Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಎಸ್ ಎಸ್ ಆಸ್ಪತ್ರೆ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಎಸ್ ಎಸ್ ಆಸ್ಪತ್ರೆ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ನವೆಂಬರ್ 24, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ನ.24 NEWS DESK : ಮಕ್ಕಳಲ್ಲಿ ಸೃಜನಶೀಲತೆ, ಕಲಾಸಕ್ತಿ ಹಾಗೂ ಪರಿಸರ ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ಮಡಿಕೇರಿಯ ಮಹದೇವಪೇಟೆಯ ಎಸ್ ಎಸ್ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ 4ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
*ಮೊದಲ ವಿಭಾಗದ ಸ್ಪರ್ಧೆ* ಎಲ್‍ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಯ ಮಕ್ಕಳಿಗೆ ‘ನಾನು ಮತ್ತು ನನ್ನ ತಾಯಿ’ ಎಂಬ ವಿಷಯ ನೀಡಲಾಗಿತ್ತು.
*ವಿಜೇತರು*
ಪ್ರಥಮ ಬಹುಮಾನ : ಜಾಗೃತಿ ಎ. ಒಂದನೇ ತರಗತಿ, ಕೊಡಗು ವಿದ್ಯಾಲಯ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.2,000 ನಗದು
ದ್ವಿತೀಯ ಬಹುಮಾನ : ಟಿ. ಧ್ರುಪದ್ – ಒಂದನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.1,500 ನಗದು
ತೃತೀಯ ಬಹುಮಾನ : ಗುನಾಲಿ ಎ.ಎ. – ಯುಕೆಜಿ, ಯೂರೋಕಿಡ್ಸ್, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.1,000 ನಗದು
*ಎರಡನೇ ವಿಭಾಗದ ಸ್ಪರ್ಧೆ* ಎರಡನೇ ತರಗತಿಯಿಂದ ಆರನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ‘ಮೀಸಲು ಅರಣ್ಯ’ ಎಂಬ ವಿಷಯ ನೀಡಲಾಗಿತ್ತು.
*ವಿಜೇತರು*
ಪ್ರಥಮ ಬಹುಮಾನ : ರಚಿತ ವೈ.ಎಚ್. – ಆರನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.3,500 ನಗದು
ದ್ವಿತೀಯ ಬಹುಮಾನ : ಸಫಾ ಫಾತಿಮಾ – ಆರನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.3,000 ನಗದು
ತೃತೀಯ ಬಹುಮಾನ : ಬೊಳ್ಳಮ್ಮ ಎ.ಎ. ಆರನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.2,500 ನಗದು
*ಮೂರನೇ ವಿಭಾಗದ ಸ್ಪರ್ಧೆ* ಏಳನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಜೀವನದಲ್ಲಿ ಸಮಯದ ಪ್ರಾಮುಖ್ಯತೆ’ ಎಂಬ ವಿಷಯ ನೀಡಲಾಗಿತ್ತು.
*ವಿಜೇತರು*
ಪ್ರಥಮ ಬಹುಮಾನ : ಅಪೇಕ್ಷಾ ರೈ – ಒಂಬತ್ತನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.5,000 ನಗದು
ದ್ವಿತೀಯ ಬಹುಮಾನ : ಸಚಿನ್ ಪಿ.ಎನ್. – ಒಂಬತ್ತನೇ ತರಗತಿ, ಸೇಂಟ್ ಮೈಕೆಲ್ಸ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.4,500 ನಗದು

ತೃತೀಯ ಬಹುಮಾನ : ತೃಪ್ತಾ ಜೆ.ಜೆ. ಒಂಬತ್ತನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.4,000 ನಗದು
*ಕಲೆ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ*
ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಶ್ರೀ ಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲೆ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಚಿತ್ರಕಲೆಯ ಮೂಲಕ ಮಕ್ಕಳು ತಮ್ಮ ಕಲ್ಪನೆ, ಭಾವನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯವಾಗುತ್ತದೆ ಎಂದರು.
ಇಂತಹ ಸ್ಪರ್ಧೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದ್ದು, ಕಲೆಯ ಮೂಲಕ ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಕಲೆ ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಾಧನವಾಗಬೇಕು ಎಂದು ಕರೆ ನೀಡಿದರು.
ಎಸ್.ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶಿಲ್ಪಾ ಸತೀಶ್ ಮಾತನಾಡಿ, ಮಕ್ಕಳಲ್ಲಿ ಕಲಾಸಕ್ತಿಯನ್ನು ಉತ್ತೇಜಿಸುವುದು ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಚಿತ್ರಕಲೆ ಮಕ್ಕಳ ಸೃಜನಶೀಲತೆ, ಚಿಂತನೆ ಮತ್ತು ಅಭಿವ್ಯಕ್ತಿ ಸಾಮಥ್ರ್ಯವನ್ನು ವೃದ್ಧಿಸುತ್ತದೆ. ಕಲೆ ಮತ್ತು ಸಮಾಜ ಸೇವೆ ಪರಸ್ಪರ ಸಂಬಂಧ ಹೊಂದಿದ್ದು, ಕಲೆಯ ಮೂಲಕ ಪರಿಸರ ಸಂರಕ್ಷಣೆ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಜನರಿಗೆ ತಲುಪಿಸಬಹುದು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಲಿವೆ ಎಂದು ತಿಳಿಸಿದರು. ಡಾ.ಸತೀಶ್ ಮಾತನಾಡಿ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಗೆ ಪ್ರೋತ್ಸಾಹ ನೀಡುವ ಜೊತೆಗೆ ಪರಿಸರ ಸಂರಕ್ಷಣೆ, ಕುಟುಂಬದ ಮಹತ್ವ ಹಾಗೂ ಸಮಯದ ಮೌಲ್ಯದ ಕುರಿತು ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದು, ಇದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಸದಸ್ಯರಾದ ಎಚ್.ಎಂ.ನಂದಕುಮಾರ್, ಮಹೇಶ್ ಜೈನಿ, ಸವಿತಾ ರಾಕೇಶ್, ಆಡಿಟರ್ ಹನೀಫ್ ಮತ್ತಿತರರು ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ದಂಬೆಕೋಡಿ ಮೃಣಾಲಿನಿ ಚಿನ್ನಪ್ಪ ಕಾರ್ಯನಿರ್ವಹಿಸಿದರು. ಸಾಮಾಜಿಕ ಸೇವೆಗಾಗಿ ಖಲೀಲ್ ಹಾಗೂ ಸಮೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಿ.ಸಿ.ತೇಜಸ್ ನಿರೂಪಿಸಿ, ಡಾ.ಸತೀಶ್ ಸ್ವಾಗತಿಸಿದರು, ಅಖಿಲ್ ಪ್ರಾರ್ಥಿಸಿದರು. ಡಾ.ಶಿಲ್ಪಾ ವಂದಿಸಿದರು, ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ದೇವರಕೊಲ್ಲಿ : ಕಾರು ಕಂದಕಕ್ಕೆ ಉರುಳಿ ಯುವಕ ಸಾವು : ಇಬ್ಬರಿಗೆ ಗಾಯ

ನವೆಂಬರ್ 24, 2026

ನ.26 ರಂದು ಸಿಎನ್‍ಸಿಯಿಂದ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ : ಡಾ.ಎಂ.ಎ.ಕಲಾಂ, ನ್ಯಾಯವಾದಿ ಕಿರಣ್ ನಾರಾಯಣ್, ಡಾ.ಮಾತಂಡ ಅಯ್ಯಪ್ಪ, ಪ್ರೊ.ಪಿ.ಎಚ್.ಮೊಹಮ್ಮದ್ ಭಾಗಿ

ನವೆಂಬರ್ 24, 2026

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಭೆ : ಕ್ರಿಸ್‌ಮಸ್ ಗೀತ ಗಾಯನ ಸ್ಪರ್ಧೆಯ ಕುರಿತು ಚರ್ಚೆ : ಮಡಿಕೇರಿ ಅಧ್ಯಕ್ಷರಾಗಿ ಪಿಯೂಷ್ ಪೆರೆರಾ ಆಯ್ಕೆ

ನವೆಂಬರ್ 24, 2026

ನ.26 ರಂದು ಸಿಎನ್‍ಸಿಯಿಂದ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ : ಡಾ.ಎಂ.ಎ.ಕಲಾಂ, ನ್ಯಾಯವಾದಿ ಕಿರಣ್ ನಾರಾಯಣ್, ಡಾ.ಮಾತಂಡ ಅಯ್ಯಪ್ಪ, ಪ್ರೊ.ಪಿ.ಎಚ್.ಮೊಹಮ್ಮದ್ ಭಾಗಿ

ನವೆಂಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ನ.23 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇಯನ್ನು ನ.26ರಂದು…

ಎಸ್ ಎಸ್ ಆಸ್ಪತ್ರೆ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ನವೆಂಬರ್ 24, 2026

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಭೆ : ಕ್ರಿಸ್‌ಮಸ್ ಗೀತ ಗಾಯನ ಸ್ಪರ್ಧೆಯ ಕುರಿತು ಚರ್ಚೆ : ಮಡಿಕೇರಿ ಅಧ್ಯಕ್ಷರಾಗಿ ಪಿಯೂಷ್ ಪೆರೆರಾ ಆಯ್ಕೆ

ನವೆಂಬರ್ 24, 2026

ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವ : ಕರ್ನಾಟಕ ರಾಜ್ಯ ಎಕ್ಸಲೆನ್ಸ್ ಅವಾರ್ಡ್ ಪ್ರದಾನ

ನವೆಂಬರ್ 24, 2026

ನ.29ರಂದು ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ : ಕಾಲೇಜ್ ನ ಅಭಿವೃದ್ಧಿಗೆ ಕೈಜೋಡಿಸಲು ಮನವಿ

ನವೆಂಬರ್ 24, 2026

ಹಿಮವನ ಪ್ರತಿಭಾ ಸಂಗಮ ಕನ್ನಡ ಹಬ್ಬಕ್ಕೆ ಉತ್ಸಾಹದ ಸ್ಪಂದನೆ : ಮಕ್ಕಳಿಗೆ ಉತ್ತಮ ಮೌಲ್ಯ ಕಲಿಸಬೇಕು : ಕೊಟ್ಟುಕತ್ತಿರ ಯಶೋದಾ ಪ್ರಕಾಶ್

ನವೆಂಬರ್ 23, 2026

ಯಾಕುಬ್ ಅವರಿಗೆ ಆದ ಅನ್ಯಾಯ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಅಸ್ತಿತ್ವ ಮತ್ತು ಸ್ವಾಭಿಮಾನದ ಪ್ರಶ್ನೆ : ನಿಷ್ಠಾವಂತ ಮುಸ್ಲಿಂ ನಾಯಕರನ್ನು ಕಡೆಗಣಿಸುವ ರಾಜಕೀಯ ಸಂಸ್ಕೃತಿಗೆ ಅಂತ್ಯ ಯಾವಾಗ? : ಎಂ.ವೈ. ಅಬ್ದುಲ್ ಹಫೀಲ್ ಸಾದಿ ಕೊಳಕೇರಿ ಅಸಮಾಧಾನ

ನವೆಂಬರ್ 23, 2026

ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಯೋಜನೆಯಿಂದ ರೂ. 2 ಲಕ್ಷ ನೆರವು : ಚೆಕ್ ವಿತರಣೆ

ನವೆಂಬರ್ 23, 2026

ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮ ಬಗ್ಗೆ ಎಚ್ಚರಿಕೆ ವಹಿಸಿ: ಮಾರುತಿ ಎಸ್.ಬಾಗಡೆ

ನವೆಂಬರ್ 23, 2026

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

ನವೆಂಬರ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.