ಉಷಾ ದೇವಮ್ಮ, ಬೊಳ್ಳಚೆಟ್ಟಿರ ಜಯಂತಿ, ಪಳಂಗೇಟಿರ ದೇಚಮ್ಮ, ಚೌರಿರ ಪ್ರಿಯಾ, ಕೊಚ್ಚೇರ ನಿಧಿ, ಚೊಟ್ಟೇರ ಪವಿತ್ರ, ಪಳಂಗೇಟಿರ ರೀಟಾ, ಕುಂಜಿಲAಡ ಗ್ರೇಸಿ, ಬೊಳ್ಳಚೆಟ್ಟಿರ ಸುಂದರಿ, ಪಳಂಗAಡ ರೇಖಾ, ಪುದಿಯೊಕ್ಕಡ ರಮ್ಯ, ಬೊಳ್ಳಚೆಟ್ಟಿರ ಯಮುನಾ, ಬೋಳ್ತಂಡ ರೇಖಾ, ಚಂಗAಡ ಶಿವಾಂಶಿ ಮುತ್ತಮ್ಮ, ನಂದೇಟಿರ ರವಿ ಸುಬ್ಬಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಬಡುವಂಡ ವಿಜಯ, ಚಂಗAಡ ಸೂರಜ್, ಪುಡಿಯೊಕ್ಕಡ ಕಾಶಿ, ಬಿದ್ದಂಡ ಸಂದೀಪ್, ಪುಡಿಯೊಕ್ಕಡ ಪೃಥ್ವಿ, ಮಂಡೇಪAಡ ರಮೇಶ್, ಪುಡಿಯೊಕ್ಕಡ ವಿಪನ್, ಪಳಂಗAಡ ಈಶಾ, ಬೊಳ್ಳಚೆಟ್ಟಿರ ಕುಟ್ಟಯ್ಯ, ಕೋಟೆರ ಮುತ್ತಣ್ಣ, ಪಳಂಗAಡ ಅಪ್ಪಯ್ಯ, ಬೊಳ್ಳಚೆಟ್ಟಿರ ಅಯ್ಯಪ್ಪ, ಬೊಳ್ಳಚೆಟ್ಟಿರ ಪ್ರೇಮ್, ಚಂಗಣಮಕ್ಕಡ ವಿನು, ಅಚ್ಚಕಾಳೆರ ನವೀನ್ ಮೊಣ್ಣಪ್ಪ, ಸಾದೆರ ರಮೇಶ್, ಮುಂಡAಡ ತಿಮ್ಮಯ್ಯ, ಕಂಡ್ರತAಡ ನಂದ, ಪಳಂಗAಡ ಗಣೇಶ್, ಮುಂಡAಡ ಕಾರ್ಯಪ್ಪ, ಬಡುವಂಡ ಸುಬ್ರಮಣಿ, ಮಂಡೇಟಿರ ಗಣೇಶ್, ಚಂಗAಡ ಮಾದಯ್ಯ, ಅಮ್ಮಾಟ್ಟಂಡ ದೇವಯ್ಯ, ಅಮ್ಮಾಟ್ಟಂಡ ಗೋಪಾಲ್, ಮಂಡೇಪAಡ ಮುತ್ತಣ್ಣ, ಅಚ್ಚಕಾಳೆರ ಅಯ್ಯಪ್ಪ, ಮುಂಡAಡ ಪವಿ ಸೋಮಣ್ಣ, ತಿರುಟೆರ ಕಾಶಿ, ಮುಂಡAಡ ವಿಜು, ಕಾಶಿ ನುಚಿಮನಿಯಂಡ, ಮಾದೇಯಂಡ ಹರೀಶ್, ಪಂದAಡ ಕಿರಣ್, ಕೋಟೆರ ಮೇದಪ್ಪ, ಅಮ್ಮಾಟ್ಟಂಡ ಮೇದಪ್ಪ, ಪಳಂಗAಡ ತಮ್ಮಯ್ಯ, ಪಳಂಗAಡ ಭೀಮಯ್ಯ, ವಂಚೀರ ಮುತ್ತಪ್ಪ, ಮಾದೇಯಂಡ ಮುತ್ತಪ್ಪ, ಮುಕ್ಕಾಟಿರ ಕಾವೇರಪ್ಪ, ಕೋಟೆರ ಪೆಮ್ಮಯ್ಯ, ದೇವಂಡಿರ ಧನು, ಬಾರಿಯಂಡ ಸಂಜನ್, ಪೋತಂಡ ರಾಜ, ಕಂಬಿರAಡ ರಾಖಿ ಗಣಪತಿ, ಬಾರಿಯಂಡ ಸುಬ್ರಮಣಿ, ಪಳಂಗಿಯAಡ ಕಾವೇರಪ್ಪ, ಚಿಂದೂಲಿರ ಬೊಳ್ಳಿಯಪ್ಪ, ತಿರುಟೆರ ಮುತ್ತಪ್ಪ, ಪಳಂಗಿಯAಡ ಸುರೇಶ್, ಪಳಂಗAಡ ಹರೀಶ್, ಪಚ್ಚಾರಂಡ ಸುರೇಶ್, ಬಡುವಂಡ ಬೋಪಣ್ಣ, ಚೆಂಗAಡ ಚಾಮಿ ಪಳಂಗಪ್ಪ, ಬಡುವಂಡ ಕುಂಜಪ್ಪ, ಕಂಬಿರAಡ ಯೋಗಿಶ್, ಬೇರೇರ ರಮೇಶ್, ಪಳಂಗAಡ ಪ್ರಕಾಶ್, ಪೊಂಜAಡ ಕಬೀರ್, ತೇಲಪಂಡ ಗುಲ್ಶನ್, ಅರೆಯಡ ಗಿರೀಶ್, ಕಿರಿಯಮಡ ಶೇರಿನ್, ಪಾಲೇಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ ಮತ್ತಿತರರು ಪಾಲ್ಗೊಂಡಿದ್ದರು.

















