ಲೇಖಕ: admin

ಕುಶಾಲನಗರ ಜ.26 :  ಕುಶಾಲನಗರದ ದಾರುಲ್ ಉಲೂಂ‌ ಅರೆಬಿಕ್ ಮದ್ರಸದಲ್ಲಿ 74ನೇ  ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ  ಆಚರಿಸಲಾಯಿತು. ದಾರುಲ್ ಉಲೂಂ ಅರೆಬಿಕ್ ಮದ್ರಸ, ಹಿಲಾಲ್ ಮಸೀದಿ ಹಾಗೂ ಸಮಸ್ತ ಕೇಂದ್ರೀಯ ಸುನ್ನಿ ಬಾಲ್ ವೇದಿ ಇವುಗಳ ಸಂಯುಕ್ತಾಶ್ರಯದಲ್ಲಿ  ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ “ಬಾಲ ಇಂಡಿಯಾ” ಕಾರ್ಯಕ್ರಮವನ್ನು ಹಿಲಾಲ್‌ ಮಸೀದಿಯ ಧರ್ಮಗುರು  ಸೂಫಿ ದಾರಿಮಿರವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,  ಸಂವಿಧಾನ ಅರಿಯುವುದರ ಜೊತೆಗೆ ಸಂವಿಧಾನ ರಚನಾಕಾರರನ್ನು ಸ್ಮರಿಸುವ ಕೆಲಸ ನಮ್ಮಿಂದಾಗಬೇಕು ಎಂದರು. ದಾರುಲ್ ಉಲೂಂ ಹಾಗೂ ಫಾಳಿಲಾ ಶರೀಅತ್ ಕಾಲೇಜಿನ ಪ್ರಾಂಶುಪಾಲ  ತಮ್ಲೀಕ್ ದಾರಿಮಿ ಮಾತನಾಡಿ, ದೇಶದ ಸಂವಿಧಾನದ ಬಗ್ಗೆ, ಶ್ರಮಿಸಿದ ನೇತಾರರು ಹಾಗೂ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು. ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿ, ದೇಶದ ಸಂವಿಧಾನ ವಿಶ್ವದಲ್ಲೇ ಅತಿದೊಡ್ಡ ಸಂವಿಧಾನವಾಗಿದ್ದು, ಇದರ ಆಶಯ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಲಾಲ್ ಮಸೀದಿ‌ ಅಧ್ಯಕ್ಷ  ಎಂ.ಎಂ.ಹುಸೇನ್  ಧ್ವಜಾರೋಹಣ  ನೆರವೇರಿಸಿದರು. ಹಿಲಾಲ್…

Read More

ಮಡಿಕೇರಿ ಜ.26 :  ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ವಿಶ್ವಮಾನವ ಉದ್ಯಾನವನದಲ್ಲಿ ವೇದಿಕೆಯ ಅಧ್ಯಕ್ಷ  ರವಿ ಗೌಡ ಪುತ್ತಳಿಕೆಗೆ ಮಾಲಾರ್ಪಣೆ ಮಾಡಿದರು.  ವಿರಾಜಪೇಟೆ ಅಧ್ಯಕ್ಷ  ವಸಂತ್  ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷ  ನಾಗೇಶ್,  ಉಪ ಕಾರ್ಯದರ್ಶಿ  ಅಕ್ಷಿತ್, ಮಡಿಕೇರಿ ನಗರ ಅಧ್ಯಕ್ಷ  ಭರತ್ , ಮಹಿಳಾ ಘಟಕದ ಕಾರ್ಯದರ್ಶಿ  ಪೂರ್ಣಿಮಾ, ನಿರ್ದೇಶಕರಾದ ಲಿಲ್ಲಿಗೌಡ ಸದಸ್ಯರುಗಳಾದ ಆಕಾಶ್, ಕುಮಾರ್, ಪುನೀತ್, ಸತೀಶ್ ಪೈ, ಉದಯ್ ಕುಮಾರ್ ಹಾಗೂ ಸಮಾಜ ಸೇವಕರಾದ ಜಾನ್ಸನ್ ಪ್ರವೀಣ್ ಹಾಗೂ ಇನ್ನು ಹಲವು ಸದಸ್ಯರು ಪಾಲ್ಗೊಂಡಿದ್ದರು. ವೇದಿಕೆಯ ತಾಲೂಕು ಕಾರ್ಯದರ್ಶಿ ಸತೀಶ್ ಸ್ವಾಗತಿಸಿ,  ಜಿಲ್ಲಾ ಕಾರ್ಯದರ್ಶಿ  ಮೀನಾಜ್ ಪ್ರವೀಣ್  ನೆರೆದಿದ್ದವರನ್ನು ವಂದಿಸಿದರು.

Read More

ಸೋಮವಾರಪೇಟೆ ಜ.26 : ಶನಿವಾರಸಂತೆ ಸಮೀಪದ ಚಂಗಡಹಳ್ಳಿ ಮಠದ ಜೀರ್ಣೋದ್ಧಾರಕ್ಕಾಗಿ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಮಿತಿಯ ಸಂಚಾಲಕ ಎಂ.ಎಂ.ಹಾಲಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರಾಗಿ ಎಚ್.ಬಿ.ರೇಣುಕಾ, ಆಡಳಿತ ಮಂಡಳಿ ಸದಸ್ಯರಾಗಿ ರುದ್ರೇಶ್, ಪ್ರಸಾದ್, ತೀರ್ಥಾಂಬಿಕೆ, ರಾಜಶೇಖರ್ ಸೇರಿದಂತೆ 17 ಮಂದಿ ಸಮಿತಿಯಲ್ಲಿದ್ದಾರೆ ಎಂದು ಹೇಳಿದರು. ಮಠದ ಅಭಿವೃದ್ಧಿಯನ್ನು ಕಡೆಗಣಿಸಿದ ಬಗ್ಗೆ ಸ್ಥಳೀಯ ಭಕ್ತರು, ಚಿತ್ರದುರ್ಗಾ ಮುರುಘಾಮಠದ ಆಡಳಿತಾಧಿಕಾರಿ ವಸ್ತ್ರದ್ ಅವರಿಗೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಮೂವರು ವೀಕ್ಷಕರನ್ನು ನೇಮಕ ಮಾಡಿದ್ದರು. ವೀಕ್ಷಕರಾದ ಚಂದ್ರಶೇಖರ್, ಮಲ್ಲಿಕಾರ್ಜುನ, ಅಂಜನಪ್ಪ ಅವರುಗಳು ಮಠಕ್ಕೆ ಆಗಮಿಸಿ, ಭಕ್ತರ ಅಭಿಪ್ರಾಯಗಳನ್ನು ಕಲೆ ಹಾಕಿದರು. ನಂತರ ಮಾ.31ರ ಒಳಗೆ ಮಠಕ್ಕೆ ಸ್ವಾಮೀಜಿಯೊಬ್ಬರನ್ನು ನೇಮಿಸುವ ಭರವಸೆ ನೀಡಿದ್ದಾರೆ. ಹಾಗೂ ಮಠದ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಸೋಮವಾರಪೇಟೆ ತಾಲ್ಲೂಕಿನ ಬಾಚಳ್ಳಿ, ಮಾದಾಪುರ, ಪಿರಿಯಾಪಟ್ಟಣದಲ್ಲಿ ಮಠಗಳಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಯಲಿದೆ ಎಂದು ಹಿತರಕ್ಷಣ ಸಮಿತಿಯ ಕಾನೂನು…

Read More

ಮಡಿಕೇರಿ ಜ.26 :  ಕೊಡವ ಸಾಂಪ್ರದಾಯಿಕ ‘ಉಮ್ಮತ್ತಾಟ್’ ಕಲಾ ಪ್ರದರ್ಶನವನ್ನು ದೇಶ, ವಿದೇಶಗಳಲ್ಲಿ ಪಸರಿಸುವಲ್ಲಿ ಶ್ರಮಿಸಿ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ರಾಣಿ ಮಾಚಯ್ಯ ಅವರನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಶಾಲು, ಫಲ ತಾಂಬೂಲ ನೀಡಿ ಗೌರವಿಸಿದರು. ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಫ್ರ್ರಾಂಚೈಸಿಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜೀವ ವೈವಿಧ್ಯ ಮಂಡಳಿ ರಾಜ್ಯ ಅಧ್ಯಕ್ಷ  ನಾಪಂಡ ರವಿ ಕಾಳಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ  ಕೇಶವ ಕಾಮತ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಇತರರು ಇದ್ದರು.

Read More

ಮಡಿಕೇರಿ ಜ.26 : ಜಿಲ್ಲಾಡಳಿತ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ಧ್ವಜಾರೋಹಣ ನೆರವೇರಿಸಿ, ಪಥಸಂಚಲನವನ್ನು ವೀಕ್ಷಿಸಿ ಗೌರವ ವಂದನೆಯನ್ನು ಸ್ವೀಕರಿಸಿದರು. ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ  ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ,  ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ  ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ, ಜಿ.ಪಂ. ಆಡಳಿತಾಧಿಕಾರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಡಾ.ಆಕಾಶ್ ಎಸ್. ಇತರರು  ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ.ನಾಗೇಶ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಅವರನ್ನು‌ ಗೌರವಪೂರ್ವಕವಾಗಿ ಗಣರಾಜ್ಯೋತ್ಸವ  ಸನ್ಮಾನಿಸಿದರು. ಈ ಸಂದರ್ಭ ಜಿಲ್ಲಾ ಪೊಲೀಸ್ ಇಲಾಖೆ, ಎನ್‍ಸಿಸಿ, ಗೃಹ ರಕ್ಷಕ ದಳದಿಂದ ನಡೆದ ಪಥಸಂಚಲನ ಗಮನ ಸೆಳೆಯಿತು.

Read More

ಮಡಿಕೇರಿ ಜ.25 : ಯುವ ಸಮೂಹಕ್ಕೆ ಕೊಡವ ಸಂಸ್ಕೃತಿಯನ್ನು ಕರಗತ ಮಾಡಿಕೊಡುವ ಮೂಲಕ ಕೊಡಗಿನ ಕಲೆ, ಆಚಾರ-ವಿಚಾರಗಳು ದೇಶ, ವಿದೇಶಗಳಲ್ಲಿ ಪರಿಚಯವಾಗುವಂತೆ ಮಾಡಲು ಸಾಕಷ್ಟು ಶ್ರಮವಹಿಸಿದ ಹಿರಿಯ ಕಲಾವಿದೆ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ ಅವರಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೊಡವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ರಾಣಿಮಾಚಯ್ಯ ಅವರ ಕೊಡುಗೆ ಅಪಾರವಾಗಿದೆ. ಕೊಡಗಿನ ಜಾನಪದ ಉಮ್ಮತ್ತಾಟ್ ಕಲೆ ಉಳಿವಿಗಾಗಿ ತಂಡ ಮಾಡಿಕೊಂಡು ದೇಶ ವಿದೇಶಗಳಿಗೆ ತೆರಳಿ ಜಿಲ್ಲೆಯ ಸಂಸ್ಕೃತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಇದರಿಂದ ಕೊಡವ ಸಂಸ್ಕೃತಿ ಈ ನೆಲದ ಗಡಿ ದಾಟಿ ವಿದೇಶಗಳಲ್ಲಿಯೂ ಪರಿಚಯಿಸಲ್ಪಟ್ಟಿದೆ. ಕೊಡಗಿನ ಜಾನಪದ ಕಲೆಗಳನ್ನು ಯುವಜನತೆಗೆ ಯಶಸ್ವಿಯಾಗಿ ಪರಿಚಯಿಸುವ ಕಾಯಕದಲ್ಲಿ ತೊಡಗಿದವರಲ್ಲಿ ಮೊದಲ ಹೆಸರು ರಾಣಿ ಮಾಚಯ್ಯ ಅವರಿಗೆ ಸಲ್ಲುತ್ತದೆ. ಪ್ರತಿಷ್ಠಿತ ಪದ್ಮಶ್ರೀ ದೊರೆತ್ತಿರುವ ಬಗ್ಗೆ ರಾಣಿ ಮಾಚಯ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.

Read More

ಮಡಿಕೇರಿ ಜ.25 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲ ಬ್ಯಾಚಿನ ವೈದ್ಯಕೀಯ ಮೂವರು ಪದವೀಧರ ವಿದ್ಯಾರ್ಥಿಗಳು ಭಾರತೀಯ ಸೇನೆಯ ಜೊತೆಗೆ ಅವಿನಾಭಾವ ಸಂಬಂಧವಿರುವ ಕೊಡಗಿನ ಜಿಲ್ಲೆಯ ಜನರು ಹೆಮ್ಮೆ ಪಡುವಂತಹಾ ಸಾಧನೆಯನ್ನು ಮಾಡಿದ್ದಾರೆ. ಭಾರತೀಯ ಸೇನೆಯ ವೈದ್ಯಕೀಯ ವಿಭಾಗವಾದ ಆರ್ಮಿ ಮೆಡಿಕಲ್ ಕೋರ್ ವಿಭಾಗಕ್ಕೆ ಈ ಬಾರಿ‌ ಆಯ್ಕೆಯಾದ ಸುಮಾರು ಮುನ್ನೂರು ವೈದ್ಯರಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಈ ಮೂವರು ವೈದ್ಯರು ಸೇರಿದ್ದಾರೆ. ಡಾ ವೇದಾಂತ್ ಡಿ, ಡಾ ತಿಲಕ್ ನಿಥಿ ವೈ ಟಿ ಮತ್ತು ಡಾ ಸುಹಾಸ್ ಎಸ್ ಕುಮಾರ್ ಅವರಿಗೆ ಕ್ರಮವಾಗಿ ಮಿಲಿಟರಿ ಹಾಸ್ಪಿಟಲ್ ಕಿರ್ಕಿ, ಬೇಸ್ ಹಾಸ್ಪಿಟಲ್ ಗುವಾಹಾಟಿ ಮತ್ತು ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಬೆಂಗಳೂರಿಗೆ ವರದಿ ಮಾಡಿಕೊಳ್ಳುವ ಆದೇಶ ಪತ್ರಗಳನ್ನು ಪಡೆದಿದ್ದಾರೆ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಸೇನೆಯ   ವೈದ್ಯಕೀಯ ಪರೀಕ್ಷೆಗಳಲ್ಲಿ ತೇರ್ಗಡೆಯಾದ  ವೈದ್ಯರನ್ನು  ಭಾರತೀಯ ಸೇನೆಯಲ್ಲಿ‌ ಕ್ಯಾಪ್ಟನ್ ಹುದ್ದೆಗೆ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಅವರು ತಮಗೆ ನಿಗದಿಪಡಿಸಿದ ಸೇನೆಯ ವೈದ್ಯಕೀಯ ಸಂಸ್ಥೆಗೆ…

Read More

ಶನಿವಾರಸಂತೆ:ಜ25:-ಜಾತ್ರೋತ್ಸವಗಳು ಧರ್ಮ, ಜಾತಿ ಜನಾಂಗಗಳ ಬೇದಭಾವ ಇಲ್ಲದ ಸಾಮೂಹಿಕ ಸಮ್ಮೀಲನದ ಕೇಂದ್ರ ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಎಸ್.ಪರಶಿವಮೂರ್ತಿ ಅಭಿಪ್ರಾಯಪಟ್ಟರು. ಅವರು ಗುಡುಗಳಲೆ ಜಾತ್ರಾ ಮೈದಾನದಲ್ಲಿ 79ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರು ಜಾತ್ರೆಯ ಉದ್ಘಾಟನೆ ಮತ್ತು ತುಮಕೂರು ಸಿದ್ದಗಂಗ ಮಠಾದೀಶ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ 4ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ದಾಸೋಹ ಕಾರ್ಯಕ್ರಮದಲ್ಲಿ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದ್ದು ರೈತರು ಟ್ರಾಕ್ಟರ್, ಟಿಲ್ಲರ್ ಇತರೆ ಯಂತ್ರೋಪಕರಣಗಳ ಮೂಲಕ ಕೃಷಿ ಮಾಡುತ್ತಿದ್ದು ಜಾನುವಾರುಗಳ ಸಾಕಾಣಿಕೆ ಮಾಡುತ್ತಿಲ್ಲ ಎಂದ ಅವರು ಕಳೆದ 2 ವರ್ಷ ಕೋವಿಡ್ ಇದ್ದ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆ ನಡೆಸಿರಲಿಲ್ಲ ಇದೀಗ ಜಾತ್ರಾ ಸಮೀತಿಯವರು ಮತ್ತೆ ಜಾನುವಾರುಗಳ ಜಾತ್ರೆ ನಡೆಸುತ್ತಿರುವುದು ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ-ವೈಜ್ಞಾನಿಕ ಭರಾಟೆಯಲ್ಲಿ ರೈತರು ಜಾನುವಾರುಗಳನ್ನು ಸಾಕುವುದನ್ನು ಕಡಿಮೆ ಮಾಡಿದ್ದಾರೆ 78 ವರ್ಷಗಳನ್ನು ಹಿನ್ನೆಲೆಯುಳ್ಳ ರಾಜ್ಯದಲ್ಲೆ ಹೆಸರುಗಳಿಸಿದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ…

Read More

ಮಡಿಕೇರಿ ಜ.25 : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವ್ಯವಹಾರ ಕ್ಷೇತ್ರ ವಿಸ್ತರಿಸಿಕೊಳ್ಳಲು ಅನುಕೂಲವಾಗುವಂತೆ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರಿಂದ ಪೆಟ್ರೋಲಿಯಂ ಉತ್ಪನ್ನ ಮಾರಾಟ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಿ ಅವುಗಳನ್ನು ಆರ್ಥಿಕವಾಗಿ ಶಕ್ತಿಯುತವಾಗಿ ಮಾಡುವುದು ಮತ್ತು ಸಂಘದ ಮುಖಾಂತರ ಗ್ರಾಮೀಣ ಜನತೆಯ ಸಮಸ್ಯೆ ಬಗೆಹರಿಸುವ ಆಶಯವನ್ನು ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ಹೊಂದಿದ್ದಾರೆ ಎಂದು ಹೇಳಿದರು. ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪದ ತಂತ್ರಾಂಶ ಅಳವಡಿಸಲಾಗುತ್ತಿದೆ. ಇದರಿಂದ ಸಾಲ ವಿತರಣೆ ಬಗ್ಗೆ ನಿಗಾ ವಹಿಸಲು ಅನುಕೂಲವಾಗಲಿದೆ. 25 ಲಕ್ಷ ಹಾಲು ಒಕ್ಕೂಟಗಳಿದ್ದು, ಪ್ರತಿ ಗ್ರಾಮಕ್ಕೊಂದು ಹಾಲು ಒಕ್ಕೂಟ ಸ್ಥಾಪನೆ ಮಾಡಬೇಂಬ ಉದ್ದೇಶವನ್ನು ಅಮಿತ್ ಶಾ ಅವರು ಹೊಂದಿದ್ದಾರೆ. ದೇಶದ ಎಲ್ಲಾ ಪ್ರಾಥಮಿಕ…

Read More

ಮಡಿಕೇರಿ ಜ.25 : ಭಾರತದ ಮಹಾನ್ ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆ ಹಾಗೂ ನೇತಾಜಿ ಯುವಕ ಹಾಗೂ ಯುವತಿ ಮಂಡಲದ 31ನೇ ವಾರ್ಷಿಕೋತ್ಸವವು ತಾಳತ್ತಮನೆಯಲ್ಲಿ ಸಂಭ್ರಮದಿಂದ ಆಚರಿಯಲಾಯಿತು. ನೇತಾಜಿ ಯುವಕ ಹಾಗೂ ಯುವತಿ ಮಂಡಲಿ, ಮಡಿಕೇರಿ ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಮತ್ತು ಮಡಿಕೇರಿ ತಾಲೂಕು ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಾಳತ್ತಮನೆಯ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಕಾಟಕೇರಿಯ “ಭಗವತಿ ಕಾಫಿ ಲಿಂಕ್ಸ್ ನ ಮಾಲಿಕ ಬಿ.ಎಸ್.ಅಶ್ವಥ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಗಣ್ಯರು ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಸದಸ್ಯ ಹಾಗೂ ನೇತಾಜಿ ಯುವಕ ಸಂಘದ ಅಧ್ಯಕ್ಷ ಪರ್ಲಕೋಟಿ ಜೀವನ್ ಸಂಘದ ಧ್ವಜಾರೋಹಣವನ್ನು ನೇರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯೆ ಬಿ.ಎಸ್.ನವೀನ, ಯುವತಿ ಮಂಡಳಿ ಅಧ್ಯಕ್ಷರಾದ…

Read More