ಸುಂಟಿಕೊಪ್ಪ, NEWS DESK ಅ. 22: ಸುಂಟಿಕೊಪ್ಪ ವಾಹನ ಚಾಲಕರ ಸಂಘದ 56ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಆಯುಧಪೂಜಾ ಸಮಾರಂಭದ ವಿವಿಧ ಅಲಂಕಾರ ಸ್ಪರ್ಧೆಗಳು ಸಾರ್ವಜನಿಕರ ಗಮನ ಸೆಳೆದವು. ವಿಶೇಷವಾಗಿ ಮಕ್ಕಳ ಮಂಟಪಗಳು ಮಡಿಕೇರಿ ದಸರಾ ಸಮಾರಂಭವನ್ನು ನೆನಪಿಸುವಂತಿದ್ದು, ದೇವಾನುದೇವತೆಗಳ ನರ್ತನ ಹಾಗೂ ಅಸುರರ ವಧೆಯ ಕಥಾ ಸಂಕಲನಗಳು ಕಲಾತ್ಮಕವಾಗಿ ಮೂಡಿಬಂದವು.
ಈ ಬಾರಿ ನಾಲ್ಕು ಮಕ್ಕಳ ಮಂಟಪಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ತೀವ್ರ ಪೈಪೋಟಿಯ ನಡುವೆ ಟೀಮ್ ವಾರಿಯರ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಟೀಮ್ ಅಗ್ನಿ ಜ್ವಾಲೆ ಸುಂಟಿಕೊಪ್ಪ ಹಾಗೂ ಟೀಮ್ ದೇವಿ ರೋರ್ಕ್ಸ್ಟ್ ತಂಡಗಳು ದ್ವಿತೀಯ ಬಹುಮಾನ ಹಂಚಿಕೊಂಡರೆ, ಟೀಮ್ ಟಿಸಿಎಲ್ ಸುಂಟಿಕೊಪ್ಪ ತಂಡ ತೃತೀಯ ಬಹುಮಾನ ಗಳಿಸಿತು. ಮಕ್ಕಳ ಸೃಜನಶೀಲತೆ ಮತ್ತು ಪ್ರತಿಭೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ವಿವಿಧ ವಿಭಾಗಗಳ ವಿಜೇತರು:
- ಕಚೇರಿ ಮತ್ತು ಸಂಘ-ಸಂಸ್ಥೆಗಳ ಅಲಂಕಾರ: ಪ್ರಥಮ – ಸುಂಟಿಕೊಪ್ಪ ಪೊಲೀಸ್ ಠಾಣೆ; ದ್ವಿತೀಯ – ಚೆಸ್ಕಾಂ ಇಲಾಖೆ; ತೃತೀಯ – ಸುಂಟಿಕೊಪ್ಪ ಗ್ರೇಡ್-1 ಗ್ರಾಮ ಪಂಚಾಯಿತಿ.
- ದೊಡ್ಡ ವಾಹನಗಳ ಅಲಂಕಾರ: ಪ್ರಥಮ – ಹೊಸಕೋಟೆಯ ಕೆಎ 17 ಬಿ 9103 ಲಾರಿ; ದ್ವಿತೀಯ – ಹೊಸಕೋಟೆಯ ಕೆಎ 45 ಎ 3489; ತೃತೀಯ – ಟಿಸಿಎಲ್ ಚೆಂಜರ್, ಸುಂಟಿಕೊಪ್ಪ.
- ಅಂಗಡಿ ಮಳಿಗೆಗಳ ಅಲಂಕಾರ: ಪ್ರಥಮ – ಶ್ರೀಮಾನ್ ಎಂಟರ್ಪ್ರೈಸಸ್; ದ್ವಿತೀಯ – ಸ್ಟುಡೆಂಟ್ ಕಾರ್ನರ್.
- ಚಿಕ್ಕ ವಾಹನಗಳ ಅಲಂಕಾರ: ಪ್ರಥಮ – ಕೆಎ 09 ಎಎ 0912; ದ್ವಿತೀಯ – ಕೆಎ 35 ಎಂ 4128; ತೃತೀಯ – ಕೆಎ 51 ಎಂ 9097.
- ಆಟೋರಿಕ್ಷಾ ಅಲಂಕಾರ: ಪ್ರಥಮ – ಶಿವಮಣಿ.
- ವರ್ಕ್ಶಾಪ್ ಅಲಂಕಾರ: ಪ್ರಥಮ – ಗದೆಹಳ್ಳದ ಪ್ರಭ ವರ್ಕ್ಶಾಪ್ ತಂಡ.
ಸಮಾರಂಭದಲ್ಲಿ ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿ ಮುನೀರ್ ಕಂಬಿಬಾಣೆ, ಖಜಾಂಜಿ ಅಸೀಸ್ ಕೊಡರಗರಹಳ್ಳಿ, ಉಪಾಧ್ಯಕ್ಷರಾದ ಅಂಬೆಕಲ್ ಚಂದ್ರು ಮತ್ತು ಕೃಷ್ಣಪ್ಪ ಬಿ.ಎ., ಸಹಕಾರ್ಯದರ್ಶಿ ಪಟ್ಟೆಮನೆ ಸುನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ಲಕುಟ್ಟಿ, ಸಲಹಾ ಸಮಿತಿ ಸದಸ್ಯರಾದ ಎಸ್.ಯು. ಮಮ್ಮದ್, ಜೈನುದ್ದೀನ್, ದೇವಯ್ಯ ಮತ್ತು ಇಸ್ಮಾಯಿಲ್ (ಕಾಕು) ಸೇರಿದಂತೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

















